ಯುವ ನಾಯಕನ ಜೊತೆ ಕಾಜಲ್ ಅನುಚಿತ ವರ್ತನೆ
ಏಕೋ ಏನೋ ದಕ್ಷಿಣದ ಬೆಡಗಿ ಕಾಜಲ್ ಅಗರವಾಲ್‌ಗೆ ಹಿಂದಿ ಚಿತ್ರದಲ್ಲಿ ಚಾನ್ಸ್ ಸಿಗುತ್ತಿದ್ದಂತೆ ಕೊಂಚ ಪೊಗರು ಜಾಸ್ತಿ ಆದಂತಿದೆ. ಇತ್ತೀಚೆಗೆ ಆಕೆ ದಕ್ಷಿಣ ಚಿತ್ರರಂಗದ ಬಗ್ಗೆ ಕಾಮೆಂಟ್ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಈಗ ಯುವ ನಾಯಕ ನಟನೊಬ್ಬನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾಗಿ ಟಾಲಿವುಡ್‌ನಿಂದ ಸುದ್ದಿ ಬಂದಿದೆ.
ಆತ ಬೇರಾರು ಅಲ್ಲ ಬೆಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ ಕೈಹಿಡಿಯುವುದಾಗಿ ಸುದ್ದಿಮಾಡಿದ್ದ ನಾಗಚೈತನ್ಯ. ಇತ್ತೀಚೆಗೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಈಕೆ ಈತನ ಜೊತೆ ಅಸಭ್ಯವಾಗಿ ಮಾತನಾಡಿ ಹೀಗಳೆದಿದ್ದಾಗಿ ಟಾಲಿವುಡ್‌ನಲ್ಲಿ ಟಾಂ ಟಾಂ ಆಗಿದೆ. ಆದರೆ ಆಕೆ ಅಂಥಹದ್ದೇನು ಹೇಳಿದರು ಎಂಬುದು ಮಾತ್ರ ಬಹಿರಂಗವಾಗಿಲ್ಲ.
ಬಾಲಿವುಡ್‌ನಲ್ಲಿ ಅಜಯ್ ದೇವಗನ್ ಜೊತೆ ನಟಿಸುವ ಚಾನ್ಸ್ ಕಾಜಲ್‌ಗೆ ಸಿಕ್ಕಿದೆ. ಅಂದಹಾಗೆ ಇದು ತೆಲುಗಿನ ಯಶಸ್ವಿ ಚಿತ್ರ ಮರ್ಯಾದೆ ರಾಮಣ್ಣ ರೀಮೇಕ್. ಇದೇ ಚಿತ್ರ ಕನ್ನಡಕ್ಕೂ ರೀಮೇಕ್ ಆಗುತ್ತಿದ್ದು ಮರ್ಯಾದೆ ರಾಮಣ್ಣನಾಗಿ ಕೋಮಲ್ ಕಾಣಿಸಲಿದ್ದಾರೆ. (ಏಜೆನ್ಸೀಸ್)
More from Filmibeat
English summary
Hot actress Kajal Agarwal and young Josh hero Naga Chaitanya are acting together in a film "Dhada", which is in under progress presently. The latest buzz is that Kajal was misbehaved with hero Naga Chaitanya and also with the film unit on the sets.
ಕಾಜಲ್ ಅಗರವಾಲ್ ಟಾಲಿವುಡ್ ಬಾಲಿವುಡ್ ಅಜಯ್ ದೇವಗನ್ ಅನುಷ್ಕಾ ಶೆಟ್ಟಿ kajal aggarwal bollywood tollywood ajay devgan


Click it and Unblock the Notifications











