»   » ಕನ್ನಡದ ಗಂಧವೇ ಇರದಿದ್ದ ಗಾಯತ್ರಿಜಯರಾಂ ‘ನೀಲಾ’ಗೋಸ್ಕರ ಕಲಿತಿದ್ದ ಕನ್ನಡ ಈಗ ಸಾಕಷ್ಟು ಮರೆತುಹೋಗಿದೆ ! ತಮಿಳಿನ ಗಾಯತ್ರಿಯನ್ನು ಕನ್ನಡದ ಹುಡುಗಿ ಎಂದು ನಾಗಾಭರಣ ರೀಲು ಸುತ್ತಿದ್ದರು.

ಕನ್ನಡದ ಗಂಧವೇ ಇರದಿದ್ದ ಗಾಯತ್ರಿಜಯರಾಂ ‘ನೀಲಾ’ಗೋಸ್ಕರ ಕಲಿತಿದ್ದ ಕನ್ನಡ ಈಗ ಸಾಕಷ್ಟು ಮರೆತುಹೋಗಿದೆ ! ತಮಿಳಿನ ಗಾಯತ್ರಿಯನ್ನು ಕನ್ನಡದ ಹುಡುಗಿ ಎಂದು ನಾಗಾಭರಣ ರೀಲು ಸುತ್ತಿದ್ದರು.

Subscribe to Filmibeat Kannada

*ರವಿತೇಜ, ಚೆನ್ನೈ

ಕಮಲದಗಲದ ಕಣ್ಣರಳಿಸುತ್ತಾ, ಅತ್ತಿತ್ತ ಹೊರಳಿಸಬಲ್ಲ ಒಂದೋ ಎರಡೋ ಮುಖಭಾವದ ಸಾದಾ ನೋಟದ ಹುಡುಗಿ ಗಾಯತ್ರಿಯನ್ನು ಗುಲ್ಬರ್ಗಾದಿಂದ ಕರಕೊಂಡು ಬಂದಿದ್ದಾಗಿ ಒಂದೊಮ್ಮೆ ನಾಗಾಭರಣ ಹೇಳಿದ್ದರು. ಈಕೆ ಕನ್ನಡ ಬಾರದ ಹುಡುಗಿ ಅಂತ ಅಪ್ಪಿ- ತಪ್ಪಿ ಕೂಡ ಹೇಳಿರಲಿಲ್ಲ. ‘ನೀಲಾ’ ಕ್ಲಿಕ್ಕಾಗಲಿಲ್ಲ. ನಾಯಕಿ ಮುಖ್ಯಪಾತ್ರವಾದ್ದರಿಂದ ಗಾಯತ್ರಿ ಕೂಡ ಗಾಂಧಿನಗರದಲ್ಲಿ ಯಾರ ಮನಸ್ಸನ್ನೂ ಸೆಳೆಯಲಿಲ್ಲ. ಆದರೆ, ನೀಲಾ ತೆರೆಗೆ ಬರುವಷ್ಟರಲ್ಲಿ ಪ್ರಭುದೇವನ ಜತೆ ತಮಿಳು ಚಿತ್ರವೊಂದರಲ್ಲಿ ಕುಣಿಯುತ್ತಿದ್ದಳು. ಆಮೇಲೆ ಗಾಂಧಿನಗರದತ್ತ ಸುತಾರಾಂ ಸುಳಿಯಲಿಲ್ಲ. ಇಷ್ಟಕ್ಕೂ ಈ ಗಾಯತ್ರಿ ಕನ್ನಡತಿ ಹೌದೋ ಅಲ್ಲವೋ ಎಂಬ ಅನುಮಾನದಿಂದಲೇ ತಮಿಳು ರಾಜಧಾನಿಯಲ್ಲಿ ಮಾತಾಡಿಸಿದ್ದು.

ನೀವು ಕನ್ನಡದ ಹುಡುಗಿಯಾ?
ಅಲ್ಲ.

ಕನ್ನಡ ಸಿನಿಮಾಗೆ ಹೇಗೆ ಬಂದಿರಿ?
1977ರಲ್ಲಿ ಮಿಸ್‌ ತಮಿಳುನಾಡು ಸ್ಪರ್ಧೆಯಲ್ಲಿ ಕಿರೀಟ ಸಿಕ್ಕಿತು. 1998ರಲ್ಲಿ ನಡೆದ ಮಿಸ್‌ ಸೌತ್‌ ಇಂಡಿಯಾ ಪಟ್ಟ ಕೂಡ ನನ್ನದಾಯಿತು. ಆಮೇಲೆ ಸನ್‌ ಟೀವಿ ಮತ್ತು ವಿಜಯ್‌ ಟೀವಿಯಲ್ಲಿ ನಿರೂಪಕಿಯಾಗಿ ಕೆಲಸದ ಆಫರ್‌ ಬಂತು. 2000ನೇ ಇಸವಿಯಲ್ಲಿ ಫೆಮಿನಾ ಮಿಸ್‌ ಇಂಡಿಯಾ ಸ್ಪರ್ಧೆಗೆ ಹೋದೆ. ಸ್ಪರ್ಧೆಯಲ್ಲಿ ಗೆಲ್ಲದಿದ್ದರೂ, ಜೀವನದ ದಿಕ್ಕೇ ಬದಲಾಯಿತು. ಸಾಕಷ್ಟು ಮಾಡೆಲಿಂಗ್‌ ಆಫರ್‌ಗಳು ಸಿಕ್ಕವು. ಅಶೋಕ ಹಿಂದಿ ಚಿತ್ರದಲ್ಲಿ ಸಣ್ಣದೊಂದು ಪಾತ್ರ ಸಿಕ್ಕಿತು. ಆಗ ಮುಂಬಯಿಯಲ್ಲೇ ಇದ್ದೆ. ಕನ್ನಡದ ಒಳ್ಳೆ ನಿರ್ದೇಶಕ ನಾಗಾಭರಣ ಅಂತ ಗೊತ್ತಾಯ್ತು. ಅವರು ಹೀರೋಯಿನ್‌ ಓರಿಯೆಂಟೆಡ್‌ ಸಿನಿಮಾ ಮಾಡ್ತಿದಾರೆ ಅಂತ ಗೊತ್ತಾಯಿತು. ಅದಕ್ಕೇ ‘ನೀಲಾ’ ಚಿತ್ರಕ್ಕೆ ಒಪ್ಪಿಕೊಂಡೆ.

ನಿಮಗೆ ಕನ್ನಡ ಬರ್ತಿತ್ತ ?
ಇಲ್ಲ. ನೀಲಾಗೆ ಕಾಲ್‌ಷೀಟ್‌ ಕೊಟ್ಟ ಮೇಲೆ ಕ್ಲಾಸಸ್‌ಗೆ ಹೋಗಿ ಕನ್ನಡ ಕಲಿತೆ. ಜತೆಗೆ ಜಾನಪದ ನೃತ್ಯವನ್ನೂ ವಿಶೇಷವಾಗಿ ಕಲಿತೆ.

ಈಗ ಕನ್ನಡ ಬರುತ್ತ ?
ಅಷ್ಟು ಚೆನ್ನಾಗೇನೂ ಬರೊಲ್ಲ. ಮರೆತುಹೋಗಿದೆ. ಸುಮಾರಾಗಿ ಮಾತಾಡಬಲ್ಲೆ. :)

ನಟನೆ ನಿಮಗೆ ಹೇಗೆ ದಕ್ಕಿತು?
ಅದು ನನ್ನಲ್ಲಿ ಸಹಜವಾಗೇ ಇತ್ತು. ನಾನೇನೂ ವಿಶೇಷ ಟ್ರೆೃನಿಂಗ್‌ ಪಡೆದಿಲ್ಲ.

ನೀವು ನಟಿಯಾಗಿರದಿದ್ದರೆ ಏನಾಗಿರುತ್ತಿದ್ದಿರಿ?
ಫಿಸಿಯೋ ಥೆರಪಿಸ್ಟ್‌ ಆಗಿರ್ತಿದ್ದೆ. ಅದು ನನ್ನ ಕನಸಾಗಿತ್ತು. ಅದಕ್ಕಾಗೇ ವಿಜ್ಞಾನ ವಿಷಯವನ್ನು ಆರಿಸಿಕೊಂಡಿದ್ದೆ. ಆದರೆ ಆಮೇಲೆ ನಾನು ಕನಸಲ್ಲೂ ಎಣಿಸಿರದ ನಟಿಯಾಗಿಬಿಟ್ಟೆ.

ನೀಲಾ ಕಟ್ಟಿಕೊಟ್ಟ ಅನುಭವ ಹೇಗಿತ್ತು?
ತುಂಬಾ ಚೆನ್ನಾಗಿತ್ತು. ಅದಕ್ಕಾಗಿ ನನಗೆ ಪ್ರಶಸ್ತಿಯೂ ಸಿಕ್ಕಿದ್ದು ಸಂತೋಷವಾಯಿತು. ನನ್ನ ಕೆರಿಯರ್‌ಗೆ ತಕ್ಕಂತ ಚಿತ್ರ ಅದಾಗಿತ್ತು. ಅದು ಹೀರೋಯಿನ್‌ ಓರಿಯೆಂಟೆಡ್‌ ಚಿತ್ರವಾಗಿರದೇ ಹೋಗಿದ್ದರೆ ನಾನು ನಟಿಸುತ್ತಿರಲಿಲ್ಲ.

ನೀಲಾ ನಂತರ ಕನ್ನಡ ಸಿನಿಮಾದಲ್ಲಿ ಯಾಕೆ ನಟಿಸಲಿಲ್ಲ ?
ಯಾವುದೂ ಚೆನ್ನಾಗಿರುವ ಅವಕಾಶ ಸಿಗಲಿಲ್ಲ.

ನೀವು ಹಣಕ್ಕಾಗಿ ನಟಿಸುವಿರೋ ಅಥವಾ ಕೀರ್ತಿಗಾಗಿಯೋ?
ವರ್ಷಕ್ಕೆ ಆರೇಳು ತೋಪು ಚಿತ್ರಗಳಲ್ಲಿ ನಟಿಸಿ, ಸಂಭಾವನೆ ಪಡೆದು ಸುಮ್ಮನಾಗುವವಳು ನಾನಲ್ಲ. ಕ್ವಾಲಿಟಿ ಬಹಳ ಮುಖ್ಯ. ಪಾತ್ರ ಚೆನ್ನಾಗಿರದಿದ್ದರೆ ಅಂಥಾ ಸಿನಿಮಾ ಸಹವಾಸವೇ ಬೇಡ.

ಮದುವೆ ಯಾವಾಗ?
ಸದ್ಯಕ್ಕಂತೂ ಇಲ್ಲ :)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada