For Quick Alerts
  ALLOW NOTIFICATIONS  
  For Daily Alerts

  ತಾನು ಬದುಕಿರೋದೆ ಅಭಿಮಾನಿಗಳಿಗೋಸ್ಕರ, ದರ್ಶನ್

  By Rajendra
  |

  ಬೆಂಗಳೂರಿನ ರಾಜರಾಜೇಶ್ವರಿ ನಗರಕ್ಕೆ ಅಭಿಮಾನಿ ಸಾಗರವೇ ಹರಿದು ಬರುತ್ತಿದೆ. ಕಾರಣ ಎಲ್ಲರಿಗೂ ಗೊತ್ತೇ ಇದೆ. ಇಂದು (ಫೆ.16) ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ. ದರ್ಶನ್ 35ನೇ ವಸಂತಕ್ಕೆ ಅಡಿಯಿಟ್ಟಿದ್ದಾರೆ. ಅಭಿಮಾನಿಗಳೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಸಂಭ್ರಮಿಸಿದರು.

  ಮಧ್ಯರಾತ್ರಿ 12ರ ಸಮಯದಲ್ಲಿ ಅಭಿಮಾನಿಗಳು ಪ್ರೀತಿಯಿಂದ ತಂದಿದ್ದ ಕೇಕನ್ನು ಕತ್ತರಿಸಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿದರು. ಮಂಡ್ಯ, ಮೈಸೂರು, ಶಿವಮೊಗ್ಗ ಹಾಗೂ ತುಮಕೂರಿನಿಂದ ದರ್ಶನ್ ಅವರ ಅಪಾರ ಅಭಿಮಾನಿ ಸಮೂಹ ಆಗಮಿಸಿತ್ತು.

  ಈ ಸಂದರ್ಭದಲ್ಲಿ ದರ್ಶನ್ ಮಾತನಾಡುತ್ತಾ, ತಾನು ಬದುಕಿರುವುದೇ ಅಭಿಮಾನಿಗಳಿಗಾಗಿ, ಅಭಿಮಾನಿಗಳಿಗೋಸ್ಕರ ಎಂದರು. ಇದೇ ಸಂದರ್ಭದಲ್ಲಿ ಅವರ ಹೊಸ ಚಿತ್ರ 'ಬುಲ್ ಬುಲ್ ಮಾತಡಕಿಲ್ವಾ' ಸೆಟ್ಟೇರುತ್ತಿದೆ. ಇದು ತೆಲುಗಿನ 'ಡಾರ್ಲಿಂಗ್' ರೀಮೇಕ್. ಆಕ್ಷನ್ ಕಟ್ ಹೇಳುತ್ತಿರುವವರು ಎಂಡಿ ಶ್ರೀಧರ್. (ಒನ್‌ಇಂಡಿಯಾ ಕನ್ನಡ)

  English summary
  Challenging star Darshan celebrates his 35th birthday with fans. He celebrated his birthday by cutting a big cake with his fans from neighbouring Tumkur district on Wednesday, 16th February 2012 at the strike of 12.00, midnight. At this moment he said that, my life is dedicated to fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X