For Quick Alerts
  ALLOW NOTIFICATIONS  
  For Daily Alerts

  ಪೂಜಾ ಗಾಂಧಿ ರಾಜಕೀಯ ಎಂಟ್ರಿ ಹಿಂದೆ ಈ ಕೃಷ್ಣಪ್ಪ

  By Rajendra
  |

  ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಲ್ಲಿ ಸಿನಿಮಾ ತಾರೆಗಳಆಕರ್ಷಣೆ ಇದೆ. ಕಾಂಗ್ರೆಸ್‌ನಲ್ಲಿ ಗೋಲ್ಡನ್ ಗರ್ಲ್ ರಮ್ಯಾ ಇದ್ದರೆ ಬಿಜೆಪಿಯಲ್ಲಿ ತಾರಾ ಇದ್ದಾರೆ. ಜೆಡಿಎಸ್‌ನಲ್ಲಿ ದೇವೇಗೌಡ ಹಾಗೂ ಕುಮಾರಸ್ವಾಮಿ, ರೇವಣ್ಣ ಬಿಟ್ಟರೆ ಉಳಿದಂತೆ ಸ್ಟಾರ್ ಆಕರ್ಷಣೆ ಇಲ್ಲ.

  ಇದನ್ನು ತಡವಾಗಿ ಅರ್ಥೈಸಿಕೊಂಡ ಜೆಡಿಎಸ್ ಕಡೆಗೂ ಪೂಜಾಗಾಂಧಿಯನ್ನು ತಮ್ಮ ಪಕ್ಷಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ. ಇಷ್ಟಕ್ಕೂ ಈ ಆಪರೇಷನ್ ಸ್ಯಾಂಡಲ್‌ವುಗೆ ಕಾರಣರಾದವರು ಯಾರು? ಮೂಲಗಳ ಪ್ರಕಾರ ಜೆಡಿಎಸ್‌ನಲ್ಲಿ ಕ್ರಿಯಾಶೀಲರಾಗಿರುವ ಎಂಎಲ್‌ಸಿ ಈ ಕೃಷ್ಣಪ್ಪ ಎಂಬ ಅಂಶ ಬೆಳಕಿಗೆ ಬಂದಿದೆ.

  'ಮುಂಗಾರು ಮಳೆ' ಚಿತ್ರದಿಂದಲೂ ಪೂಜಾಗಾಂಧಿಗೆ ಕೃಷ್ಣಪ್ಪ ಗೊತ್ತು. ಹಾಗಾಗಿ ಅವರೇ ಈ ಆಪರೇಷನ್ ಸೂತ್ರಧಾರ ಎನ್ನಲಾಗಿದೆ. ಈ ಕೃಷ್ಣಪ್ಪನ ಸಲಹೆ, ಸೂಚನೆಗಳ ಮೇರೆಗೆ ಪೂಜಾಗಾಂಧಿ ರಾಜಕೀಯ ಕ್ಷೇತ್ರಕ್ಕೆ ಧುಮುಕಿರುವುದು ಎಂಬ ಬಲವಾದ ಅನುಮಾನ ಗಾಂಧಿನಗರದಿಂದ ರಾಮನಗರದ ತನಕ ಹಬ್ಬಿದೆ. (ಏಜೆನ್ಸೀಸ್)

  English summary
  Who is the man behind actress Pooja Gandhi's political entry? The sourcess reveals producer cum politician E. Krishnappa is the man behind actress political entry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X