ಕರಣ್ ಜೊತೆ ಕಾಫಿ! ಇಂಡಿಯಾಗೆ ಪ್ಯಾರಿಸ್ ಹಿಲ್ಟನ್

ತಮ್ಮದೇ ಹೆಸರಿನ ರಿಯಾಲಿಟಿ ಶೋಗಳಿಂದ ಮತ್ತು ಸಣ್ಣಪುಟ್ಟ ಪಾತ್ರಗಳಿಂದ ದೊಡ್ಡ ಹೆಸರು ಗಿಟ್ಟಿಸಿಕೊಂಡಿರುವ ಹಿಲ್ಟನ್ ಅವರ ಆಗಮನದ ಸುದ್ದಿಯೇ ಪಡ್ಡೆಗಳ ಎದೆಬಡಿತವನ್ನು ಹೆಚ್ಚಿಸಿದೆ. ಫ್ಯಾಷನ್ ಡಿಸೈನರ್ ಆಗಿ ತಮ್ಮ ಬ್ರಾಂಡ್ ಬಟ್ಟೆಗಳನ್ನು ಬಿಕರಿ ಮಾಡಲು ಅವರು ಭಾರತಕ್ಕೆ ಆಗಮಿಸುತ್ತಿದ್ದಾರೆ.
ಚಪ್ಪಲಿ, ಹ್ಯಾಂಡ್ ಬ್ಯಾಗ್, ಟಿ-ಶರ್ಟ್, ಸ್ಯಾನಿಟಿ ಬಬಲ್ ಟಾಪ್ ಗಳನ್ನು ಮಾರಾಟ ಮಾಡಲು ಬರುತ್ತಿರುವ ಮಾಟಗಾತಿ, ಮೂವತ್ತರ ಬೆಡಗಿಗೆ ಒಂದು ತಹತಹ ಶುರುವಾಗಿದೆ. ಏನಾದರು ಮಾಡು ಮೊದಲು ಸುದ್ದಿಯಲ್ಲಿರು ಎಂಬುದನ್ನು ಶಿರಸಾವಹಿಸಿ ಪಾಲಿಸುತ್ತಿರುವ ಹಿಲ್ಟನ್ ರನ್ನು ಘಟಾನುಘಟಿ ಸಂದರ್ಶಕರೊಬ್ಬರು ಸಂದರ್ಶನ ಮಾಡಬೇಕಂತೆ.
ಕೊನೆಗೂ ಸಂಪರ್ಕಿಸಿದ್ದು ಬಾಲಿವುಡ್ ಡ್ರಾಮಾ ಕಿಂಗ್ ಕರಣ್ ಜೋಹರ್ ಅವರನ್ನು. ಅವರ 'ಕಾಫಿ ವಿತ್ ಕರಣ್' ನಾಲ್ಕನೇ ಸೀಸನ್ ಮುಗಿದಿದ್ದರೂ, ಹಿಲ್ಟನ್ ಗಾಗಿಯೇ ವಿಶೇಷ ಎಸಿಸೋಡ್ ಮಾಡಲು ಕರಣ್ ಮತ್ತು ಸ್ಟಾರ್ ವರ್ಲ್ಡ್ ಒಪ್ಪಿಕೊಂಡಿದ್ದಾರೆ. ಕರಣ್ ಜೊತೆ ಫಿಲ್ಟರ್ ಕಾಫಿ ಹೀರಲು ಹಿಲ್ಟನ್ ಕೂಡ 'ಯಸ್' ಎಂದಿದ್ದಾರೆ.
ಅಂತರಂಗದಲ್ಲಿ ಬಚ್ಚಿಟ್ಟುಕೊಂಡಿರುವ ಅನೇಕ ರಹಸ್ಯಗಳನ್ನು ಬಣ್ಣಬಣ್ಣದ ಮಾತುಗಳ ಮುಖಾಂತರವೇ ಬಯಲಿಗೆಳೆಯುವಲ್ಲಿ ನಿಸ್ಸೀಮರಾಗಿರುವ ಕರಣ್, ಬಚ್ಚಿಡಲು ಏನೂ ಉಳಿದೇ ಇಲ್ಲ ಎಂಬಂತೆ ಜೀವಿಸಿರುವ ಪ್ಯಾರಿಸ್ ಹಿಲ್ಟನ್ ರಿಂದ ಏನೇನು ರಹಸ್ಯಗಳನ್ನು ಹೊರತರಲಿದ್ದಾರೋ?


Click it and Unblock the Notifications











