»   » 'ಜಿಂಕೆಮರಿ'! ಜತೆ ಅರ್ಧಶತಕ ಬಾರಿಸಿದ ಯೋಗೀಶ್

'ಜಿಂಕೆಮರಿ'! ಜತೆ ಅರ್ಧಶತಕ ಬಾರಿಸಿದ ಯೋಗೀಶ್

Subscribe to Filmibeat Kannada

ಚಿತ್ರ ಬಿಡುಗಡೆಯಾದಾಗ ಪೋಸ್ಟರ್ ನೋಡಿ, ಇಂಥವರೆಲ್ಲಾ ಹೀರೋ ಆದ್ರೆ ಚಿತ್ರ ಓಡಲ್ಲ ಅಂದವರೇ ಹೆಚ್ಚು. ದುನಿಯಾ ಚಿತ್ರದಲ್ಲಿ ಮಾಡಿದ ಲೂಸ್ ಮಾದನ ಚಿತ್ರ ಕಣ್ರೋ, ಹೀರೊಯಿನ್ ಟಿವಿ ನಿರೂಪಕಿಯಂತೆ. ಏನೇ ಆದ್ರೂ ಆ ಜಿಂಕೆ ಮರಿನಾ ಸಾಂಗ್ ಸೂಪರ್ ಮಗಾ, ಅದಕ್ಕೆ ಡಾನ್ಸ್ ಮಾಸ್ಟರ್ ಇಮ್ರಾನ್ ಅಂತೆ. ಅದೇ ಗಣೇಶನ ಚಿತ್ರಕ್ಕೆ ಡಾನ್ಸ್ ಮಾಸ್ಟರ್ ಆಗಿದ್ದ ಹುಡುಗ. ಒಟ್ಟಿನಲ್ಲಿ, ಚಿತ್ರ ಬಿಡುಗಡೆಗೆ ಮುಂಚೇನೆ ಹಲವಾರು ಕುತೂಹಲಕ್ಕೆ ಕಾರಣವಾದ 'ನಂದ ಲವ್ಸ್ ನಂದಿತಾ' ಕೊನೆಗೆ ಪ್ರೇಕ್ಷಕರ ಕೃಪಾಕಟಾಕ್ಷಕ್ಕೆ ಸಿಕ್ಕು, 50 ದಿನಗಳನ್ನು ಪೂರೈಸಿದೆ.

ನಗರದ ಗ್ರೀನ್ ಹೌಸ್ ರೆಸ್ಟೋರೆಂಟ್ ನಲ್ಲಿ ಸಂತೋಷಕೂಟ ಆಚರಿಸಿಕೊಂಡ ನಂದ ನಂದಿತಾ ತಂಡದವರ ಸಂತೋಷಕ್ಕೆ ಎಣೆಯಿಲ್ಲ. ಚಿತ್ರ ಈಗಾಗಲೇ 75 ಲಕ್ಷ ಹಣ ಸಂಗ್ರಹಿಸಿದೆ.ನಂದನ ಪಾತ್ರದ ಯೋಗೀಶ್ ಅಭಿನಯ, ನೃತ್ಯ, ಮಾತುಗಾರಿಕೆ ಯುವ ಪ್ರೇಕ್ಷಕರನ್ನು ಸೆಳೆದಿದೆ. ನಿರೂಪಣೆಯಿಂದ ನಾಯಕಿ ಸ್ಥಾನಕ್ಕೆ ಜಿಗಿದ ಶ್ವೇತಾ ಅವರಿಗೆ ಜನ ತಮ್ಮನ್ನು ಜಿಂಕೆಮರಿ ಎಂದು ಕರೆಯುವುದನ್ನು ಕೇಳಿ, ಭೂಮಿ ಮೇಲೆ ನಾನಿಲ್ಲ ಎಂಬಂತಾಗಿದೆಯಂತೆ.

ಯೋಗೀಶ್ ಅವರ ತಂದೆ ಟಿ.ಪಿ .ಸಿದ್ದರಾಜು ಅವರು ದುನಿಯಾ ಚಿತ್ರ ನಿರ್ಮಿಸಿ ಇತಿಹಾಸ ಬರೆದ ಮೇಲೆ, ಈ ಚಿತ್ರದ ವಿತರಣೆ ಕಾರ್ಯ ಖುಷಿಕೊಟ್ಟಿದೆ. ಅದಕ್ಕಿಂತ ಹೆಚ್ಚಾಗಿ ತಮ್ಮ ಮಗನನ್ನು ಕನ್ನಡದ ಪ್ರೇಕ್ಷಕ ನಾಯಕನನ್ನಾಗಿ ಒಪ್ಪಿಕೊಂಡಿರುವುದು ಹೆಮ್ಮೆಯ ವಿಷಯ ಎನ್ನುತ್ತಾರೆ ಅವರು.

(ದಟ್ಸ್ ‌ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada