»   » ‘ಎಕ್ಸ್‌ ಕ್ಯೂಸ್‌ ಮಿ’ ಗೆಲ್ಲಿಸಿದ ಸುರೇಶ್‌

‘ಎಕ್ಸ್‌ ಕ್ಯೂಸ್‌ ಮಿ’ ಗೆಲ್ಲಿಸಿದ ಸುರೇಶ್‌

Posted By: Super
Subscribe to Filmibeat Kannada
Excuse Me
'ಪ್ರೀತಿ ಏಕೆ ಭೂಮಿ ಮೇಲಿದೆ ?" ಎಂದು ಕೇಳಿದ ನಿರ್ದೇಶಕ ಪ್ರೇಮ್‌ ಹಾಗೂ ನಿರ್ಮಾಪಕ ಸುರೇಶ್‌ ಅವರ ಗಿಮಿಕ್‌ ಫಲಕೊಟ್ಟಿದೆ. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಸಲುವಾಗಿ ಪ್ರೇಮಿಗಳು ಥಿಯೇಟರ್‌ಗೆ ಬರುತ್ತಿರುವುದರಿಂದ 'ಎಕ್ಸ್‌ ಕ್ಯೂಸ್‌ ಮಿ" ಚಿತ್ರ ಗೆದ್ದಿದೆ.

ಹಡಗಿನಂಥ ಕಪಾಲಿ ಚಿತ್ರಮಂದಿರದಲ್ಲಿ ಐವತ್ತು ದಿನಗಳನ್ನು ಪೂರೈಸಿರುವ 'ಎಕ್ಸ್‌ ಕ್ಯೂಸ್‌ ಮಿ" ಚಿತ್ರದ ರಷಸ್‌ ಇನ್ನೂ ಕುಗ್ಗಿಲ್ಲ . ಎಪ್ಪತ್ತರ ಗಡಿ ದಾಟಿರುವ ಚಿತ್ರ ನೂರು ದಿನ ಓಡೇ ಓಡುತ್ತೆ ಎಂದು ನಿರ್ಮಾಪಕ ಸುರೇಶ್‌ ಆತ್ಮ ವಿಶ್ವಾಸದಿಂದ ಬೀಗುತ್ತಿದ್ದಾರೆ.

'ಎಕ್ಸ್‌ ಕ್ಯೂಸ್‌ ಮಿ" ಚಿತ್ರದ ಯಶಸ್ಸಿನ ಸಂಪೂರ್ಣ ಕ್ರೆಡಿಟ್‌ ನಿರ್ಮಾಪಕರಿಗೆ ಸಲ್ಲಬೇಕು. ಚಿತ್ರ ಚೆನ್ನಾಗಿ ಬರುವಲ್ಲಿ ನಿರ್ದೇಶಕ ಪ್ರೇಮ್‌ ಹಾಗೂ ಸಂಗೀತ ನಿರ್ದೇಶಕ ಆರ್‌.ಪಿ.ಪಟ್ನಾಯಕ್‌ ಅವರ ಪ್ರಯತ್ನವನ್ನು ಅಲ್ಲಗಳೆಯುವಂತಿಲ್ಲ . ಆದರೆ, ಚಿತ್ರ ಚೆನ್ನಾಗಿದ್ದ ಮಾತ್ರಕ್ಕೆ ಅದು ಗೆಲ್ಲುತ್ತದೆ ಎಂದೇನೂ ಇಲ್ಲವಲ್ಲ ? ಚಿತ್ರ ಗೆಲ್ಲಬೇಕಾದರೆ, ಗೆಲ್ಲಿಸುವವರು ಬೇಕು ; ಈ ರೀತಿ ಗೆಲ್ಲಿಸಿದ ಕ್ರೆಡಿಟ್ಟು ನಿರ್ಮಾಪಕ ಸುರೇಶ್‌ ಅವರದು.

ಬಿಡುಗಡೆಯಾಗುವ ಮುನ್ನ 'ಎಕ್ಸ್‌ ಕ್ಯೂಸ್‌ ಮಿ" ಚಿತ್ರ ಭಾರೀ ನಿರೀಕ್ಷೆ ಹುಟ್ಟಿಸಿದ್ದರೂ, ಅದರ ಓಪನಿಂಗ್‌ ರಿಪೋರ್ಟ್‌ ಕಳವಳಕಾರಿಯಾಗಿತ್ತು . ಈ ಚಿತ್ರದ ಆಯುಸ್ಸು ಎರಡು ಅಥವಾ ಮೂರು ವಾರ ಎಂದು ಗಾಂಧಿನಗರದ ಬ್ರಹ್ಮರು ಹಣೆಬರಹ ಬರೆದುಬಿಟ್ಟರು. ಆದರೆ ಸುರೇಶ್‌ಗೆ ತಮ್ಮ ಚಿತ್ರದ ಕುರಿತು ನಂಬಿಕೆಯಿತ್ತು ; ಜನ ನಿಧಾನವಾಗಿಯಾದರೂ ಥಿಯೇಟರ್‌ಗೆ ಬಂದೇ ಬರುತ್ತಾರೆ ಅನ್ನುವ ಕುರಿತು ನಂಬಿಕೆಯಿತ್ತು . ಆ ಕಾರಣದಿಂದಲೇ ಚಿತ್ರದ ಪ್ರಚಾರವನ್ನು ಇನ್ನಷ್ಟು ಹೆಚ್ಚಿಸಿದರು. ಟೀವಿಗಳಲ್ಲಿ ಹಾಡು-ದೃಶ್ಯಗಳು ಹೆಚ್ಚೆಚ್ಚು ಕಾಣಿಸಿಕೊಂಡವು. ನಗರದ ಪ್ರಮುಖ ಬೀದಿಗಳಲ್ಲಿ ಬಣ್ಣಬಣ್ಣದ ವೀನೈಲ್‌ ಹೋರ್ಡಿಂಗ್‌ಗಳು ರಾರಾಜಿಸತೊಡಗಿದವು. ಮುಖ್ಯವಾಗಿ ಸುರೇಶ್‌ರ ಆತ್ಮವಿಶ್ವಾಸ ಯಾವುದೇ ಕ್ಷಣದಲ್ಲಿ ಕುಗ್ಗಲಿಲ್ಲ . ಪರಿಣಾಮವಾಗಿ, 'ಎಕ್ಸ್‌ ಕ್ಯೂಸ್‌ ಮಿ" ಗೆಲುವು ಸಾಧಿಸಿತು.

ಸುರೇಶ್‌ ಈಗ ಸಂತೃಪ್ತರು. ಪ್ರೇಮ್‌ ಮುಖದಲ್ಲಿ ಕೂಡ ಲವಲವಿಕೆ ಕಾಣಿಸುತ್ತಿದೆ. ಈ ಜೋಡಿ ಮತ್ತೊಂದು ಸಾಹಸಕ್ಕೆ ಸ್ಕೆಚ್‌ ಹಾಕುತ್ತಿದೆ. ಒಳ್ಳೆಯದಾಗಲಿ.

English summary
Excuse Me. Producers commitment also crucial to the success of Kannada Movie

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X