»   » ‘ಮುಂಗಾರು ಮಳೆ’ ಗೆದ್ದದ್ದೇಕೆ?: ಒಂದು ವಾದ-ಸಂವಾದ

‘ಮುಂಗಾರು ಮಳೆ’ ಗೆದ್ದದ್ದೇಕೆ?: ಒಂದು ವಾದ-ಸಂವಾದ

Posted By:
Subscribe to Filmibeat Kannada


ಬೆಂಗಳೂರು : ‘ಮುಂಗಾರು ಮಳೆ’ ಚಿತ್ರ ಮತ್ತು ಯಶಸ್ಸಿನ ಬಗ್ಗೆ ಸಂವಾದ ಕಾರ್ಯಕ್ರಮವನ್ನು, ಭಾನುವಾರ(ಮಾ.18) ನಗರದಲ್ಲಿ ಏರ್ಪಡಿಸಲಾಗಿದೆ.

ಬೆಂಗಳೂರಿನ ಹನುಮಂತರನಗರದ ಕಲಾಮಂದಿರದಲ್ಲಿ, ‘ಚಿತ್ರ’ ಸಾಂಸ್ಕೃತಿಕ ಸಂಘದ ಮುಖ್ಯಸ್ಥರಾದ ಎ.ಎಸ್‌.ಮೂರ್ತಿ ಸಂವಾದವನ್ನು ಆಯೋಜಿಸಿದ್ದಾರೆ. ಭಾನುವಾರ ಸಂಜೆ 6.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ.

‘ಮುಂಗಾರು ಮಳೆ’ ನಿರ್ದೇಶಕ ಯೋಗರಾಜ ಭಟ್‌, ನಿರ್ಮಾಪಕ ಕೃಷ್ಣಪ್ಪ, ಛಾಯಾಗ್ರಾಹಕ ಕೃಷ್ಣ, ಕತೆಗಾರ ಜಯಂತ ಕಾಯ್ಕಿಣಿ, ನಟ ಕಾಮಿಡಿ ಟೈಂ ಗಣೇಶ್‌ ಸಂವಾದದಲ್ಲಿ ಪಾಲ್ಗೊಳ್ಳುವರು. ಚಿತ್ರಪ್ರೇಮಿಗಳು ಸಂವಾದದಲ್ಲಿ ಪಾಲ್ಗೊಳ್ಳಬಹುದು. ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಛಾಯಾಗ್ರಾಹಕ ವಿ.ಕೆ.ಮೂರ್ತಿ, ಪತ್ರಕರ್ತ ಜೋಗಿ ಸಂವಾದದಲ್ಲಿ ಮಾತನಾಡಲಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada