»   » ತಿರುಮಲನಿಗೆ 10 ಕೋಟಿ : ಅಮಿತಾಭ್‌ರಿಂದ ‘ವಜ್ರ’ ಸೇವೆ

ತಿರುಮಲನಿಗೆ 10 ಕೋಟಿ : ಅಮಿತಾಭ್‌ರಿಂದ ‘ವಜ್ರ’ ಸೇವೆ

Subscribe to Filmibeat Kannada

ನವದೆಹಲಿ : ಬಾಲಿವುಡ್‌ ಖ್ಯಾತ ನಟ ಅಮಿತಾಭ್‌ ಬಚ್ಚನ್‌, ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿಗೆ 10ಕೋಟಿ ಮೌಲ್ಯದ ವಜ್ರದ ಆಭರಣವನ್ನು ಸಮರ್ಪಿಸಲಿದ್ದಾರೆ.

ಕಳೆದವರ್ಷ ಡಿಸೆಂಬರ್‌ ತಿಂಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು, ಕೆಲವೇ ದಿನಗಳಲ್ಲಿ ಚೇತರಿಸಿಕೊಂಡಿದ್ದರು. ಈಗ ತಿರುಮಲನಿಗೆ ಹರಕೆಯ ರೂಪದಲ್ಲಿ ಈ ಆಭರಣವನ್ನು ಅರ್ಪಿಸಲು ಅವರು ನಿರ್ಧರಿಸಿದ್ದಾರೆ.

ವೆಂಕಟ ರಮಣನಿಗೆ ಭಕ್ತಿಪೂರ್ವಕ ಕೃತಜ್ಞತೆ ಸಲ್ಲಿಸಲು, ಇತ್ತೀಚೆಗೆ ತಿರುಪತಿಗೆ ಪರಿವಾರ ಸಮೇತ ಅಮಿತಾಭ್‌ ಆಗಮಿಸಿದ್ದರು. ಸದ್ಯದಲ್ಲಿಯೇ ವೆಂಕಟರಮಣನಿಗೆ ಅಮಿತಾಭ್‌ರಿಂದ ವಜ್ರ ಸೇವೆ ನಡೆಯಲಿದೆ ಎನ್ನಲಾಗಿದೆ.

(ಏಜನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada