ಜೋಗಯ್ಯ ಮರೆತುಬಿಡಿ, ಎಂಜಾಯ್ 'ಶಿವ' ಅಂದ ಶಿವಣ್ಣ

ಪ್ರೇಮ್ ನಿರ್ದೇಶನದ 'ಜೋಗಯ್ಯ' ಚಿತ್ರ ಸೋತಿದೆ ಎಂಬುದು ಶಿವರಾಜ್ ಕುಮಾರ್ ಮಾತಿನಿಂದ ಪದೇ ಪದೇ ಸ್ಪಷ್ಟವಾಗುತ್ತಿದೆ. ಈಗ ಆ ಸೋಲಿನಿಂದ ಹೊರಬಂದು ಓಂ ಪ್ರಕಾಶ್ ರಾವ್ ನಿರ್ದೇಶನದ 'ಶಿವ' ಚಿತ್ರದಲ್ಲಿ ತೊಡಗಿಸಿಕೊಂಡಿರುವ ಶಿವಣ್ಣ ಜೋಗಯ್ಯ ಸಿನಿಮಾ ಮರೆಯಲು ಹೇಳಿದ್ದಾರೆ.

'ಶಿವ' ಚಿತ್ರಕ್ಕಾಗಿ ಹಾಕಲಾಗಿದ್ದ ಸ್ಮಶಾನದ ಸೆಟ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಶಿವಣ್ಣ, ಈ ಚಿತ್ರ ಅಭಿಮಾನಿಗಳನ್ನು ಸೀಟಿನ ತುದಿಯಲ್ಲಿ ತಂದು ಕೂರಿಸಲಿದೆ. ಹೀರೋಯಿಸಂ ಇಲ್ಲಿ ಪ್ರಧಾನ. ಖಂಡಿತಾ ಜೋಗಯ್ಯದಲ್ಲಿ ಆಗಿರುವಂತೆ ಇಲ್ಲಿ ಯಾರಿಗೂ ನಿರಾಸೆಯಾಗದು" ಎಂದಿದ್ದಾರೆ. 'ಗ್ಲಾಮರ್ ಡಾಲ್' ರಾಗಿಣಿ ಶಿವಣ್ಣನ ನಾಯಕಿ.

ಈ ಬಗ್ಗೆ ಓಂ ಪ್ರಕಾಶ್ ರಾವ್ "ನಾನು ಎಕೆ47 ನಲ್ಲಿ ನೋಡಿದ ಶಿವಣ್ಣನಿಗೂ, ಇಂದಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಈಗ ಶಿವಣ್ಣ ಪ್ರಬುದ್ಧ ನಾಯಕ. ಸಿನಿಮಾ ಸುಧಾರಣೆಗಾಗಿ ಸಲಹೆ ನೀಡುವಷ್ಟು ಈಗ ಬೆಳೆದಿದ್ದಾರೆ. ಶಿವ ಈಗಿನ ಜಮಾನಕ್ಕೆ ಹೊಂದಿಕೆಯಾಗುವ ಸಿನಿಮಾ. ಖಂಡಿತಾ 'ಟ್ರೆಂಡ್ ಸೆಟ್ಟರ್' ಆದರೂ ಅಚ್ಚರಿಯಿಲ್ಲ. ನನ್ನ ಎಲ್ಲಾ ಚಿತ್ರಗಳಿಗಿಂತ ಇದು ಸ್ಟೈಲಿಶ್" ಅಂದಿದ್ದಾರೆ ಓಂ. (ಒನ್ ಇಂಡಿಯಾ ಕನ್ನಡ)

More from Filmibeat

English summary
Actor Shiavaraj Kumar tells to forget Jogayya movie failure and hopes in upcoming movie Shiva.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X