ಮತ್ತೆ ಬನ್ನಿ ಪ್ರೀತ್ಸೋಣ ಎನ್ನುತ್ತಿರುವ ಲವ್ಲಿ ಸ್ಟಾರ್ ಪ್ರೇಮ್

By * ಶ್ರೀರಾಮ್ ಭಟ್

ಲವ್ಲಿ ಸ್ಟಾರ್ 'ಪ್ರೇಮ್' ಅಭಿನಯದ, ಕಳೆದ ಜೂನ್ ನಲ್ಲಿ ಒಮ್ಮೆ ತೆರೆಗೆ ಬಂದು ವಾಪಸ್ ಆಗಿದ್ದ ಚಿತ್ರ 'ಐ ಆಮ್ ಸಾರಿ, ಮತ್ತೆ ಬನ್ನಿ ಪ್ರೀತ್ಸೋಣ', ಈಗ 'ರೆಬೆಲ್ ಸ್ಟಾರ್' ಅಂಬರೀಷ್ ಪ್ರೋತ್ಸಾಹದೊಂದಿಗೆ ಮತ್ತೆ ತೆರೆಗೆ ಬಂದಿದೆ. ಈ ಬಾರಿ 'ಐ ಆಮ್ ಸಾರಿ' ಪದ ಪಕ್ಕಕ್ಕಿಟ್ಟು 'ಟ್ರಿಮ್' ಆದ 'ಮತ್ತೆ ಬನ್ನಿ ಪ್ರೀತ್ಸೋಣ' ಎಂಬ ಟೈಟಲ್ ಇದೆ. ರಾಜ್ಯಾದ್ಯಂತ ಇಂದಿನಿಂದ (ಡಿ.16, 2011) ಪ್ರದರ್ಶಿಸಲಾಗುತ್ತಿದೆ. ಬಿಡುಗಡೆಯಾದ ಎಲ್ಲಾ ಕಡೆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ.

ಈ ಚಿತ್ರಕ್ಕೆ ಈಗ 3 ನಿಮಿಷದಷ್ಟು ಕತ್ತರಿ ಪ್ರಯೋಗವಾಗಿದ್ದು ಮೊದಲಿಗಿಂತ ಟ್ರಿಮ್ ಹಾಗೂ ಕಲರ್ ಫುಲ್ ಆಗಿದೆ. ಸಮಯೋಚಿತವಾಗಿ ಒಂದು ಹೊಸ ಹಾಡನ್ನು ಸೇರಿಸಿ ಇನ್ನೂ 'ದಿ ಬೆಸ್ಟ್' ಸಿನಿಮಾ ಮಾಡಲಾಗಿದೆ. ಚಿತ್ರದ ಪತ್ರಿಕಾ ಜಾಹಿರಾತಿನಲ್ಲಿ 'ಇಂದಿನಿಂದ ಪ್ರೀತಿ ಪ್ರಾರಂಭ' ಎನ್ನಲಾಗಿದೆ. ಚಿತ್ರವನ್ನು ನೋಡಿದ ಅಂಬರೀಷ್ ಹಾಗೂ ರವೀಂದ್ರ ಮಿತ್ರರು ಅದನ್ನು ಮತ್ತೆ ತೆರೆಗೆ ತರುತ್ತಿದ್ದಾರೆ.

ಈ ಚಿತ್ರದಲ್ಲಿ ನಟ 'ಲವ್ಲಿ ಸ್ಟಾರ್' ಪ್ರೇಮ್ ಅಭಿನಯ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಬಹಳಷ್ಟು ಪ್ರಶಂಸೆ ಪಡೆದಿತ್ತು. ಹಾಟ್ ಬೆಡಗಿ ಸಂಜನಾ ಹಾಗೂ ಕರಿಷ್ಮಾ ತನ್ನಾ ಕೂಡ ಚೆನ್ನಾಗಿ ಅಭಿನಯಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಹೀಗೆ 'ಫುಲ್ ಪ್ಯಾಕೆಜ್' ಮನರಂಜನೆಯ ಮಿಶ್ರಣದ ಈ ಚಿತ್ರ ಮತ್ತೆ ಬಂದಿದೆ, ಎಲ್ಲರೂ ಮತ್ತೆ ನೋಡುವಂತಾಗಿದೆ.

ವಿನಯ್ ನರ್ಕರ್ ನಿರ್ಮಾಣ, ರವೀಂದ್ರ ಎಚ್ ಪಿ ದಾಸ್ ನಿರ್ದೇಶನ ಚಿತ್ರಕ್ಕಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದರೂ ಗಾಂಧಿನಗರದ ಪಾಲಿಟೆಕ್ಸ್ ಗೆ ಬೇಸತ್ತು ರವೀಂದ್ರ ಚಿತ್ರದ ಪ್ರದರ್ಶನವನ್ನು ಮೂರೇ ದಿನಕ್ಕೆ ರದ್ದು ಪಡಿಸಿದ್ದರು. ಪ್ರೇಕ್ಷಕರ ಒತ್ತಾಯದ ಮೇರೆಗೆ ರವೀಂದ್ರ ಮಿತ್ರರಾದ ಲೀಲಾ ಶಂಕರ್ ಹಾಗೂ ನಾನಾಗೌಡ ಎಂಬವರು ಚಿತ್ರವನ್ನು ಮತ್ತೆ ಪ್ರದರ್ಶಿಸುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Kannada movie 'Mathe Banni Preethsona' is coming once again on Screen. It was released and taken back for only three days by director Ravindra in last June, 2011. Now, screening today, on 16th Dec. 2011 all over Karnataka again.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X