ದರ್ಶನ್ ನಾಯಕನಾಗಿ ಕನ್ನಡಕ್ಕೆ ಸೋನಂ ಕಪೂರ್
'ಸಾವರಿಯಾ' ಚಿತ್ರದ ಮೂಲಕ ಬಾಲಿವುಡ್‌ಗೆ ಅಡಿಯಿಟ್ಟ ಬೆಡಗಿ ಸೋನಂ ಕಪೂರ್ ಕನ್ನಡ ಚಿತ್ರದಲ್ಲಿ ಅಭಿನಯಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಅವರ ಬಯಕೆಯನ್ನು ಪೂರೈಸಲಿದ್ದಾರೆ 'ಮಳೆಬಿಲ್ಲೆ' ಖ್ಯಾತಿಯ ನಿರ್ದೇಶಕ ಮಹೇಶ್ ಸುಖಧರೆ.
ಸೋನಂ ಅವರ ತಂದೆ ಅನಿಲ್ ಕಪೂರ್ ಮೊದಲು ಬಣ್ಣದ ಲೋಕಕ್ಕೆ ಪರಿಚಯವಾಗಿದ್ದು ಕನ್ನಡ ಚಿತ್ರ 'ಪಲ್ಲವಿ ಅನುಪಲ್ಲವಿ' ಮೂಲಕ. ಹಾಗಾಗಿ ಕನ್ನಡದ ಮೇಲೆ ಸೋನಂಗೆ ಅಪಾರ ಮೋಹವಿದೆಯಂತೆ. ಒಮ್ಮೆಯಾದರೂ ಕನ್ನಡ ಚಿತ್ರದಲ್ಲಿ ಅಭಿನಯಿಸಬೇಕು ಎಂದು ತಮ್ಮ ತೀರದ ಬಯಕೆಯನ್ನು ಆಪ್ತರ ಬಳಿ ತೋಡಿಕೊಂಡಿದ್ದಾರೆ.
ಸೋನಂನ ಈ ಮನದಾಳದ ಆಸೆ ಮಹೇಶ್ ಸುಖಧರೆ ಕಿವಿಗೆ ಬಿದ್ದಿದ್ದು ಅವರು ಜಾಗೃತರಾಗಿ ಆಕೆಯನ್ನು ಕನ್ನಡಕ್ಕೆ ಕರೆತರುವ ಪ್ರಯತ್ನದಲ್ಲಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟ. ದರ್ಶನ್ ಜೊತೆಗೂ ಈಗಾಗಲೆ ಚರ್ಚಿಸಿದ್ದು ಅವರು ಈ ನವಿರು ಪ್ರೇಮಕಥೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನುತ್ತಾರೆ ಸುಖಧರೆ.
ತೆಲುಗು, ತಮಿಳಿನಲ್ಲಿ ಮಿಂಚುತ್ತಿರುವ ಬೆಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ ಈ ಚಿತ್ರದ ಮತ್ತೊಬ್ಬ ನಾಯಕಿ. ಸುಖಧರೆ ಅವರು 1998ರಲ್ಲಿ ನಿರ್ದೇಶಿಸಿದ್ದ 'ಸಂಭ್ರಮ' ಚಿತ್ರದ ಮಾದರಿಯಲ್ಲಿರುತ್ತದಂತೆ ಈ ಚಿತ್ರವಿರುತ್ತದಂತೆ. ಭಾರಿ ಬಜೆಟ್‌ನ ಈ ಚಿತ್ರಕ್ಕೆ ಸುಖಧರೆ ತೆರೆಮರೆ ಕಸರತ್ತುಗಳು ನಡೆಯುತ್ತಿವೆ. (ಏಜೆನ್ಸೀಸ್)
More from Filmibeat
English summary
Bollywood actress Sonam Kapoor wish to act in Kannada films. Her father Anil Kapoor introduced silver screen with Kannada film Pallavi Anu Pallavi. So the actress exprssed her desire to act in Kannada films at least one time. 'Male Bille' fame director Mahesh Sukhadhare peg away to bring Sonam to Kannada. Challenging star Darshan may plays lead role.


Click it and Unblock the Notifications











