ಮೂರು ಗುಟ್ಟು ಒಂದು ಸುಳ್ಳು ಒಂದು ನಿಜ!
'ನಮ್ಮೂರ ಮಂದಾರ ಹೂವೆ' ಚಿತ್ರದ ಬಳಿಕ ನಟ ರಮೇಶ್ ಮತ್ತೊಮ್ಮೆ ಮೀಸೆ ಬೋಳಿಸಿಕೊಂಡಿದ್ದಾರೆ. ಅವರು ಹೀಗೆ ಮೀಸೆ ತೆಗೆದಿರುವುದು 'ಮೂರು ಗುಟ್ಟು ಒಂದು ಸುಳ್ಳು ಒಂದು ನಿಜ' ಹೇಳಲು. ಹೌದು ರಮೇಶ್ ಅರವಿಂದ್ ಅವರ ಹೊಸ ಚಿತ್ರಕ್ಕಾಗಿ ಈ ಹೊಸ ಗೆಟಪ್.
ಜೂನ್ 10ರಂದು ಸೆಟ್ಟೇರಿದ ಈ ಚಿತ್ರ ಸದ್ಯಕ್ಕೆ ಕುಶಾಲನಗರದಲ್ಲಿ ಚಿತ್ರೀಕೃತವಾಗುತ್ತಿದೆ. ದಿನೇಶ್ ಬಾಬು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ರಮೇಶ್ ಹಳ್ಳಿ ಯುವಕನಾಗಿ ಕಾಣಿಸಲಿದ್ದಾರೆ. ಜತೆಗೆ ಪ್ರೇಕ್ಷಕರನ್ನು ನಕ್ಕು ನಗಿಸಲು ಹಾಸ್ಯ ನಟ ಕೋಮಲ್ ಇರುತ್ತಾರೆ. ರಾಜೀವ್, ಪ್ರಶಾಂತ್ ನಾಯ್ಡು ಮತ್ತು ಸುನಿಲ್ ಚಿತ್ರದ ನಿರ್ಮಾಪಕರು.
ಏತನ್ಮಧ್ಯೆ ರಮೇಶ್ ಮತ್ತೊಂದು ರೀಮೇಕ್ ಚಿತ್ರದ ನಿರ್ದೇಶನಕ್ಕೆ ಕೈಹಾಕಿದ್ದಾರೆ. ತೆಲುಗಿನ ಚಂದ್ರಲೇಖಾ ಎಂಬ ಚಿತ್ರವನ್ನು ಕನ್ನಡಕ್ಕೆ ತರುತ್ತಿದ್ದಾರೆ. ಬಿ.ರಾಮಮೂರ್ತಿ ಈ ಚಿತ್ರವನ್ನು ತೆಲುಗಿನಲ್ಲಿ ನಿರ್ದೇಶಿಸಿದ್ದರು. ಕನ್ನಡ ಚಿತ್ರಕ್ಕೆ ಗಣೇಶ್ ಮತ್ತು ಉಮೇಶ್ ಬಣಕಾರ್ ನಿರ್ಮಾಪಕರು.
(ದಟ್ಸ್ ಕನ್ನಡ ಚಿತ್ರವಾರ್ತೆ)
More from Filmibeat
kannada movies ರಮೇಶ್ ಅರವಿಂದ್ ramesh aravind ಕನ್ನಡಸಿನಿಮಾ ದಿನೇಶ್ ಬಾಬು dinesh baboo ಮೂರು ಗುಟ್ಟು ಒಂದು ಸುಳ್ಳು ಒಂದು ನಿಜ mooru guttu ondhu sullu ondhu nija


Click it and Unblock the Notifications











