ಶೀಘ್ರದಲ್ಲೇ 'ಸೂರ್ಯಕಾಂತಿ' ಧ್ವನಿಸುರುಳಿ
ಅವಿಘ್ನ ಮೀಡಿಯ ವತಿಯಿಂದ, ಎಂ. ವಾಸು ಅರ್ಪಿಸುವ, ಬಿ.ಎನ್. ಸುಜಾತ ನಿರ್ಮಿಸುತ್ತಿರುವ 'ಸೂರ್ಯಕಾಂತಿ' ಚಿತ್ರಕ್ಕೆ ಆಕಾಶ್ ರೆಕಾರ್ಡಿಂಗ್ ಸ್ಟೂಡಿಯೋದಲ್ಲಿ ಹಿನ್ನಲೆ ಸಂಗೀತ ನೀಡಲಾಗುತ್ತಿದೆ. 'ಆ ದಿನಗಳು ಚಿತ್ರದ ನಂತರ ಕೆ.ಎಂ. ಚೈತನ್ಯ ನಿರ್ದೇಶಿಸುತ್ತಿರುವ ದ್ವಿತೀಯ ಚಿತ್ರ ಇದು.
ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಸೂರ್ಯಕಾಂತಿಗೆ ಸಂಗೀತ ಸಂಯೋಜಿಸಿದ್ದು, ಸದ್ಯದಲೇ ಚಿತ್ರದ ಧ್ವನಿಸುರುಳಿಗಳು ಬಿಡುಗಡೆಯಾಗಲಿದೆ. ಚಿತ್ರದ ನಾಯಕ ಚೇತನ್ ಹಾಗೂ ನಾಯಕಿ ರೆಜೀನಾ. ಇತರ ಮುಖ್ಯ ಪಾತ್ರಗಳಲ್ಲಿ, ತಮಿಳಿನ ಖ್ಯಾತ ನಟ ನಾಸರ್, ಕನ್ನಡದ ರಾಮಕೃಷ್ಣ, ಕಿಶೋರಿ ಬಲ್ಲಾಳ, ಆಸಿಫ್ ಹಾಗೂ ರಾಮ್‌ಗೋಪಾಲ ವರ್ಮಾ ಗರಡಿಯಲ್ಲಿ ಹಲವು ಹಿಂದಿ ಚಿತ್ರಗಳಲ್ಲಿ ನಟಿಸಿರುವ ಗಣೇಶ್ ಯಾದವ್ ಇದ್ದಾರೆ.
ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಕಲ್ಯಾಣ್ ಮತ್ತಿತರರು ರಚಿಸಿರುವ ಗೀತೆಗಳನ್ನು ಶ್ರೇಯಾ ಗೋಶಾಲ್, ಕುನಾಲ್ ಗಾಂಜಾವಾಲಾ, ಕಾರ್ತಿಕ್ ಹಾಗೂ ಇತರ ಖ್ಯಾತ ಗಾಯಕರು ಹಾಡಿದ್ದಾರೆ. ಚಿತ್ರದಲ್ಲಿ ಒಟ್ಟು 6 ಹಾಡುಗಳಿವೆ.
ಹೆಚ್.ಸಿ. ವೇಣು ಛಾಯಾಗ್ರಹಣ, ಹರಿದಾಸ್ ಕೆ.ಜಿ.ಎಫ್ ಸಂಕಲನ, ದಿನೇಶ್ ಮಂಗಳೂರು ಕಲೆ, ರವಿವರ್ಮಾ ಅವರ ಸಾಹಸ ದೃಶ್ಯಗಳು ಹಾಗೂ ರಾಮಕೃಷ್ಣ ಪ್ರಸಾದನ ನೀಡಿರುವ ಈ ಚಿತ್ರಕ್ಕೆ ಕನ್ನಡದ ಶ್ರೇಷ್ಠ ಸಾಹಿತಿ ಕೆ.ವೈ. ನಾರಾಯಣಸ್ವಾಮಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











