ಜೂನ್ ತಿಂಗಳ ಕೊನೆಗೆ ಶಂಭೋ ಶಂಕರ
ಮಸ್ತಾನ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ 'ಶಂಭೋ ಶಂಕರ' ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ. ಚಿತ್ರ ಈ ತಿಂಗಳ ಕೊನೆಗೆ ಬಿಡುಗಡೆಯಾಗಲಿದೆ ಎಂದು ಚಿತ್ರದ ಪ್ರಧಾನ ನಿರ್ದೆಶಕರಾದ ಚಿಂದೋಡಿ ಬಂಗಾರೇಶ್ ತಿಳಿಸಿದ್ದಾರೆ.
ಹಿಂದೆ 'ಎಷ್ಟು ನಗ್ತಿ ನಗು' ಎಂಬ ಜನಪ್ರಿಯ ನಾಟಕವೊಂದನ್ನು ಸಿನೆಮಾ ಮಾಡಿದ ಚಿಂದೋಡಿ ಶ್ರೀಕಂಠೇಶ್ ತಮ್ಮ ಸಂಸ್ಥೆಯ ಮೂಲಕ 'ಶಂಭೋ ಶಂಕರ' ಚಿತ್ರವನ್ನು ನಿರ್ಮಿಸಿದ್ದಾರೆ. ಸಿ.ವಿ.ಶಿವಶಂಕರ್, ಹಂಸಲೇಖಾ, ಎಸ್.ಮೋಹನ್ ಮತ್ತು ಚಿಂದೋಡಿ ಬಂಗಾರೇಶ್ ರಚಿಸಿರುವ ಗೀತೆಗಳಿಗೆ ಎಂ.ಎಸ್.ಮಾರುತಿ ಅವರ ಸಂಗೀತ ನೀಡಿದ್ದಾರೆ.
ಬಿ.ಎಲ್.ಬಾಬು ಅವರ ಛಾಯಾಗ್ರಹಣವಿರುವ ಚಿತ್ರದ ತಾರಾಬಳಗದಲ್ಲಿ ನವೀನ್‌ಕೃಷ್ಣ, ಮೋಹನ್, ಚಿಂದೋಡಿ ವಿಜಯಕುಮಾರ್, ಶ್ರೀನಿವಾಸಮೂರ್ತಿ, ಯಮುನಾ, ಅಶ್ವಿನಿ, ಶ್ರೀಗೌರಿ, ಸಂಜನ, ರೂಪಶ್ರೀ ಮುಂತಾದವರು ಮುಂತಾದವರಿದ್ದಾರೆ.
ಶಂಭೋ ಶಂಕರ ಹಂಸಲೇಖ ನವೀನ್ ಕೃಷ್ಣ ಮೋಹನ್ ಚಿಂದೋಡಿ ವಿಜಯ ಕುಮಾರ್ ಶ್ರೀನಿವಾಸಮೂರ್ತಿ shambho shankara naveen krishna hamsalekha mohan chindodi vijayakumar srinivasa murthy


Click it and Unblock the Notifications