For Quick Alerts
  ALLOW NOTIFICATIONS  
  For Daily Alerts

  ಒಂದಲ್ಲ ಎರೆಡಲ್ಲ ಈ ವಾರ ರಿಲೀಸ್ ಆಗ್ತಿವೆ 6 ಸಿನಿಮಾಗಳು

  |

  ಕಳೆದ ಎರಡು ವರ್ಷಗಳಿಂದ ಚಿತ್ರರಂಗ ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಕೊರೋನಾ ಮಹಾಮಾರಿಯಿಂದಾಗಿ ಸರಿಯಾಗಿ ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿಲ್ಲ. ತಿಂಗಳುಗಟ್ಟಲೇ ಥಿಯೇಟರ್ ಬಂದ್ ಆಗಿ ಚಿತ್ರೋದ್ಯಮಕ್ಕೆ ಬಾರಿ ನಷ್ಟ ಉಂಟಾಗಿತ್ತು. ಕೊರೋನಾ ಮೊದಲನೇ ಅಲೆ ಮುಗಿದು ಇನ್ನೇನು ಸಿನಿಮಾಗಳು ಥಿಯೇಟರ್ ಪ್ರವೇಶ ಮಾಡಬೇಕು ಅನ್ನುವಷ್ಟರಲ್ಲಿ ಕೊರೋನಾ ಎರಡನೇ ಅಲೆ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಕೊನೆಗೂ ಕೊರೊನಾ ಹಾವಳಿ ಕಮ್ಮಿ ಆದ ಕೂಡಲೇ ರಾಜ್ಯ ಸರ್ಕಾರ ಥಿಯೇಟರ್‌ಗಳಲ್ಲಿ ಚಿತ್ರಪ್ರದರ್ಶನಕ್ಕೆ ಅವಕಾಶ ನೀಡಿತ್ತಾದರೂ 50% ಆಸನ ಭರ್ತಿಗಷ್ಟೆ ಅವಕಾಶ ನೀಡಲಾಗಿತ್ತು. ಆಗಲೂ ಕೂಡ ನಿರೀಕ್ಷಿಸಿದಂತೆ ಚಿತ್ರಮಂದಿರಕ್ಕೆ ಸಿನಿಪ್ರಿಯರು ಬರಲಿಲ್ಲ ಹಾಗೇ ಥಿಯೇಟರ್ ಮಾಲಿಕರ ಜೇಬು ತುಂಬಲಿಲ್ಲ. ಸದ್ಯ ಈಗ ಪರಿಸ್ಥಿತಿಗಳು ಬದಲಾಗುತ್ತಿದೆ. ಥಿಯೇಟರ್‌ಗಳು ಮೊದಲಿನಂತೆ ಸಿಂಗಾರ ಗೊಳ್ಳಲು ತಯಾರಾಗಿದೆ. ಅದೇ ಶಿಳ್ಳೆ, ಶಪ್ಪಾಳೆ ಸದ್ದು ಈ ವಾರದಿಂದ ಹೆಚ್ಚಾಗಲಿದೆ. ಯಾಕಂದ್ರೆ ಈ ವಾರ ಅಂದ್ರೆ ಸಿನಿ ಶುಕ್ರವಾರ ಥಿಯೇಟರ್‌ನಲ್ಲಿ ಒಂದಲ್ಲಾ ಎರೆಡಲ್ಲಾ ಕೊರೋನಾ ಲಾಕ್‌ಡೌನ್ ಬಳಿಕ ಇದೇ ಮೊದಲ ಬಾರಿಗೆ 6 ಸಿನಿಮಾಗಳು ಪ್ರದರ್ಶನ ಕಾಣುತ್ತಿವೆ. ಹಾಗಿದ್ರೆ ಈ ವಾರ ರಿಲೀಸ್ ಆಗುತ್ತಿರೋ ಆ 6 ಸಿನಿಮಾಗಳು ಯಾವುದು ಅಂತ ತಿಳಿಯಲು ಮುಂದೆ ಓದಿ...

   ಹೊಸಬರ 6 ಚಿತ್ರಗಳು ರಿಲೀಸ್

  ಹೊಸಬರ 6 ಚಿತ್ರಗಳು ರಿಲೀಸ್

  ಚಂದನವನದಲ್ಲಿ ಸಿನಿಮಾಗಳು ರಿಲೀಸ್ ಆಗಲು ಸರತಿ ಸಾಲಿನಲ್ಲಿ ನಿಂತಿವೆ. ದೊಡ್ಡ ಸ್ಟಾರ್‌ಗಳ ಸಿನಿಮಾ, ಹೈ ಬಜೆಟ್ ಸಿನಿಮಾ, ಹೊಸಬರ ಸಿನಿಮಾ ಹೀಗೆ ಕೊರೊನಾ ಕಾರಣದಿಂದ ರಿಲೀಸ್ ಆಗದೇ ಹಾಗೆಯೇ ಉಳಿದುಕೊಂಡಿದ್ದ ಸಿನಿಮಾಗಳು ಈಗ ಒಂದೊಂದಾಗೆ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಹಾಗೇ ನವೆಂಬರ್‌ನಲ್ಲೂ ಸಾಕಷ್ಟು ಸಿನಿಮಾಗಳು ರಿಲೀಸ್ ಆಗುತ್ತಿದ್ದು, ಈ ವಾರ ಹೊಸಬರ 6 ಚಿತ್ರಗಳು ರಿಲೀಸ್ ಆಗ್ತಿರೋದಕ್ಕೆ ಸಿನಿಪ್ರಿಯರು ಖುಷಿಯಾಗಿದ್ದಾರೆ. ಥಿಯೇಟರ್ ಮಾಲಿಕರು ಹಿಂದಿನಂತೆ ಚಿತ್ರ ಪ್ರದರ್ಶನವಾಗುತ್ತಿರುವುದಕ್ಕೆ ಸಂತಸದಲ್ಲಿದ್ದಾರೆ.

   ಟಾಮ್ ಆಂಡ್ ಜೆರ್ರಿ

  ಟಾಮ್ ಆಂಡ್ ಜೆರ್ರಿ

  ಟಾಮ್‌ ಆಂಡ್ ಜೆರ್ರಿ ಸಿನಿಮಾ ಈಗಾಗಲೇ ತನ್ನ ಹಾಡುಗಳಿಂದ ಸಾಕಷ್ಟು ಗಮನ ಸೆಳೆದಿದೆ. "ಹಾಯಾಗಿದೆ ಎದೆಯೋಳಗೆ" ಹಾಡು ಸಿನಿಮಾ ರಿಲೀಸ್‌ಗು ಮುನ್ನ ಹಿಟ್ ಆಗಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.ರಾಘವ್ ವಿನಯ್ ಶಿವಗಂಗೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ನಿಶ್ಚಿತ್ ಕೊರೋಡಿ ಮತ್ತು ಚೈತ್ರಾ ರಾವ್ ಜೋಡಿಯಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ನಿಶ್ಚಿತ್ ಹಾಗೂ ಚೈತ್ರಾ ಟಾಮ್‌ ಎಂಡ್ ಜೆರ್ರಿ ತರಹವೇ ಜಗಳವಾಡುವ ಪಾತ್ರ. ಹೀಗಾಗಿ ಚಿತ್ರಕ್ಕೂ ಅದೇ ಹೆಸರನ್ನು ಇಡಲಾಗಿದ್ದು ಬ್ಯೂಟಿಫುಲ್ ಲವ್ ಸ್ಟೋರಿ ಸಿನಿಮಾದಲ್ಲಿ ಇರಲಿದೆ.

   ಪ್ರೇಮಂ ಪೂಜ್ಯಂ

  ಪ್ರೇಮಂ ಪೂಜ್ಯಂ

  ನೆನಪಿರಲಿ ಪ್ರೇಮ್ ನಟನೆಯ 25ನೇ ಚಿತ್ರ ಪ್ರೇಮಂ ಪೂಜ್ಯಂ. ವೃತ್ತಿಯಲ್ಲಿ ವೈದ್ಯರಾದ ರಾಘವೇಂದ್ರ ಈ ಸಿನಿಮಾ ನಿರ್ದೇಶನ ಮಾಡಿತ್ತಿದ್ದು, ಲವ್ ಸ್ಟೋರಿಯನ್ನು ಹೊತ್ತು ಸಿನಿಮಾ ಬರುತ್ತಿದೆ.ಬೃಂದ ಆಚಾರ್ಯ ಪ್ರೇಮ್‌ಗೆ ಜೋಡಿಯಾಗಿ ನಟಿಸಿದ್ದು ನಟಿ ಐಂದ್ರಿತಾ ರೇ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

   ಪಕ್ಕಾ ರೌಡಿಸಂ ಸಿನಿಮಾ ಹಿಟ್ಲರ್

  ಪಕ್ಕಾ ರೌಡಿಸಂ ಸಿನಿಮಾ ಹಿಟ್ಲರ್

  ಹಿಟ್ಲರ್: ಹಿಟ್ಲರ್ ಹೆಸರಿನ ಸಿನಿಮಾ ಕನ್ನಡದಲ್ಲಿ ಸೆಟ್ಟೇರಿದ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಿಸಿತ್ತು. ಶ್ರೀಮುರುಳಿ ಅವರು ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ದರು. ಈ ಸಿನಿಮಾ ಕಂಪ್ಲೀಟ್ ಆಗಿ ರಿಲೀಸ್‌ಗೆ ತಯಾರಾಗಿದೆ. ಕೆಜಿಎಫ್, ಜಂಟಲ್‌ಮನ್ ಚಿತ್ರಗಳಿಗೆ ಸಾಹಿತ್ಯ ರಚಿಸಿ ಹೆಸರು ಮಾಡಿದ್ದ ಕೊಪ್ಪಳದ ಕಿನ್ನಾಳ್ ರಾಜ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಪಕ್ಕಾ ರೌಡಿಸಂ ಸಿನಿಮಾ ಇದಾಗಿದ್ದು ಲೋಹಿತ್ ಮತ್ತು ಸಸ್ಯ ಎಂಬ ಹೊಸಬರು ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಗಳಾಗಿ ಅಭಿನಯಿಸಿದ್ದಾರೆ.

   ಹೊಸಬರ ಬೈ1 ಗೆಟ್1ಫ್ರೀ

  ಹೊಸಬರ ಬೈ1 ಗೆಟ್1ಫ್ರೀ

  ಇದರೊಂದಿಗೆ ಹೊಸಬರ ಬೈ1 ಗೆಟ್1ಫ್ರೀ, ಕಪೋ ಕಲ್ಪಿತಂ ಮತ್ತು ಯರ್ರಾಬಿರ್ರಿ ಸಿನಿಮಾಗಳು ರಿಲೀಸ್ ಆಗುತ್ತಿದೆ. ಇನ್ನು ಮುಂದಿನ ವಾರ ನ.18ರಂದು ಲಕ್ಷ್ಯ ಚಿತ್ರ ಬಿಡುಗಡೆಯಾಗುತ್ತಿದೆ. ನ.19ರಂದು ಮತ್ತೆ 6 ಸಿನಿಮಾಗಳು ರಿಲೀಸ್ ಆಗಲಿವೆ. ರಮೇಶ್‌ ಅರವಿಂದ್‌ ನಟನೆಯ ಫ್ಯಾಮಿಲಿ ಥ್ರಿಲ್ಲರ್‌ 100, ರಾಜ್‌ ಬಿ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಗರುಡ ಗಮನ ವೃಷಭ ವಾಹನ, ಮನು ರವಿಚಂದ್ರನ್‌ ಅಭಿನಯದ ಮುಗಿಲ್‌ ಪೇಟೆ, ಒಂಭತ್ತನೇ ದಿಕ್ಕು ಮೊದಲಾದ ಚಿತ್ರಗಳು ರಿಲೀಸ್‌ ಆಗಲಿದೆ. ನ.26ರಂದು ಗಣೇಶ್‌ ನಟನೆಯ ಸಖತ್‌'ಸೇರಿ ಮೂರು ಸಿನಿಮಾ ಥೇಟರ್‌ಗೆ ಬರಲಿವೆ. ಹೀಗೆ ಒಟ್ಟು 16 ಚಿತ್ರಗಳು ಈ ತಿಂಗಳಲ್ಲಿ ತೆರೆ ಕಾಣಲಿವೆ. ಈ ವಾರ ಚಿತ್ರಮಂದಿರಗಳಲ್ಲಿ ಹೊಸಬರ ಸಿನಿಮಾಗಳೇ ರಿಲೀಸ್ ಆಗುತ್ತಿದ್ದು ಯಾವ ಸಿನಿಮಾಗೆ ಪ್ರೇಕ್ಷಕರು ಹೆಚ್ಚು ಮತಹಾಕುತ್ತಾರೆ ಅನ್ನೋದನ್ನ ನೋಡಬೇಕಿದೆ.

  English summary
  There are 16 Kannada Movies Releasing in November month, 6 Movies Releasing on 12th Nov. Know more.
  Thursday, November 11, 2021, 12:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X