ಪ್ರಿಯಾಂಕ್ ಖರ್ಗೆ ವಿರುದ್ಧ ನಟಿ ರಮ್ಯಾ ಸ್ಪರ್ಧೆ

By Rajendra

ಗೋಲ್ಡನ್ ಗರ್ಲ್ ರಮ್ಯಾ ರಾಜ್ಯ ಯುವ ಕಾಂಗ್ರೆಸ್ ಚುನಾವಣಾ ಕಣಕ್ಕಿಳಿದಿರುವುದು ಸಮಸ್ತ ಕನ್ನಡಿಗರಿಗೂ ಗೊತ್ತಿರುವ ಸಂಗತಿ. ಈ ಚುನಾವಣೆಯಲ್ಲಿ ರಮ್ಯಾಗೆ ಪ್ರಬಲ ಸ್ಪರ್ಧೆ ಎದುರಾಗಿದೆ. ಬೂತ್ ಮಟ್ಟದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ರಮ್ಯಾಗೆ ಎದುರಾಳಿ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಪುತ್ರ ಪ್ರಿಯಾಂಕ್ ಖರ್ಗೆ. ಸಖತ್ ಫೈಟ್ ನಿರೀಕ್ಷಿಸಲಾಗಿದೆ.

ಈ ಮೂಲಕ ರಾಜ್ಯ ಯುವ ಕಾಂಗ್ರೆಸ್ ಚುನಾವಣಾ ಕಣದಲಿ ರಂಗಿನಾಟಕ್ಕೆ ವೇದಿಕೆ ಸಿದ್ಧವಾಗಿದೆ. ಸೆ.16 ರಿಂದ 21ರವರೆಗೆ ರಾಜ್ಯದಲ್ಲಿ ಯುವ ಕಾಂಗ್ರೆಸ್ ಚುನಾವಣೆ ನಡೆಯಲಿದೆ. "ಮೊದಲು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಬಳಿಕ ನೋಡೋಣ ಅಧ್ಯಕ್ಷ ಸ್ಥಾನ ತಮಗೆ ಎಷ್ಟರ ಮಟ್ಟಿಗೆ ಫಿಟ್ ಆಗುತ್ತೆ" ಎಂದು ಚುಟುಕು ಉತ್ತರ ನೀಡಿದ್ದಾರೆ ರಮ್ಯಾ.

ಸೆ.16ರಂದು ನಡೆಯಲಿರುವ ಬೂತ್ ಮಟ್ಟದ ಚುನಾವಣೆಗೆ ತಾನು ಸ್ಪರ್ಧಿಸುತ್ತಿದ್ದೇನೆ. ಶಾಂತಿನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ. ಇದನ್ನು ಸೂಕ್ತ ವೇದಿಕೆಯಾಗಿ ಬಳಸಿಕೊಂಡು ಜನಕ್ಕೆ ತಮ್ಮ ಕೈಲಾದ ಸಹಾಯ ಮಾಡುತ್ತೇನೆ. ಶಾಂತಿನಗರದ ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂಬ ವಿಶ್ವಾಸವನ್ನು ರಮ್ಯಾ ವ್ಯಕ್ತಪಡಿಸಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Kannada actress Ramya who filed her nomination to booth level elections of the Indian Youth Congress may probably contest against Priyank Kharge, son of Union minister Mallikarjun Kharge. The elections of the Indian Youth Congress (IYC), will be held from September 16 to 21 in Karnataka.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X