twitter
    For Quick Alerts
    ALLOW NOTIFICATIONS  
    For Daily Alerts

    ರಜನಿ ರೋಬೋ ಮೀರಿಸಲಿದೆ ಕಮಲ್ ಸಿನ್ಮಾ ಬಜೆಟ್?

    By Mahesh
    |

    ಪದ್ಮಶ್ರೀ ಕಮಲ್ ಹಾಸನ್ ಅವರ ಮಹತ್ವಾಕಾಂಕ್ಷಿ ಚಿತ್ರ ವಿಶ್ವರೂಪಂ ಈಗ ಸ್ಟೈಲ್ ಕಿಂಗ್ ರಜನಿಕಾಂತ್ ಚಿತ್ರವನ್ನು ಮೀರಿಸಲು ಹೊರಟಿದೆ.

    ವಿಶ್ವರೂಪಂ ನ ಅಂದಾಜು ಬಜೆಟ್ 120 ಕೋಟಿ ಮೀರುತ್ತಿದೆ. ಭಾರತದ ಅತಿ ದೊಡ್ಡ ಬಜೆಟ್ ನ ಚಿತ್ರ ಎಂದು ಹೆಸರಾಗಿದ್ದ ರಜನಿಕಾಂತ್ ಅವರ ಎಂಧಿರನ್ ಅಥವಾ ರೋಬೋ ಚಿತ್ರ ರೆಕಾರ್ಡ್ ವಿಶ್ವರೂಪಂ ಬ್ರೇಕ್ ಮಾಡಲಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ.

    ಬಹುಭಾಷಾ ವಿಶ್ವರೂಪಂ ಚಿತ್ರದ ಮೊದಲೆರಡು ಶೆಡ್ಯೂಲ್ ಗಾಗಿ ಈಗಾಗಲೇ 55 ಕೋಟಿ ರು ವ್ಯಯಿಸಲಾಗಿದೆ. ಶೇ. 60 ರಷ್ಟು ಚಿತ್ರೀಕರಣ ಜೋರ್ಡಾನ್ ಹಾಗೂ ಚೆನ್ನೈನಲ್ಲಿ ನಡೆಯಲಿದೆ. ಉಳಿದ ಭಾಗಗಳ ಶೂಟಿಂಗ್ ಯುಎಸ್ ಹಾಗೂ ಯುಕೆಯಲ್ಲಿ ನಡೆಯುವ ಸಾಧ್ಯತೆಯಿದೆ.

    ಚಿತ್ರ ನಿರ್ಮಾಣದ ಗುಣಮಟ್ಟ ಕಾಯ್ದುಕೊಳ್ಳಲು ಕೊಂಚ ವಿಳಂಬವಾದರೂ ಬೇಕಾದ ಸ್ಥಳಗಳಲ್ಲೇ ಶೂಟಿಂಗ್ ಮಾಡಲು ಕಮಲ್ ನಿರ್ಧರಿಸಿದ್ದಾರೆ. ಅಂತಾರಾಷ್ಟ್ರೀಯ ಗುಣಮಟ್ಟದ ಚಿತ್ರಗಳನ್ನು ನಮ್ಮಲ್ಲೂ ತಯಾರಿಸಿ, ವೀಕ್ಷಕರನ್ನು ರಂಜಿಸಬಹುದು ಎಂಬುದನ್ನು ತೋರಿಸುವುದು ಚಿತ್ರತಂಡದ ಉದ್ದೇಶ.

    ಕಮಲ್ ಹಾಸನ್ ಅವರ ದೇವರ್ ಮಗನ್, ಅಪೂರ್ವ ಸಹೋದರಂಗಳ್ ಹಾಗೂ ದಶಾವತಾರಂ ಬಿಗ್ ಬಜೆಟ್ ಚಿತ್ರಗಳಾಗಿದ್ದು, ಈ ಸಾಲಿಗೆ ವಿಶ್ವರೂಪಂ ಸೇರಲಿದೆ. ವಿಶ್ವರೂಪಂ ಚಿತ್ರಕ್ಕೆ ಪೂಜಾ ಕುಮಾರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮುಂಚೆ ನಾಯಕಿ ಸ್ಥಾನಕ್ಕೆ ಸೋನಾಕ್ಷಿ ಸಿನ್ಹಾ, ದೀಪಿಕಾ ಪಡುಕೋಣೆ, ಇಶಾ ಶೆರ್ವಾನಿ ಹೆಸರು ಕೇಳಿ ಬಂದಿತ್ತು.

    English summary
    Vishwaroobham is turning out to be the biggest movie ever of Kamal Hassan's career. The estimated budget of the forthcoming multilingual movie is Rs 120 crore that means it will share honours with Rajinikanth's Endhiran, which was also made with the same amount of money.
    Friday, December 16, 2011, 10:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X