»   » ಮುಂಗಾರು ಮಳೆ ಕೃಷ್ಣಪ್ಪನ ಮೊಗದಲ್ಲಿ ನಗುವಿಲ್ಲ

ಮುಂಗಾರು ಮಳೆ ಕೃಷ್ಣಪ್ಪನ ಮೊಗದಲ್ಲಿ ನಗುವಿಲ್ಲ

Posted By:
Subscribe to Filmibeat Kannada
producer e krishnappa
ಮುಂಗಾರು ಮಳೆ ಕೃಷ್ಣಪ್ಪ ಎಗೈನ್ ಇನ್ ಟ್ರಬಲ್. ಆರ್ಥಿಕ ಬಿಕ್ಕಟ್ಟಿನ ಹೊಡೆತ ಕೃಷ್ಣಪ್ಪನವರಿಗೂ ಬಿದ್ದಿದೆ. ತಮ್ಮ ಒಡೆತನದ ಎರಡು ಗಾರ್ಮೆಂಟ್ ಫ್ಯಾಕ್ಟರಿಗಳಿಗೆ ಬೀಗ ಜಡಿದಿದ್ದಾರೆ. ಅಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ.

ವಿಚಾರ ಅದಲ್ಲ, ಅವರು ನಿರ್ಮಿಸಬೇಕಾಗಿದ್ದ 'ಮಾತೃಭೂಮಿ' ಚಿತ್ರ ಅಂಗಾತ ಮಲಗಿದೆ. ನಾಲ್ಕು ಕೋಟಿ ಬಜೆಟ್ ನ ಈ ಚಿತ್ರ ಸೆಟ್ಟೇರುವುದು ಅನುಮಾನವಾಗಿದೆ. ಬಸವೇಶ್ವರ ನಗರದ ಅವರ ಆಫೀಸು ಖಾಲಿ ಹೊಡೆಯುತ್ತಿದೆ. ಆರ್ಥಿಕ ಬಿಕ್ಕಟ್ಟಿಗೆ ಸಿಕ್ಕಿರುವ ಕೃಷ್ಣಪ್ಪ ಕಂಗಾಲಾಗಿದ್ದಾರೆ.

ಮುಂಗಾರು ಮಳೆ ಚಿತ್ರ ನಲವತ್ತು ಕೋಟಿ ಲಾಭ ಮಾಡಿದಾಗ ಪತ್ರಕರ್ತರೊಬ್ಬರು ಪ್ರಶ್ನಿಸಿದ್ದರು, ಅಷ್ಟು ದುಡ್ಡನ್ನು ಏನು ಮಾಡುತ್ತೀರಾ? ಎಂದು. ಇದಕ್ಕೆ ಕೃಷ್ಣಪ್ಪನವರು ಉಡಾಫೆಯ ಉತ್ತರ ನೀಡಿ ಜಾರಿಕೊಂಡಿದ್ದರು. ಬಿಡಿ ಮಾರಾಯ್ರೆ ಇದ್ಯಾವ ಲೆಕ್ಕ, ವರ್ಷಕ್ಕೆ ಐನೂರು ಕೋಟಿ ವ್ಯವಹಾರ ಮಾಡ್ತೀನಿ ನಲವತ್ತು ಕೋಟಿ ಏನು ಮಹಾ ಎಂದಿದ್ದರು. ಇ.ಕೃಷ್ಣಪ್ಪನವರಿಗೆ ಈಗ ಕಾಲವೆ ಉತ್ತರ ಹೇಳಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)
ಮುಂಗಾರು ಮಳೆ ಕೃಷ್ಣಪ್ಪನವರ 3ನೇ ಚಿತ್ರ ಆರಂಭ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada