»   » ನಿಶ್ಚಯವಾಗಿದ್ದ ಅಭಿಷೇಕ್‌- ಕರಿಷ್ಮಾ ಮದುವೆ ಮುರಿಯಿತು

ನಿಶ್ಚಯವಾಗಿದ್ದ ಅಭಿಷೇಕ್‌- ಕರಿಷ್ಮಾ ಮದುವೆ ಮುರಿಯಿತು

Subscribe to Filmibeat Kannada

ಗೊತ್ತಾಗಿದ್ದ ಅಭಿಷೇಕ್‌ ಬಚ್ಚನ್‌ ಮತ್ತು ಕರಿಷ್ಮಾ ಕಪೂರ್‌ ಮದುವೆ ಮರಿದುಹೋಗಿದೆ.ಕರಿಷ್ಮಾ ಕಪೂರ್‌ ಚಿಕ್ಕಮ್ಮ, ರಿಶಿ ಕಪೂರ್‌ ಹೆಂಡತಿ ಹಾಗೂ ಮಾಜಿ ನಟಿ ನೀತು ಸಿಂಗ್‌ ಸುದ್ದಿಗಾರರಿಗೆ ಈ ವಿಷಯ ಸ್ಪಷ್ಟಪಡಿಸಿದರು. ಆದರೆ, ಆಗಬೇಕಿದ್ದ ಮದುವೆ ಮುರಿದದ್ದು ಯಾಕೆ ಅನ್ನುವುದನ್ನು ಅವರು ಹೇಳಲಿಲ್ಲ . ತೀರಾ ಕೆದಕಿದರೂ, ‘ಗೊತ್ತಿದ್ದರೆ ತಾನೆ ಹೇಳೋದು. ಅದನ್ನು ಅಭಿಷೇಕ್‌- ಕರಿಷ್ಮಾ ಹೇಳಬೇಕು’ ಅಂದುಬಿಟ್ಟರು.

ನಾಲ್ಕು ತಿಂಗಳ ಹಿಂದೆ ಅಭಿಷೇಕ್‌ ಹಾಗೂ ಕರಿಷ್ಮಾ ನಿಶ್ಚಿತಾರ್ಥ ನಡೆದಿತ್ತು. ಇದೇ ವರ್ಷ ಮಾಚ್‌ ರ್ ಅಥವಾ ಏಪ್ರಿಲ್‌ನಲ್ಲಿ ಮದುವೆ ಎಂದು ಅಮಿತಾಬ್‌ ಬಚ್ಚನ್‌ ಪ್ರಕಟಿಸಿದ್ದರು. ಆದರೀಗ ಆಗಬೇಕಿದ್ದ ಮದುವೆ ಮುರಿದು ಬಿದ್ದಿದೆ.

ಮದುವೆ ಮುರಿದು ಬಿದ್ದದ್ದು ಯಾಕೆ? ಹೇಳೋಕೆ ಯಾರೂ ಲಭ್ಯವಿಲ್ಲ. ಸುದ್ದಿಗಾರರನ್ನು ಫೇಸ್‌ ಮಾಡೋಕೆ ಬಚ್ಚನ್‌ ಕುಟುಂಬದವರಾಗಲೀ, ಕಪೂರ್‌ ಕುಟುಂಬದವರಾಗಲೀ ಒಲ್ಲೆ ಎನ್ನುತ್ತಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರೂ ಅಭಿಷೇಕ್‌ ಹಾಗೂ ಕರಿಷ್ಮಾ ಮಾತಿಗೆ ಸಿಗುತ್ತಿಲ್ಲ. ಗುಸುಗುಸು ಸುದ್ದಿಯ ಪ್ರಕಾರ ಈ ಮದುವೆ ಮುರಿದು ಬೀಳಲು ಅಂಥಾ ದೊಡ್ಡ ಕಾರಣವೇನೂ ಇಲ್ಲ. ಮದುವೆ ಸರಳ ರೀತಿಯಲ್ಲಿ ಮಾಡಿಕೊಳ್ಳಬೇಕೋ ಅದ್ಧೂರಿಯಾಗಿ ಆಗಬೇಕೋ ಎಂಬ ವಿಷಯವಾಗಿ ಅಭಿಷೇಕ್‌ ಮತ್ತು ಕರಿಷ್ಮಾ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಇದನ್ನೇ ಇಬ್ಬರೂ ದೊಡ್ಡದು ಮಾಡಿಕೊಂಡು ಮುನಿಸಿಕೊಂಡಿದ್ದಾರೆ. ದೊಡ್ಡವರು ಏನೆಲ್ಲಾ ತೇಪೆ ಹಾಕುವ ಯತ್ನ ಮಾಡಿದರೂ ಫಲಕಾರಿಯಾಗಿಲ್ಲ.

ಇಷ್ಟಕ್ಕೇ ನಿಶ್ಚಯವಾಗಿದ್ದ ಮದುವೆ ಮುರಿಯೋಕೆ ಸಾಧ್ಯವಾ? ತೆರೆಮರೆಯಲ್ಲಿ ಏನೋ ನಡೆದಿದೆ ಅನ್ನುವ ಇನ್ನೊಂದು ಗುಸುಗುಸು ಚಾಲ್ತಿಯಲ್ಲಿದೆ. ಅಭಿಷೇಕ್‌ ಅಥವಾ ಕರಿಷ್ಮಾ ತುಟಿ ಬಿಚ್ಚುವವರೆಗೆ ಅದೇನು ಅನ್ನೋದು ಗುಟ್ಟಾಗೇ ಉಳಿಯಲಿದೆ.

(ಇನ್ಫೋ ವಾರ್ತೆ)

ಸಿನಿಮಾ ಸಂಚಯ
ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada