»   » ಸೈಕೋ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಪ್ರಶಂಸೆ

ಸೈಕೋ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಪ್ರಶಂಸೆ

Subscribe to Filmibeat Kannada

4ಡಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾದ 'ಸೈಕೋ' ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ಚಿತ್ರದ ನಾಯಕ ನಾಯಕಿಯರನ್ನು ತೋರಿಸದೇ ಬರೀ ಹಾಡುಗಳ ಮೂಲಕ ಅಪಾರ ಪ್ರಚಾರ ಗಿಟ್ಟಿಸಿಕೊಂಡ 'ಸೈಕೋ' ಚಿತ್ರದ ಪ್ರಮುಖ ಅಂಶಗಳನ್ನು ಸೆನ್ಸಾರ್ ಮಂಡಳಿ ಪ್ರಶಂಸಿಸಿದೆ ಎಂದು ಚಿತ್ರದ ನಿರ್ದೇಶಕ ದೇವದತ್ ತಿಳಿಸಿದ್ದಾರೆ.

ಸಂಗೀತ ನಿರ್ದೇಶಕ ರಘು ದೀಕ್ಷಿತ್‌ ಅವರ ವಿಶಿಷ್ಟ ಕಲ್ಪನೆಯ ಚಿತ್ರದ ಹಾಡುಗಳು ಈಗಾಗಲೇ ಜನಪ್ರಿಯವಾಗಿವೆ. ಅದರಲ್ಲೂ 'ನಿನ್ನ ಪೂಜೆಗೆ ಬಂದೆ ಮಾದೇಶ್ವರ..' ಹಾಡಂತು ಈಗ ಎಲ್ಲರ ಬಾಯಲ್ಲೂ ಕುಣಿದಾಡುತ್ತಿದೆ. ಇದರಿಂದಾಗಿ ರಘು ದೀಕ್ಷಿತ್ ಗೆ ಸಂಗೀತ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ.

ಭಾರಿ ಕುತೂಹಲ ಕೆರಳಿಸಿರುವ ಈ ಚಿತ್ರದ ಬಗ್ಗೆ ಗಾಂಧಿನಗರದಲ್ಲಿ ಪ್ರಸಂಸೆಯ ಮಾತುಗಳು ಕೇಳಿಬರುತ್ತಿವೆ. 2.40 ಕೋಟಿ ರೂಗಳಿಗೆ ಸಿನಿಮಾ ಮಾರಾಟವಾಗಿದೆ ಎಂದು ಹೇಳಲಾಗಿದೆ. 4ಡಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಸಭಾ ಕುಮಾರ್ ಕ್ಯಾಮೆರಾ, ವಿನ್ಸೆಂಟ್ ನೃತ್ಯ, ರವಿವರ್ಮ ಸಾಹಸ, ಬಿ.ಎಸ್. ಕೆಂಪರಾಜ್ ಸಂಕಲನವಿದೆ. ಸೈಕೋ ರಾಜ್ಯಾದ್ಯಂತ ಅಕ್ಟೋಬರ್ 31 ರಂದು ತೆರೆ ಕಾಣಲಿದೆ.

(ದಟ್ಸ್ ಕನ್ನಡ ಸಿನಿವಾರ್ತೆ)

'ಸೈಕೋ' ಚಿತ್ರದ ಟ್ರೈಲರ್ ಗಾಗಿ ಇಲ್ಲಿ ಕ್ಲಿಕ್ಕಿಸಿ
ಸೈಕೋ ಚಿತ್ರದ ಗುಂಗುಡುವ ಹಾಡುಗಳ ಮಾಯಗಾರ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada