ಶ್ರೀನಗರ ಕಿಟ್ಟಿ ಕೈಗೆ ಕ್ವಾರ್ಟರ್ ಕೊಟ್ಟ ಸಾಧು!

By Rajendra

'ನೈಂಟಿ' ಕಿಕ್‌ನಲ್ಲಿ ತೇಲಾಡಿದ ಹಾಸ್ಯ ನಟ ಕಮ್ ಚಲನಚಿತ್ರ ನಿರ್ದೇಶಕ ಸಾಧುಕೋಕಿಲ ಈಗ 'ಕ್ವಾರ್ಟರ್‌'ಗೆ ಆರ್ಡರ್ ಮಾಡಿದ್ದಾರೆ. ಸಾಮಾನ್ಯವಾಗಿ ಕ್ವಾರ್ಟರ್, ನೈಂಟಿ, ಫುಲ್, ಪಿಂಟ್ ಎಂಬ ಪದಗಳು ಎಣ್ಣೆಹಾಕುವ ಗುಂಡಣ್ಣರಿಗೆ ಚಿರಪರಿಚಿತ. ಈಗ ಈ ಬಾರ್ ಅಂಡ್ ರೆಸ್ಟೋರೆಂಟು ಪದಗಳು ಗುಂಡು ಹಾಕದವರ ಬಾಯಲ್ಲೂ ನುಲಿಯುತ್ತಿವೆ.

ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ 'ನೈಂಟಿ' ಕುಡಿಸಿ ಪಲ್ಟಿ ಹೊಡೆಸಿದ ಸಾಧು ಈಗ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಹೆಸರು 'ಕ್ವಾರ್ಟರ್'. ಈ ಚಿತ್ರಕ್ಕೆ ನಾಯಕನಟನಾಗಿ ಶ್ರೀನರಕಿಟ್ಟಿ ಅವರನ್ನು ಕಣಕ್ಕಿಳಿಸಲು ಸಾಧು ಸ್ಕೆಚ್ ಹಾಕಿದ್ದಾರೆ. ಸದ್ಯಕ್ಕೆ 'ಅನಾರ್ಕಲಿ' ಚಿತ್ರದಲ್ಲಿ ಕಿಟ್ಟಿ ಬ್ಯುಸಿಯಾಗಿದ್ದಾರೆ. ಅದಾದ ಬಳಿಕವಷ್ಟೆ 'ಕ್ವಾರ್ಟರ್‌'ಗೆ ಕೈಹಾಕಲಿದ್ದಾರೆ.

ಈ ಚಿತ್ರವನ್ನೂ 'ನೈಂಟಿ' ನಿರ್ಮಿಸಿದ್ದ ಲಕ್ಕಿ ಶಂಕರ್ ಅವರೇ ನಿರ್ಮಿಸುವ ಸಾಧ್ಯತೆಗಳಿವೆ. ಈಗಾಗಲೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ 'ಕ್ವಾರ್ಟರ್' ಹಾಗೂ 'ಫುಲ್ ಬಾಟಲ್' ಶೀರ್ಷಿಕೆಗಳು ರಿಜಿಸ್ಟರ್ ಆಗಿವೆ. ಈ ಬಾರಿಯೂ ಸಾಧು ಕೋಕಿಲ ಕಾಮಿಡಿ ಕಿಕ್ ಕೈಹಿಡಿಯುವ ನಿರೀಕ್ಷೆಯಲ್ಲಿದೆ ಗಾಂಧಿನಗರ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
After success of Kananda movie '90', the film director Sadhu Kokila is now in the mind to take up 'Quarter'. Actor Srinagara Kitty to do the lead role, now he is busy in ‘Anarkali’. The cast and crew are yet to be finalized.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X