2023ರ ಮೊದಲ 6 ತಿಂಗಳಲ್ಲಿ 100 ಕೋಟಿ ಕ್ಲಬ್ ಸೇರಿದ್ದು ಈ 16 ಚಿತ್ರಗಳು ಮಾತ್ರ; ಕನ್ನಡದ ಕಥೆಯೇನು?

2022ರಲ್ಲಿ ಭರ್ಜರಿ ಗಳಿಕೆಯನ್ನು ಮಾಡುವುದರ ಮೂಲಕ ಚಿನ್ನದ ಬೆಳೆಯನ್ನು ಬೆಳೆದಿದ್ದ ಭಾರತದ ವಿವಿಧ ಚಿತ್ರರಂಗಗಳು ಈ ವರ್ಷ ಕಳೆದ ವರ್ಷದಷ್ಟು ಅಲ್ಲದಿದ್ದರೂ ಸಾಧಾರಣಕ್ಕಿಂತ ಉತ್ತಮ ಎನಿಸುವಂತಹ ಕಲೆಕ್ಷನ್ ಅನ್ನು ಮಾಡಿವೆ.

ಇನ್ನು ಕಳೆದ ವರ್ಷ ಮಕಾಡೆ ಮಲಗಿದ್ದ ಹಿಂದಿ ಚಿತ್ರರಂಗ ಈ ವರ್ಷ ಗರಿಗೆದರಿದ್ದು ಸಾವಿರ ಕೋಟಿ ಗಳಿಕೆಯ ಚಿತ್ರವನ್ನೂ ಸಹ ಹೊಂದಿದೆ. ಅತ್ತ ತೆಲುಗು ಹಾಗೂ ತಮಿಳು ಚಿತ್ರರಂಗಗಳಲ್ಲಿಯೂ ಸಹ ಹಲವಾರು ಹಿಟ್ ಚಿತ್ರಗಳು ಬಂದಿವೆ. ಇನ್ನು ಮಲಯಾಳಂ ಚಿತ್ರರಂಗದಲ್ಲಿಯೂ ಸಹ ಒಳ್ಳೊಳ್ಳೆಯ ಚಿತ್ರಗಳು ತೆರೆಗೆ ಬಂದಿದ್ದು ಈ ವರ್ಷದ ಮೊದಲಾರ್ಧದಲ್ಲಿ ನೂರು ಕೋಟಿ ಕ್ಲಬ್‌ನ ಚಿತ್ರ ನೀಡುವಲ್ಲಿ ಈ ಚಿತ್ರರಂಗ ಸಹ ಯಶಸ್ವಿಯಾಗಿದೆ.

16 Indian movies which have entered 100 crore club in the first half of 2023

ಹೀಗೆ ಎಲ್ಲಾ ಚಿತ್ರರಂಗಗಳೂ ಸಹ ನೂರು ಕೋಟಿ ಗಳಿಕೆ ಮಾಡಿದ ಚಿತ್ರಗಳನ್ನು ಈ ವರ್ಷದ ಮೊದಲಾರ್ಧದಲ್ಲಿ ನೀಡಿದ್ದು ಕನ್ನಡ ಚಿತ್ರರಂಗ ಮಾತ್ರ ಈ ಸಾಧನೆ ಮಾಡುವಲ್ಲಿ ವಿಫಲವಾಗಿದೆ. ಹಾಗಿದ್ದರೆ ಈ ವರ್ಷದ ಮೊದಲಾರ್ಧದಲ್ಲಿ 100 ಕೋಟಿ ಗಳಿಕೆ ಮಾಡಿದ ಭಾರತದ ಆ 16 ಚಿತ್ರಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ..

1. ಬಾಲಿವುಡ್ ಕಿಂಗ್ ಎಂದೇ ಖ್ಯಾತಿಯನ್ನು ಪಡೆದಿರುವ ಶಾರುಖ್ ಖಾನ್ ನಟನೆಯ ಚಿತ್ರ ಪಠಾಣ್ ಈ ವರ್ಷದ ಜನವರಿ ತಿಂಗಳಿನಲ್ಲಿ ಬಿಡುಗಡೆಗೊಂಡು ಮೊದಲ ದಿನವೇ ನೂರು ಕೋಟಿ ಗಳಿಕೆ ಮಾಡುವುದರ ಮೂಲಕ ಅಬ್ಬರಿಸಿತ್ತು. ಈ ಚಿತ್ರ ಒಟ್ಟಾರೆ 1050 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.

2. ಈ ವರ್ಷ ಅತಿಹೆಚ್ಚು ಟ್ರೋಲ್ ಆದ ಆದಿಪುರುಷ್ ಚಿತ್ರ ಇಲ್ಲಿಯವರೆಗೂ ಒಟ್ಟಾರೆ 395 ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಮಾಡಿದ್ದು, ವರ್ಷದ ಮೊದಲಾರ್ಧದಲ್ಲಿ ನೂರು ಕೋಟಿ ಗಳಿಕೆ ಮಾಡಿದ ಸಿನಿಮಾ ಎನಿಸಿಕೊಂಡಿದೆ.

3. ಕಳೆದ ವರ್ಷ ತಮಿಳುನಾಡು ಬಾಕ್ಸ್ ಆಫೀಸ್‌ನಲ್ಲಿ ಇಂಡಸ್ಟ್ರಿ ಹಿಟ್ ಆಗಿದ್ದ ಪೊನ್ನಿಯಿನ್ ಸೆಲ್ವನ್ ಚಿತ್ರದ ಸೀಕ್ವೆಲ್ ಪೊನ್ನಿಯಿನ್ ಸೆಲ್ವನ್ 2 342 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿ ನೂರು ಕೋಟಿ ಕ್ಲಬ್‌ನಲ್ಲಿರುವ ಚಿತ್ರ ಎನಿಸಿಕೊಂಡಿದೆ.

4. ವಿಜಯ್ ನಟನೆಯ ವಾರಿಸು ಚಿತ್ರ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 302 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದು ವರ್ಷದ ಮೊದಲಾರ್ಧದಲ್ಲಿ ನೂರು ಕೋಟಿ ಕ್ಲಬ್ ಸೇರಿದ ಚಿತ್ರ ಎನಿಸಿಕೊಂಡಿದೆ.

5. ಬಾಲಿವುಡ್‌ನ ಮತ್ತೊಂದು ಚಿತ್ರ ದ ಕೇರಳ ಸ್ಟೋರಿ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ರೂಪಾಯಿ ಗಳಿಕೆ ಮಾಡುವುದರ ಮೂಲಕ ನೂರು ಕೋಟಿ ಕ್ಲಬ್ ಸೇರಿದ ಸಿನಿಮಾ ಎನಿಸಿಕೊಂಡಿದೆ.

6. ಈ ವರ್ಷ ತೆಲುಗು ಚಿತ್ರರಂಗದಿಂದ ಮೊದಲು ನೂರು ಕೋಟಿ ಕ್ಲಬ್ ಸೇರಿದ ಚಿತ್ರವೆಂದರೆ ಅದು ವಾಲ್ತೇರು ವೀರಯ್ಯ. ಹೌದು, ಚಿರಂಜೀವಿ ಹಾಗೂ ರವಿತೇಜಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 223 ಕೋಟಿ ರೂಪಾಯಿ ಗಳಿಕೆ ಮಾಡಿದೆ.

7. ರಣ್‌ಬೀರ್ ಕಪೂರ್ ಹಾಗೂ ಶ್ರದ್ಧಾ ಕಪೂರ್ ನಟನೆಯ ಥೂ ಜೂತಿ ಮೇಬ್ ಮಕ್ಕರ್ ಚಿತ್ರ ಸಹ ನೂರು ಕೋಟಿ ಕ್ಲಬ್ ಸೇರಿದ್ದು ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 215 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ.

8. ತಲಾ ಅಜಿತ್ ಕುಮಾರ್ ನಟನೆಯ ತುನಿವು ಚಿತ್ರ ಸಹ ನೂರು ಕೋಟಿ ಕ್ಲಬ್ ಸೇರಿದೆ. ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 201 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.

9. ಮಲಯಾಳಂನ ಹೊಸ ಇಂಡಸ್ಟ್ರಿ ಹಿಟ್ ಚಿತ್ರ 2018 ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ಗಳಿಸಿದ್ದು,

10. ಸಲ್ಮಾನ್ ಖಾನ್ ನಟನೆಯ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರ ಸೋತರೂ ಸಹ ನೂರು ಕೋಟಿ ಕ್ಲಬ್‌ನಲ್ಲಿದೆ. 125 ಕೋಟಿ ಬಜೆಟ್‌ನ ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 182 ಕೋಟಿ ರೂಪಾಯಿ ಗಳಿಕೆ ಮಾಡಿದೆ.

11. ತೆಲುಗಿನ ಬಾಲಕೃಷ್ಣ ನಟನೆಯ ವೀರ ಸಿಂಹ ರೆಡ್ಡಿ ಚಿತ್ರ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 130 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ನೂರು ಕೋಟಿ ಕ್ಲಬ್ ಸೇರಿದೆ.

12. ನಾನಿ ನಟನೆಯ ದಸರಾ ಚಿತ್ರ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 118 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ನೂರು ಕೋಟಿ ಕ್ಲಬ್ ಸೇರಿದೆ.

13. ಧನುಷ್ ನಟನೆಯ ವಾತಿ ಸಿನಿಮಾ 116 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ನೂರು ಕೋಟಿ ಕ್ಲಬ್ ಸೇರಿದೆ.

14. ತಮಿಳು ಹಿಟ್ ಚಿತ್ರ ಖೈದಿಯ ಹಿಂದಿ ರಿಮೇಕ್ ಭೋಲಾ ಹೇಳಿಕೊಳ್ಳುವಂತಹ ದೊಡ್ಡ ಗಳಿಕೆ ಮಾಡುವಲ್ಲಿ ಎಡವಿದ್ದು, ಬಾಕ್ಸ್ ಆಫೀಸ್‌ನಲ್ಲಿ 110 ಕೋಟಿ ಗಳಿಕೆ ಮಾಡಿ ನೂರು ಕೋಟಿ ಕ್ಲಬ್ ಸೇರಿದೆ.

15. ಹಿಂದಿಯ 'ಝರ ಹಟ್ಕೆ ಝರ ಚುಪ್ಕೆ' ಚಿತ್ರ ವಿಶ್ವ ಬಾಕ್ಸ್ ಅಫೀಸ್‌ನಲ್ಲಿ ಒಟ್ಟು 105 ಕೋಟಿ ಗಳಿಕೆ ಮಾಡಿದ್ದು, ನೂರು ಕೋಟಿ ಕ್ಲಬ್ ಸೇರಿದೆ.

16. ತೆಲುಗಿನ ಸೂಪರ್ ಹಿಟ್ ಸಿನಿಮಾ ವಿರೂಪಾಕ್ಷ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 103 ಕೋಟಿ ಗಳಿಕೆ ಮಾಡಿದ್ದು, ನೂರು ಕೋಟಿ ಕ್ಲಬ್‌ನಲ್ಲಿದೆ.

More from Filmibeat

English summary
16 Indian movies which have entered 100 crore club in the first half of 2023. Take a look.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X