»   » ‘ಗೆದ್ದೇ ಗೆಲ್ತೀನಿ ನಾನು ಗೆದ್ದೇ ಗೆಲ್ತೀನಿ’ -ಉಮಾ ಮಹೇಶ್ವರಿ

‘ಗೆದ್ದೇ ಗೆಲ್ತೀನಿ ನಾನು ಗೆದ್ದೇ ಗೆಲ್ತೀನಿ’ -ಉಮಾ ಮಹೇಶ್ವರಿ

Subscribe to Filmibeat Kannada

‘ಅದೇನೇ ಆಗಲಿ ಸಭ್ಯ ಪಾತ್ರಗಳ ಮೂಲಕವೇ ಚಿತ್ರರಂಗದಲ್ಲಿ ಉಳಿಯುತ್ತೇನೆ’ ಎನ್ನುವ ‘ಉಪ್ಪಿ ದಾದಾ ಎಂಬಿಬಿಎಸ್‌’ ಚಿತ್ರದ ನಾಯಕಿ ಉಮಾ ಮಹೇಶ್ವರಿ ಅವರ ಕಣ್ಣಲ್ಲಿ ಹೊಳಪಿತ್ತು. ಬಿಚ್ಚಮ್ಮಗಳ ಮಧ್ಯೆಯೂ ನಿಂತೇ ನಿಲ್ಲುತ್ತೇನೆ ಎನ್ನುವ ವಿಶ್ವಾಸವಿತ್ತು.

ಚಿತ್ರ ನಿರ್ದೇಶಕಿಯಾಗುವ ಹಂಬಲ ಸಹಾ ಉಮಾ ಅವರಿಗಿದೆ. ಕಲೆ ಉಮಾಗೆ ರಕ್ತದಿಂದ ಬಂದಿದೆ. ಈಕೆ ಹಿರಿಯ ನಟಿ ಸುಮಿತ್ರಾ ಮತ್ತು ನಿರ್ದೇಶಕ ಡಿ.ರಾಜೇಂದ್ರ ಬಾಬು ಅವರ ಪುತ್ರಿ. ಕನ್ನಡದ ಹುಡುಗಿಯಾದರೂ ಮಿಂಚಿದ್ದು ಮಾತ್ರ ತಮಿಳು ಮತ್ತು ತೆಲುಗಿನಲ್ಲಿ. ನಮ್ಮ ಸ್ಯಾಂಡಲ್‌ವುಡ್‌ ಈಕೆಯನ್ನು ಬಳಸಿಕೊಳ್ಳಲಿಲ್ಲ. ಆ ಬಗ್ಗೆ ತುಸು ಅತೃಪ್ತಿ ಉಮಾ ಮನದಲ್ಲಿ ಉಳಿದಿದೆ.

ಚರ್ಮ ಪ್ರದರ್ಶನವಿಲ್ಲದೆ, ಪ್ರೇಕ್ಷಕರ ಗೆಲ್ಲಬೇಕೆಂಬ ಬಯಕೆ ಉಮಾ ಹೊಂದಿದ್ದಾರೆ. ಅದರಂತೆಯೇ 27 ತಮಿಳು, ಎಂಟು ತೆಲುಗು, ನಾಲ್ಕು ಮಲಯಾಳಂ ಮತ್ತು ಒಂದು ಕನ್ನಡ ಸೇರಿದಂತೆ 40ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ಅಭಿನಯದಿಂದ ಸಿನಿಮಾ ಎಕ್ಸ್‌ಪ್ರೆಸ್‌ ಸೇರಿದಂತೆ ಅನೇಕ ಪ್ರಶಸ್ತಿಗಳ ದೋಚಿದ್ದಾರೆ.

ಗ್ಲಾಮರ್‌ ಮತ್ತು ಎಕ್ಸ್‌ಪೋಸ್‌ ಇವೆಲ್ಲ ಕ್ಷಣಿಕ. ಅಭಿನಯವೊಂದೇ ಶಾಶ್ವತ ಎಂಬ ಉಮಾ ಧೋರಣೆ ಕೇಳಿಯೋ ಏನೋ, ಸುಂಟರಗಾಳಿ ರಕ್ಷಿತಾ ಮಾತು ಬದಲಿಸಿದ್ದಾರೆ. ನಾನೂ ಗೌರಮ್ಮನಂತೆಯೇ ನಟಿಸುತ್ತೇನೆ ಎಂದು ಘೋಷಿಸಿದ್ದಾರೆ!

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada