Don't Miss!
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಪ್ರಕರಣ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಂಡ ಹೆಂಡತಿ ಸಂಜನಾ ಟಾಪ್ಲೆಸ್ ಸುದ್ದಿ ಬೇಸ್ ಲೆಸ್!
'ಗಂಡ ಹೆಂಡತಿ' ಖ್ಯಾತಿಯ ಸಂಜನಾ ತೆಲುಗಿನಲ್ಲಿ ಬ್ಯುಸಿಯಾಗಿರುವುದು ಗೊತ್ತೆ ಇದೆಯಲ್ಲಾ. ಈಗವರು 'ದುಶ್ಯಾಸನ' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಂಜನಾ ಟಾಪ್ ಲೆಸ್ನಲ್ಲಿ ಕಾಣಿಸಲಿದ್ದಾರೆ ಎಂಬ ಸುದ್ದಿ ಪಡ್ಡೆಗಳ ಪಾಲಿಗೆ ಪುಳಕ ನೀಡಿತ್ತು. ಆದರೆ ಈ ಸುದ್ದಿಯನ್ನು ಸಂಜನಾ ಅಲ್ಲಗಳೆಯುವ ಮೂಲಕ ತಣ್ಣೀರೆರಚಿದ್ದಾರೆ.
"ಎಷ್ಟೇ ದೊಡ್ಡ ನಟನಾಗಿರಲಿ ನಾನು ಈ ರೀತಿಯ ಅಸಭ್ಯ ದೃಶ್ಯಗಳಲ್ಲಿ ನಟಿಸುವುದಿಲ್ಲ" ಎಂದು ಸಂಜನಾ ಸ್ಪಷ್ಟಪಡಿಸಿದ್ದಾರೆ. ಚಿತ್ರದಲ್ಲಿ ಸನ್ನಿವೇಶವೊಂದಕ್ಕೆ ಚರ್ಮದ ಬಣ್ಣದ ಬಟ್ಟೆಯನ್ನು ಬಳಲಾಗಿದೆ. ಖಳನಟ ಮತ್ತು ಈಕೆಯ ನಡುವಿನ ಸನ್ನಿವೇಶವೊಂದರಲ್ಲಿ ಬಟ್ಟೆ ಹರಿದುಹೋಗುತ್ತದಂತೆ. ಅದನ್ನು ಕೊಂಚ ಮಸುಕು ಮಾಡಿ ತೋರಿಸಲಾಗಿದೆ. ಅದನ್ನೇ ಟಾಪ್ ಲೆಸ್ ದೃಶ್ಯ ಎಂದು ಬಿಂಬಿಸಲಾಗಿದೆ ಎಂದು ಸಂಜನಾ ಹೇಳಿದ್ದಾರೆ.
ಈ ಹಿಂದೆ ಕ್ರಿಕೆಟಿಗ ಶ್ರೀಶಾಂತ್ಗೆ ಚುಂಬನ ನೀಡುವ ಮೂಲಕ ಸಂಜನಾ ಸಖತ್ ಸುದ್ದಿ ಮಾಡಿದ್ದರು. ಗೋವಾ ತೀರದಲ್ಲಿ ಶ್ರೀಶಾಂತ್ ನನ್ನು ಅಪ್ಪಿ ಮುದ್ದಾಡಿ ಹೊಸ ವರ್ಷವನ್ನು ಗಲ್ ರಾಣಿ ಬರಮಾಡಿಕೊಂಡಿದ್ದರು. ಆದರೆ ಚುಂಬನ, ಬಾಹುಬಂಧನ, ಆಲಿಂಗನ ಎಂತಹದ್ದು ಇಲ್ಲ ಎಂದು ಸಂಜನಾ ಬಳಿಕ ಸಮಜಾಯಿಷಿ ನೀಡಿದ್ದರು.