»   » ಸೆಟ್ಟೇರಲಿದೆ ಪುನೀತ್‌ರ ಹೊಸ ಚಿತ್ರ ವಂಶಿ

ಸೆಟ್ಟೇರಲಿದೆ ಪುನೀತ್‌ರ ಹೊಸ ಚಿತ್ರ ವಂಶಿ

Posted By:
Subscribe to Filmibeat Kannada


ಬೆಂಗಳೂರು, ಜ.16: ಗಾಂಧಿನಗರ ಪಂಡಿತರ ಲೆಕ್ಕಾಚಾರವೆಲ್ಲಾ ತಲೆಕೆಳಗಾಗಿ 'ಪ್ರೀತಿ ಏಕೆ..." ಅಡ್ಡಡ್ಡ ಮಲಗಿದ ಮೇಲೆ ಪ್ರೇಕ್ಷಕರ ನೋಟವೆಲ್ಲಾ ಗಾಳಿಪಟದ ಕಡೆಗೇ ನೆಟ್ಟಿದೆ. ಜ.18ರಂದು ಗಾಳಿಪಟ ರಾಜ್ಯಾದ್ಯಂತ ಪಟಪಟಿಸಲಿದೆ. ಈ ಕುತೂಹಲಕರ ಬೆಳವಣಿಗೆಗಳ ನಡುವೆ ಪುನೀತ್‌ರ ಹೊಸ ಚಿತ್ರ ಸೆಟ್ಟೇರಲಿದೆ.

ಚಿತ್ರದ ಟೈಟಲ್ 'ವಂಶಿ'. ಚಿತ್ರವನ್ನು ನಿರ್ಮಿಸುತ್ತಿರುವುದು ಮತ್ತ್ಯಾರು ಅಲ್ಲ ಸ್ವತಃ ಪಾರ್ವತಮ್ಮ ರಾಜ್‌ಕುಮಾರ್. ಹಾಗಾಗಿ ಚಿತ್ರೋದ್ಯಮದಲ್ಲಿ ಕುತೂಹಲ ಮೂಡಿದೆ. ಅವರ ನಿರ್ಮಾಣ ಎಂದರೆ ಅಶ್ಲೀಲತೆಗೆ ದೂರ ಮನೆಮಂದಿಗೆ ಹತ್ತಿರವಾಗುವ ಕತೆ, ಉತ್ತಮ ಸಂಗೀತ, ಸಾಹಿತ್ಯದ ಅಂಶಗಳಿಂದ ಮೇಳೈಸಿರುವ ಚಿತ್ರಗಳೆಂದು ಸಹಜವಾಗಿಯೇ ಪ್ರೇಕ್ಷಕರು ನಿರೀಕ್ಷಿಸುತ್ತಾರೆ. ಖಂಡಿತವಾಗಿಯೂ ಆ ಎಲ್ಲಾ ಅಂಶಗಳೂ ಚಿತ್ರದಲ್ಲಿ ಇರುತ್ತವೆ ಸಹಾ.

ಪುನೀತ್‌ರ ಮಿಲನ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಪ್ರಕಾಶ್ ಈ ಚಿತ್ರಕ್ಕೂ ನಿರ್ದೇಶನದ ಸಾರಥ್ಯ ವಹಿಸಲಿದ್ದಾರೆ. ಚಿತ್ರದ ತಾಂತ್ರಿಕ ಹಾಗೂ ತಾರಾಬಳಗದ ಬಗ್ಗೆ ಇನ್ನೂ ನಿರ್ಧರಿಸಿಲ್ಲ, ಚರ್ಚೆ ನಡೆಯುತ್ತಿದೆ. ಮಾರ್ಚ್ ತಿಂಗಳಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಚಿತ್ರ ನಿರ್ದೇಶಕ ಶೋಭನ್ ನಿಧನದಿಂದ ಡಿ.14ರಿಂದ ಚಿತ್ರೀಕರಣ ಆರಂಭವಾಗಿದ್ದ 'ಮಯೂರ' ನೆನೆಗುದಿಗೆ ಬಿದ್ದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada