»   » ಬಚ್ಚನ್‌, ಹೇಮಾ ಮಾಲಿನಿಗೆ ‘ಜೀವಿತ ದಂತಕತೆ ಪ್ರಶಸ್ತಿ’

ಬಚ್ಚನ್‌, ಹೇಮಾ ಮಾಲಿನಿಗೆ ‘ಜೀವಿತ ದಂತಕತೆ ಪ್ರಶಸ್ತಿ’

Posted By: Staff
Subscribe to Filmibeat Kannada
Hema Malini
ಮುಂಬಯಿ : 2004ನೇ ಸಾಲಿನ 'ಜೀವಿತ ದಂತಕತೆ' ಪ್ರತಿಷ್ಠಿತ ಪ್ರಶಸ್ತಿಗೆ ಬಾಲಿವುಡ್‌ನ ಜನಪ್ರಿಯ ತಾರೆಗಳಾದ ಅಮಿತಾಭ್‌ ಬಚ್ಚನ್‌ ಮತ್ತು ಹೇಮಾಮಾಲಿನಿ ಪಾತ್ರರಾಗಿದ್ದಾರೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ರವಿಶಂಕರ್‌ ಪ್ರಸಾದ್‌ ಮಾ.15ರ ಸೋಮವಾರ ಪ್ರಶಸ್ತಿ ಪ್ರಧಾನ ಮಾಡಿದರು.

ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ (FICCI) ವ್ಯಕ್ತಿಯ ಜೀವನಶ್ರೇಷ್ಠ ಸಾಧನೆಗಾಗಿ ಈ ಪ್ರಶಸ್ತಿಗಳನ್ನು ನೀಡುತ್ತದೆ. ಬಚ್ಚನ್‌ ಹಾಗೂ ಹೇಮಾ ಮಾಲಿನಿ ಭಾರತೀಯ ಚಿತ್ರರಂಗಕ್ಕೆ ನೀಡಿದ ಜೀವಿತಾವಧಿಯ ಕೊಡುಗೆಗಾಗಿ ಈ ವರ್ಷ ಪ್ರಶಸ್ತಿ ನೀಡಲಾಗಿದೆ.

ಬಚ್ಚನ್‌ ಭಾರತೀಯ ಚಿತ್ರರಂಗದ ದಿಗ್ಗಜ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರು ಚಿತ್ರರಂಗದಲ್ಲಿ ಸಹಕಾರ ವಾಣಿಜ್ಯ ವಿಧಾನ ಅಳವಡಿಸಿದ ಮೊದಲ ವ್ಯಕ್ತಿ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಮಿತ್‌ ಮಿತ್ರಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೇಳಿದರು. ಹೇಮಾ ಮಾಲಿನಿಯವರು ಚಿತ್ರರಂಗದ ನಟಿ ಎಂಬ ಚೌಕಟ್ಟಿನಿಂದ ಹೊರಬಂದ ಅದ್ಭುತ ಪ್ರತಿಭೆ ಎಂದು ಮಿತ್ರಾ ಬಣ್ಣಿಸಿದರು.

ಲತಾಮಂಗೇಶ್ಕರ್‌, ದಿಲೀಪ್‌ ಕುಮಾರ್‌, ಆಶಾ ಭೋಂಸ್ಲೆ ಹಾಗೂ ದೇವಾನಂದ್‌ ಈ ಮುನ್ನ ಒಕ್ಕೂಟದ ಜೀವಂತ ದಂತಕಥೆ ಪ್ರಶಸ್ತಿ ಪಡೆದ ಗಣ್ಯರಾಗಿದ್ದಾರೆ.

(ಪಿಟಿಐ)

English summary
FICCI presents Living legend award to Bachchan, Hema Malini

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada