ಹೈದರಾಬಾದ್‌ನಲ್ಲಿ ಉಪೇಂದ್ರ ಅವರ ಶ್ರೀಮತಿ

By Staff

ಕನ್ನಡ ಚಿತ್ರರಂಗದ 'ಬುದ್ದಿವಂತ' ಉಪೇಂದ್ರ ನಾಯಕನಾಗಿ ಅಭಿನಯಿಸುತ್ತಿರುವ 'ಶ್ರೀಮತಿ' ಚಿತ್ರಕ್ಕೆ ಮುತ್ತಿನ ನಗರ ಹೈದರಬಾದ್‌ನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಮೊದಲಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರೈಸಿರುವ ಚಿತ್ರಕ್ಕೆ ಅಮೃತ ಮಹೋತ್ಸವದ ಬಿಡುವಿನ ನಂತರ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಿದೆ. ನಾಯಕ ಉಪೇಂದ್ರ ಸೇರಿದಂತೆ ಪ್ರಿಯಾಂಕ, ಸೆಲಿನಾ ಜೆಟ್ಲಿ, ರಾಮಕೃಷ್ಣ, ಪ್ರಕಾಶ್ ರೈ ಮುಂತಾದ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

'ಶ್ರೀಮತಿ' ಹಲವು ವಿಶೇಷಗಳ ಸಾಗರ. ಹೆಚ್ ಟುಒ ಚಿತ್ರದ ನಂತರ ಉಪೇಂದ್ರ ತಮ್ಮ ಶ್ರೀಮತಿ ಪ್ರಿಯಾಂಕರೊಂದಿಗೆ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 'ಮಿಸ್ ಇಂಡಿಯಾ' ಕಿರೀಟಧಾರಣೆ ಮಾಡಿಕೊಂಡು ಬಾಲಿವುಡ್‌ನ ಪ್ರಸಿದ್ಧ ಚಿತ್ರಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದಿರುವ ಸಹಜ ಸುಂದರಿ ಸೆಲಿನಾ ಜೆಟ್ಲಿ ಅವರು ಪ್ರಥಮ ಬಾರಿಗೆ ಸ್ಯಾಂಡಲ್‌ವುಡ್‌ಗೆ ಆಗಮಿಸಿದ್ದು ಚಿತ್ರದಲ್ಲಿ ನಾಯಕಿಯ ಪಾತ್ರ ನಿರ್ವಹಣೆ ಮಾಡುತ್ತಿದ್ದಾರೆ.

ಚಿತ್ರದಲ್ಲಿ ಐದು ಹಾಡುಗಳು ಹಾಗೂ ಎರಡು ಸಾಹಸ ಸನ್ನಿವೇಶ ಅಡಕವಾಗಿದ್ದು ಕೆಲವು ಗೀತೆಗಳು ದಕ್ಷಿಣಆಫ್ರಿರಿಕಾದಲ್ಲಿ ಚಿತ್ರೀಕೃತವಾಗಲಿದೆ ಎಂದು ನಿರ್ಮಾಪಕ ಕೆ.ವಿ.ರೆಡ್ಡಿ ತಿಳಿಸಿದ್ದಾರೆ. ಕೆ.ಎಸ್.ಆರ್ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ನಾಯಕ ಉಪೇಂದ್ರ ಅವರೇ ಕತೆ, ಚಿತ್ರಕತೆ ಬರೆದಿದ್ದಾರೆ. ಸಂಪತ್ ನಿರ್ದೇಶಿಸುತ್ತಿರುವ 'ಶ್ರೀಮತಿ'ಗೆ ಜೆ.ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಜಾನಿಲಾಲ್ ಕ್ಯಾಮೆರಾ, ಗೋವರ್ಧನ್ ಸಂಕಲನ, ಬಾಬುಖಾನ್ ಕಲಾನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಉಪೇಂದ್ರ, ಪ್ರಿಯಾಂಕ, ಸೆಲಿನಾ ಜೆಟ್ಲಿ, ಶಿಂಧೆ, ರಾಮಕೃಷ್ಣ, ಪ್ರಕಾಶ್ ರೈ ಮುಂತಾದವರಿರುವುದು ಗೊತ್ತೇ ಇದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಥ್ರಿಲ್ಲರ್ ಮಂಜು ನಿರ್ದೇಶನದಲ್ಲಿ ಉಪೇಂದ್ರ
ಮರಸುತ್ತೊ ಪ್ರೇಮಿಗಳಾಗಿ ಉಪ್ಪಿ, ಪ್ರಿಯಾಂಕ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X