ಸೆಕ್ಸಿ ಪೋಸ್ಟರ್ ವಿವಾದಲ್ಲಿ ಸಿಕ್ಕಿಕೊಂಡ ನಯನತಾರಾ
ಹೊಸ ಬಾಳಿನ ಹೊಸಿಲಲಿ ನಿಂತಿರುವ ತಾರೆ ನಯನತಾರ ಈಗ ಹೊಸ ವಿವಾದಲ್ಲಿ ಸಿಕ್ಕಿಕೊಂಡಿದ್ದಾರೆ. ಅವರ ಅಭಿನಯದ ಹೊಚ್ಚ ಹೊಸ ತಮಿಳು ಚಿತ್ರ 'ಏಗನ್' ಇತ್ತೀಚೆಗೆ ಕೇರಳದಲ್ಲಿ ಬಿಡುಗಡೆ ಕಂಡಿತ್ತು. ಈ ಚಿತ್ರದಲ್ಲಿ ಅಜಿತ್ ಜೊತೆಗೆ ನಯನತಾರಾ ಅಭಿನಯಿಸಿದ್ದಾರೆ.
'ಏಗನ್' ಚಿತ್ರಕ್ಕೆ ಸಂಬಂಧಿಸಿದ ಭಿತ್ತಿಚಿತ್ರಗಳಲ್ಲಿ ನಯನತಾರಾ ತುಂಬಾ ಸೆಕ್ಸಿಯಾಗಿ ಕಾಣಿಸಿಕೊಂಡಿರುವುದು ಮಲ್ಲುಗಳ ಮನೋಭಾವಕ್ಕೆ ಧಕ್ಕೆ ತಂದಿದೆಯಂತೆ.ಈ ಸಂಬಂಧ ನಾಗರಾಜ್ ಎಂಬುವವರು ನಯನತಾರಾ ಸೇರಿದಂತೆ ಚಿತ್ರದ ನಿರ್ದೇಶಕ ರಾಜು ಸುಂದರಂ ಹಾಗೂ ನಿರ್ಮಾಪಕರ ವಿರುದ್ಧ ಕೋರ್ಟ್‌ನಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು.
ಸರಿಯಾದ ಸಾಕ್ಷ್ಯಾಧಾರಗಳಿಲ್ಲ ಎಂದು ನ್ಯಾಯಾಲಯ ಕೇಸನ್ನು ವಜಾಗೊಳಿಸಿತ್ತು. ಈ ಕೇಸನ್ನು ಮತ್ತೊಮ್ಮೆ ಪರಿಶೀಲಿಸುವಂತೆ ನಾಗರಾಜ್ ಮತ್ತೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಕೇಸಿಗೆ ಸಂಬಂಧಿಸಿದಂತೆ ಮರು ತನಿಖೆ ನಡೆಸಿ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ.
ಸದ್ಯಕ್ಕೆ ಉಪೇಂದ್ರ ಅಭಿನಯದ ಸೂಪರ್ ಚಿತ್ರದಲ್ಲಿ ನಯನತಾರಾ ಅಭಿನಯಿಸುತ್ತಿದ್ದಾರೆ. ಮೈಸೂರು ಹುಡುಗ, ಭಾರತದ ಮೈಕೇಲ್ ಜಾಕ್ಸನ್ ಎಂದೇ ಖ್ಯಾತರಾಗಿರುವ ಪ್ರಭುದೇವ ಅವರನ್ನು ಮದುವೆಯಾಗುವ ಸಿದ್ಧತೆಯಲ್ಲೂ ನಯನತಾರಾ ಬಿಜಿಯಾಗಿದ್ದಾರೆ.


Click it and Unblock the Notifications











