»   » ಭರದ ಚಿತ್ರೀಕರಣದಲ್ಲಿ ಪ್ರಜ್ವಲ್ ರ 'ನನ್ನವನು

ಭರದ ಚಿತ್ರೀಕರಣದಲ್ಲಿ ಪ್ರಜ್ವಲ್ ರ 'ನನ್ನವನು

Posted By:
Subscribe to Filmibeat Kannada

ಸುಂದರ ಪ್ರಜ್ವಲ್‌ನೊಂದಿಗೆ ಮೆರವಣಿಗೆ ಮುಗಿಸಿದ ಅಂದ್ರಿತಾ ರೇ ಈಗ ನನ್ನವನು ಎನ್ನುತ್ತಿದ್ದಾರೆ. ಅಂದರೆ ಆ ಶೀರ್ಷಿಕೆಯ ಚಿತ್ರದಲ್ಲಿ ಈ ಜೋಡಿ ಮತ್ತೆ ಒಂದಾಗಿದೆ. ಅದೇ ತುಂಟಾಟ, ಚೆಲ್ಲಾಟ ಇಲ್ಲೂ ಮುಂದುವರೆದಿದೆ. ಮಾರ್ಕ್‌ವೆಲ್ ಸಂಸ್ಥೆಯ ನಿರ್ಮಾಣದ ನನ್ನವನು ಚಿತ್ರಕ್ಕೆ ಬೆಂಗಳೂರು ಹಾಗೂ ಶಿವಮೊಗ್ಗದಲ್ಲಿ ಅಂದ್ರಿತಾ, ಪ್ರಜ್ವಲ್, ಸತ್ಯಪ್ರಕಾಶ್ ಅಭಿನಯದಲ್ಲಿ ಮೊದಲಹಂತದ ಚಿತ್ರೀಕರಣ ಪೂರ್ಣವಾಗಿದೆ. ಸದ್ಯದಲ್ಲೇ ಎರಡನೇಹಂತದ ಚಿತ್ರೀಕರಣ ಆರಂಭವಾಗಲಿದ್ದು ಆ ಹಂತದಲ್ಲಿ ಕೆಲವು ಮಾತಿನಭಾಗ ಹಾಗೂ ಎರಡುಹಾಡುಗಳು ಚಿತ್ರೀಕೃತವಾಗಲಿದೆ.

ತುಳಸಿಗೋಪಾಲ್ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ಶ್ರೀನಿವಾಸರಾಜು ಕತೆ, ಚಿತ್ರಕತೆ ಬರೆದು ನಿರ್ದೇಶಿಸಿದ್ದಾರೆ. ಇಳಯರಾಜರ ಸಂಗೀತವಿರುವ ನನ್ನವನು ಚಿತ್ರಕ್ಕೆ ಕೆ.ದತ್ತು ಅವರ ಛಾಯಾಗ್ರಹಣವಿದೆ. ಸುರೇಶ್‌ಅರಸ್ ಸಂಕಲನ, ಎಂ.ಎಸ್.ರಮೇಶ್ ಸಂಭಾಷಣೆ, ಥ್ರಿಲ್ಲರ್‌ಮಂಜು ಸಾಹಸ, ನಾಗೇಂದ್ರಪ್ರಸಾದ್ ಗೀತರಚನೆ ಹಾಗೂ ಹೊಸ್ಮನೆಮೂರ್ತಿ ಅವರ ಕಲಾನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಪ್ರಜ್ವಲ್, ಅಂದ್ರಿತಾ ರೇ, ಜಯಂತಿ, ಅವಿನಾಶ್, ಕಿಶೋರಿಬಲ್ಲಾಳ್, ಸತ್ಯಪ್ರಕಾಶ್, ಕೋಮಲ್, ಬುಲೆಟ್‌ಪ್ರಕಾಶ್, ಕಾಶಿ, ಮನದೀಪ್‌ರಾಯ್, ಹರೀಶ್, ವಿಶ್ವನಾಥ್, ಮಾ.ರಾಕೇಶ್ ಮುಂತಾದವರಿದ್ದಾರೆ.

****
ಪ್ರಾರಂಭವಾಯಿತು ಗೋವರ್ಧನ್ ಅವರ ನೂತನ ಚಿತ್ರ

ಕನ್ನಡದಲ್ಲಿ ಮಿಂಚು, ಮಹಾಲಕ್ಷ್ಮೀ, ಸಾಕಿದಗಿಣಿ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿರುವ ಹಾಗೂ ಹಿಂದಿಯಲ್ಲಿ ಧರ್ಮೇಂದ್ರ ಅಭಿನಯದಲ್ಲಿ ವೀರನಾಥ್, ಜಿತೇಂದ್ರ, ಶ್ರೀದೇವಿ ಅವರ ಅಭಿನಯದ ಶೇಷ್‌ನಾಗ್, ವಿನೋದ್‌ಖನ್ನಾ, ಶ್ರೀದೇವಿ ಅಭಿನಯದ ಗರ್ಜನಾ ಚಿತ್ರಗಳ ನಿರ್ಮಾಪಕರೂ ಆಗಿರುವ ಎನ್.ಗೋವರ್ಧನ್ ಪ್ರಸ್ತುತ ಕನ್ನಡದಲ್ಲಿ ಹೆಸರಿಡದ ನೂತನ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ.

ದೇವಿ ಪದ್ಮಾವತಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂಜನಾ ಅವರು ನಿರ್ಮಿಸುತ್ತಿರುವ ಈ ನೂತನ ಚಿತ್ರದ ಮುಹೂರ್ತ ಸಮಾರಂಭ ಕಳೆದವಾರ ನೆರವೇರಿತು. ನಾಯಕ,ನಾಯಕಿ ದೇವರಿಗೆ ಪ್ರಾರ್ಥಿಸುವ ಮೊದಲ ಸನ್ನಿವೇಶಕ್ಕೆ ಗುಣಶೀಲನ್ ಆರಂಭಫಲಕ ತೊರಿದರೆ ನಿರ್ಮಾಪಕಿ ಸಂಜನಾ ಕ್ಯಾಮೆರಾಗುಂಡಿ ಒತ್ತಿದರು. ಗೋವರ್ಧನ್ ಅವರೇ ಕತೆ, ಚಿತ್ರಕತೆ ಬರೆದು ಸಂಗೀತ ನೀಡಿ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಈ ಚಿತ್ರಕ್ಕೆ ದಿವಾಕರ್ ಛಾಯಾಗ್ರಹಣ, ಸು.ರುದ್ರಮೂರ್ತಿಶಾಸ್ತ್ರಿ ಸಂಭಾಷಣೆ ಹಾಗೂ ಗೀತರಚನೆ, ಸೌಂದರ್‌ರಾಜ್ ಸಂಕಲನ, ಇಮೇಂದ್ರ ನೃತ್ಯ, ಸುಭಾಶ್‌ಕಡಕೋಳ್ ಕಲೆ ಹಾಗೂ ಲೀಲಾಮನೋಹರ್ ಅವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಪ್ಯೂಷ್‌ವಾಣಿ, ಆನಂದ್, ಕಶೀಷ್‌ರೀಟಾ, ಆರ್ಯ, ಮನೋಜ್ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಸಿನಿವಾರ್ತೆ)

ವಿದೇಶ ಸುತ್ತಿ ಬಂದ ಪ್ರಜ್ವಲ್ ರ 'ನನ್ನವನು
ಚಿತ್ರವಿಮರ್ಶೆ: ಅದ್ಧೂರಿ ಇಲ್ಲದ ಪ್ರಜ್ಚ್ವಲ್ ಮೆರವಣಿಗೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada