'ಎರಡನೆ ಮದುವೆ' ಮೆಚ್ಚಿದ ಬಿ ಎಸ್ ಯಡಿಯೂರಪ್ಪ
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ 24x7 ರಾಜಕಾರಣಿಯಲ್ಲದಿದ್ದರೂ ಅವರಿಗೆ ಸಿನಿಮಾ ನೋಡುವ ಪುರುಸೊತ್ತ್ತಾದರೂ ಎಲ್ಲಿರುತ್ತೆ ಹೇಳಿ. ಹೇಗೋ ಒಂದೆರಡು ಗಂಟೆ ಬಿಡುವು ಮಾಡಿಕೊಂಡ ಸಿಎಂ ಗುರುವಾರ ಕನ್ನಡದ ಹೊಚ್ಚ ಹೊಸ ಚಿತ್ರ 'ಎರಡನೇ ಮದುವೆ' ನೋಡಿ ಸಂಭ್ರಮಿಸಿದರು.
'ಎರಡನೇ ಮದುವೆ' ಹೇಗಿದೆ ಸಾರ್? ಎಂದು ಕೇಳಿದ ಪತ್ರಕರ್ತರಿಗೆ. "ಚಿತ್ರ ಚೆನ್ನಾಗಿದೆ. ಒಂದು ಸಲ ನೋಡಬಹುದು. ಕುಟುಂಬ ಸಮೇತ ಬಂದಿದ್ದೇನೆ. ಬರೀ ರಾಜಕೀಯದಲ್ಲೆ ಇದ್ದೂ ಇದ್ದು ಮನರಂಜೆಯನ್ನೇ ನಾವು ಮರೆತುಬಿಟ್ಟಿದ್ದೇವೆ. ಇನ್ನು ಮುಂದೆ ತಿಂಗಳಿಗೊಮ್ಮೆಯಾದರೂ ಚಿತ್ರಮಂದಿರಕ್ಕೆ ಬರುತ್ತೇನೆ" ಎಂದು ಹೇಳಿದರು.
ಮಂತ್ರಿ ಸ್ಕ್ಸೇರ್ ಗೆ ತೆರಳಿದ ಮುಖ್ಯಮಂತ್ರಿಗಳು ಅನಂತನಾಗ್ ಹಾಗೂ ಸುಹಾಸಿನಿ ಅವರ 'ಎರಡನೇ ಮದುವೆ' ನೋಡಿ ಕೊಂಚ ಕಾಲ ಗಣಿ ಗದ್ದಲ, ರಾಜಕೀಯ ಜಂಜಾಟಗಳನ್ನು ಮರೆತಿದ್ದಾರೆ. ಸಿನಿಮಾದಲ್ಲಿ ಅನಂತನಾಗ್ ಲೋಕಾಯುಕ್ತ ಅಧಿಕಾರಿಯಾಗಿ ಕಾಣಿಸಿದ್ದು ಅವರ ಕಾಮಿಡಿ ನೋಡಿ ಯಡಿಯೂರಪ್ಪ ಕೊಂಚ ರಿಲ್ಯಾಕ್ಸ್ ಆದಂತೆ ಕಾಣುತ್ತಿದ್ದರು.
ಎರಡನೆ ಮದುವೆ ಅನಂತನಾಗ್ ಸುಹಾಸಿನಿ ಯಡಿಯೂರಪ್ಪ ದಿನೇಶ್ ಬಾಬು ಮಂತ್ರಿ ಸ್ಕ್ವೇರ್ eradane maduve dinesh baboo anant nag suhasini mantri square


Click it and Unblock the Notifications