ಸ್ವದೇಶ,ವಿದೇಶ ಸುತ್ತಿ ಬಂದ 'ಪೊರ್ಕಿ'
ಛಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದಲ್ಲಿ ಮೂಡಿ ಬರುತ್ತಿರುವ ಬಹು ನಿರೀಕ್ಷೆಯ ಚಿತ್ರ 'ಪೊರ್ಕಿ'. ಸ್ವದೇಶ ಸೇರಿದಂತೆ ವಿದೇಶದ ರಮಣೀಯ ಸ್ಥಳಗಳಲ್ಲಿ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರೈಸಿರುವ 'ಪೊರ್ಕಿ' ಚಿತ್ರಕ್ಕೆ ರಾಜನ್ ಸ್ಟೂಡಿಯೋದಲ್ಲಿ ಸ್ಪೆಷಲ್ ಎಫೆಕ್ಟ್ ಅಳವಡಿಸಲಾಗುತ್ತಿದೆ ಎಂದು ನಿರ್ಮಾಪಕ ದತ್ತಾತ್ರೇಯ ಬಚ್ಚೇಗೌಡ ತಿಳಿಸಿದ್ದಾರೆ.
ಖ್ಯಾತ ನಿರ್ದೇಶಕ ಎಂ.ಡಿ.ಶ್ರೀಧರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 'ಅಪಾರ ವೆಚ್ಚದಲ್ಲಿ ಮೂಡಿಬಂದಿರುವ ಈ ಚಿತ್ರ ಪ್ರೇಕ್ಷಕರಿಗೆ ಪರಿಶುದ್ಧ ರಂಜನೆ ನೀಡಲಿದೆ ಹಾಗೂ ವಿ.ಹರಿಕೃಷ್ಣರ ಸಂಗೀತ ಸಂಯೋಜನೆಯ ಚಿತ್ರದ ಹಾಡುಗಳು ಕೇಳಲು ಇಂಪಾಗಿದ್ದು, ಸದ್ಯದಲ್ಲೇ ಧ್ವನಿಸುರುಳಿ ಬಿಡುಗಡೆಯಾಗಲಿದೆ ಎನ್ನುತ್ತಾರೆ ನಿರ್ದೇಶಕರು.
ಪತ್ರಕರ್ತ ಗಣೇಶ್‌ಕಾಸರಗೋಡು ಅರ್ಪಿಸುತ್ತಿರುವ ಈ ಚಿತ್ರ ದತ್ತ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿದೆ. ನಿರ್ದೇಶಕರೇ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ. ಕೃಷ್ಣಕುಮಾರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸಂತೋಷ್ ಪೈ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
ಮೋಹನ್ ಕಲಾ ನಿರ್ದೇಶನ, ರವಿವರ್ಮ ಸಾಹಸ, ಸೌಂದರ್‌ರಾಜ್ ಸಂಕಲನ ಹಾಗೂ ಬಿ.ಎ.ಮಧು ಅವರ ಸಂಭಾಷಣೆಯಿರುವ ಚಿತ್ರದ ತಾರಾಬಳಗದಲ್ಲಿ ದರ್ಶನ್, ಪ್ರಣೀತಾ, ಅವಿನಾಶ್, ಆಶೀಷ್ ವಿದ್ಯಾರ್ಥಿ, ಶೋಭ್‌ರಾಜ್, ವಿನಾಯಕರಾಮ, ಮನೋಜ್, ಧರ್ಮ, ಸಂಗೀತಾ ಶೆಟ್ಟಿ, ಚಿತ್ರಾಶೆಣೈ, ಸಾಧುಕೋಕಿಲಾ, ಶರಣ್ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರ ವಾರ್ತೆ)


Click it and Unblock the Notifications











