ಭಟ್ಟರ ಹಾಡಿಗೆ ರೋಮಿಯೋ-ಜ್ಯೂಲಿಯಟ್ ನೃತ್ಯ
ಶೈಲೂ ಚಿತ್ರದ ಮೂಲಕ, ತಾನು 'ಸಕಲ ಪಾತ್ರಕ್ಕೂ ಸಲ್ಲುವ' ನಾಯಕ ಎಂಬುದನ್ನು ನಿರೂಪಿಸಿರುವ ಗೋಲ್ಡನ್ ಸ್ಟಾರ್ ಇದೀಗ 'ರೋಮಿಯೋ' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಶೈಲೂ ಚಿತ್ರದ ಯಶಸ್ಸಿನಿಂದ ಖುಷಿಯಾಗಿರುವ ಈ ಗೋಲ್ಡ್, ರೋಮಿಯೋ ಮೇಲೂ ಅಪಾರ ನಿರೀಕ್ಷೆ ಇಟ್ಟಿದ್ದಾರೆ.
ಗಣೇಶ್ ತಾನೊಬ್ಬ ಎಲ್ಲಾ 'ಬೈಟು ಬೆಡ್ ಶೀಟ್ ನಲ್ಲಿ ಒಂದೇ ತಲೆದಿಂಬು ಇಟ್ಕೊಂಡು ಸೀಲಿಂಗು ಫ್ಯಾನಿ ನೋಡಿ ಆಮೇಲಿಂದು ಆಮೇಲೆ' ಎಂಬ ಯೋಗರಾಜ ಭಟ್ ರ ಹಾಡು ಹೇಳಿ ವಠಾರದ ಮಂದಿ ಹೊಸದಾಗಿ ಮದುವೆಯಾಗಿ ಬಂದ ನಾಯಕ-ನಾಯಕಿಯನ್ನು ಸ್ವಾಗತಿಸುತ್ತಾರೆ.
ಗಣೇಶ್, ಭಾವನಾ, ಸುಧಾ ಬೆಳವಾಡಿ ಅಭಿನಯಿಸಿದ ಈ ಗೀತೆಯ ಚಿತ್ರೀಕರಣ 'ರೋಮಿಯೋ' ಚಿತ್ರಕ್ಕಾಗಿ ಯಶವಂತಪುರದ ಬಳಿ ನಡೆಯಿತು. ಪಿಸಿ ಶೇಖರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನಟರಾಜ್ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯಾ ಸಂಗೀತ, ವೈದಿ ಅವರ ಛಾಯಾಗ್ರಹಣವಿದೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Gloden Star Ganesh and Bhavana is in Romeo movie. They performed for song of yogaraj Bhat.


Click it and Unblock the Notifications











