For Quick Alerts
  ALLOW NOTIFICATIONS  
  For Daily Alerts

  ರು.3 ಕೋಟಿ ವೆಚ್ಚದಲ್ಲಿ ದಾಖಲೆ ವೀರ 'ಸುಗ್ರೀವ'

  By Rajendra
  |

  ಚಿತ್ರರಂಗದಲ್ಲಿ ಈಗಾಗಲೇ, ದಾಖಲೆಗಳನ್ನು ನಿರ್ಮಿಸುವಂತಹ ಚಿತ್ರಗಳು ಬಂದಿರುವುದು ಬೆರಳೆಣಿಕೆಯಷ್ಟು ಮಾತ್ರ. ಇದೀಗ ಅದೆಲ್ಲಾ ದಾಖಲೆಗಳನ್ನು ಮುರಿಯಲು 'ಸುಗ್ರೀವ' ಬರುತ್ತಿದ್ದಾನೆ. ಬೆಳಿಗ್ಗೆ 6 ಗಂಟೆಗೆ ಪ್ರಾರಂಭಿಸಿ, ರಾತ್ರಿ 12 ಗಂಟೆಯವರೆಗೆ ನಿರಂತರ 18 ಗಂಟೆಗಳ ಕಾಲ ಚಿತ್ರೀಕರಣ ನಡೆಸಿ, ಹಿಂದಿನ ದಾಖಲೆಗಳನ್ನು 'ಸುಗ್ರೀವ' ಮುರಿದಿದ್ದಾನೆ.

  ಅಣಜಿ ಫಿಲಂ ಲಾಂಛನದಲ್ಲಿ ಎಂ. ರುದ್ರೇಶ್ ಅರ್ಪಿಸಿ, ನಿರ್ಮಾಪಕ ಅಣಜಿ ನಾಗರಾಜ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಯಜ್ಞ ಶೆಟ್ಟಿ, ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ. ಇದರ ಚಿತ್ರೀಕರಣಕ್ಕಾಗಿ 1,200 ಜನ ಕಾರ್ಮಿಕರು, 10 ಜನ ನಿರ್ದೇಶಕರು, ಹಾಗೂ ಛಾಯಾಗ್ರಾಹಕರು ಕೆಲಸ ಮಾಡಿದ್ದು, ಇದೊಂದು ಪಕ್ಕಾ ಕಮರ್ಷಿಯಲ್ ಸಿನೆಮಾ ಎನ್ನುವ ನಿರ್ಮಾಪಕರು ಮೂರು ಫೈಟ್ಸ್, 3 ಹಾಡುಗಳನ್ನು ಕೂಡ ಚಿತ್ರದಲ್ಲಿ ಅಳವಡಿಸಿದ್ದಾರೆ.

  ಈಗಾಗಲೇ ಚಿತ್ರದ ಎಡಿಟಿಂಗ್, ಡಬ್ಬಿಂಗ್ ಸೇರಿ ಚಿತ್ರೀಕರಣೇತರ ಚಟುವಟಿಕೆಗಳೆಲ್ಲಾ ಮುಗಿದು ಚಿತ್ರದ ಪ್ರಥಮ ಪ್ರತಿ ಕೂಡ ಕಳೆದ ವಾರ ಹೊರ ಬಂದಿದೆ. ಸುಮಾರು 3 ಕೋಟಿ ರು.ಗಳ ವೆಚ್ಚದಲ್ಲಿ ತಯಾರಾಗಿರುವ ಈ ಚಿತ್ರವನ್ನು ಪ್ರಶಾಂತ್ ನಿರ್ದೇಶಿಸಿದ್ದಾರೆ. ಗುರುರಾಜ್ ಹೊಸಕೋಟೆ, ಮಂಜುಭಾಷಿಣಿ, ವಿಜಯ ಸಾರಥಿ, ಮೊದಲಾದವರ ತಾರಾಗಣ ಇದೆ. ಸಂಗೀತ ನಿರ್ದೇಶನ ಗುರುಕಿರಣ್, ಸಂಭಾಷಣೆ, ರಾಂ ನಾರಾಯಣ್, ಚಿತ್ರಕಥೆ-ಪ್ರಮೋದ್ ಚಕ್ರವರ್ತಿ, ರಾಮ್‌ನಾರಾಯಣ್, ಸಂಕಲನ-ತಿರುಪತಿರೆಡ್ಡಿಯವರದ್ದು.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X