For Quick Alerts
  ALLOW NOTIFICATIONS  
  For Daily Alerts

  ಅಂಗವಿಕಲ ಬಾಲಕನಿಗೆ ಮಾನವೀಯತೆ ಮೆರೆದ ಖೇಣಿ

  |

  ಕರ್ನಾಟಕದ ಸದಾ ಸುದ್ದಿಯಲ್ಲಿರುವ ವ್ಯಕ್ತಿ ಅಶೋಕ್ ಖೇಣಿ. ಪ್ರಸಾದ್ ಎನ್ನುವ ಚಿತ್ರವನ್ನು ಅಶೋಕ್ ಖೇಣಿ ನಿರ್ಮಿಸುತ್ತಿದ್ದಾರೆ. ಮಕ್ಕಳಲ್ಲಿ ಕಂಡು ಬರುವ ಅಂಗವಿಕಲತೆಗೆ ಜನರ ಅನುಕಂಪ ಬೇಡ ಬದಲಾಗಿ ಅಂಗವಿಕಲ ಮಕ್ಕಳಿಗೆ ಪ್ರೋತ್ಸಾಹ ಬೇಕು ಎನ್ನುವುದು ಚಿತ್ರದ ತಿರುಳು.

  ಅರ್ಜುನ್ ಸರ್ಜಾ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಅಂಗವಿಕಲ ಬಾಲಕನ ಪಾತ್ರದಲ್ಲಿ ಮಾ. ಸಂಕಲ್ಪ ನಟಿಸಿದ್ದಾರೆ. ಈ ಬಾಲಕನಿಗೆ ಕಿವಿ ಕೇಳಿಸುವುದಿಲ್ಲ ಮತ್ತು ಮಾತನಾಡಲಾಗುವುದಿಲ್ಲ. ಚಿತ್ರವೀಗ ತೆರೆಗೆ ಬರಲು ಸಜ್ಜಾಗಿದೆ.

  ಶೂಟಿಂಗ್ ವೇಳೆಯಲ್ಲಿ ಬಾಲಕನ ಕಿವುಡುತನಕ್ಕೆ ಶಸ್ತ್ರ ಚಿಕಿತ್ಸೆ ಮಾಡಿಸುವುದಾಗಿ ಖೇಣಿ ಭರವಸೆ ನೀಡಿದ್ದರು. ಚಿತ್ರೀಕರಣ ಮುಗಿದ ಬಳಿಕ ಖೇಣಿ ಕೊಟ್ಟ ಮಾತಿನಂತೆ ಸಂಕಲ್ಪಗೆ ಆಪರೇಶನ್ ಮಾಡಿಸಿದ್ದಾರೆ. ಇನ್ನು ಎರಡು ಮೂರು ತಿಂಗಳಲ್ಲಿ ಸಂಕಲ್ಪಗೆ ಕಿವಿಕೇಳಿಸುತ್ತದೆ.

  ಅಂಗವಿಕಲ ಮಕ್ಕಳ ಕುರಿತಂತೆ ಚಿತ್ರ ಮಾಡಿರುವುದಲ್ಲದೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಅಶೋಕ್ ಖೇಣಿ. ಅರ್ಜುನ್ ಸರ್ಜಾ, ಮಾಧುರಿ ಭಟ್ಟಾಚಾರ್ಯ ಮುಖ್ಯ ಭೂಮಿಕೆಯಲ್ಲಿರುವ 'ಪ್ರಸಾದ್' ಚಿತ್ರ ಫೆಬ್ರವರಿ ಮೊದಲ ವಾರದಲ್ಲಿ ಬಿಡುಗಡೆ ಗೊಳ್ಳಲಿದೆ.

  English summary
  Nice Owner Ashok Kheny extended his financial support to a boy towards his surgery expenses. Master Sankalp acted as a junior artist in the movie Prasad and Kheny is the producer for that movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X