»   » ಪ್ರಿಯಾಂಕ ಛೋಪ್ರಾ ಮೈಕಾಂತಿಯ ಗುಟ್ಟು; ಈಗ ರಟ್ಟು!

ಪ್ರಿಯಾಂಕ ಛೋಪ್ರಾ ಮೈಕಾಂತಿಯ ಗುಟ್ಟು; ಈಗ ರಟ್ಟು!

Posted By:
Subscribe to Filmibeat Kannada


ಬಾಲಿವುಡ್‌ ನಟಿ ಮತ್ತು ಮಾಜಿ ವಿಶ್ವ ಸುಂದರಿ ಪ್ರಿಯಾಂಕ ಛೋಪ್ರಾ ಅವರ ಮೈಕಾಂತಿಯ ಗುಟ್ಟು; ಈಗ ಗುಟ್ಟಾಗಿ ಉಳಿದಿಲ್ಲ!

ಹೌದು, ಶ್ರೀದೇವಿ, ಮಾಧುರಿ ದೀಕ್ಷಿತ್‌, ಕರೀನಾ ಕಪೂರ್‌, ಜೂಹಿ ಚಾವ್ಲಾ, ಐಶ್ವರ್ಯ ರೈರಂತೆಯೇ, ಛೋಪ್ರಾ ಸೌಂದರ್ಯದ ಗುಟ್ಟು ಲಕ್ಸ್‌ ಸಾಬೂನೇ ಆಗಿದೆ! ಅಂದರೆ; ಇನ್ಮುಂದೆ ಲಕ್ಸ್‌ ಸಾಬೂನಿನ ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಅವರು ಮಿಂಚಲಿದ್ದಾರೆ.

ಹಿಂದೂಸ್ತಾನ್‌ ಲೀವರ್‌ ಲಿಮಿಟೆಡ್‌ನ ಹಳೆಯ ಸಾಬೂನ್‌ ಲಕ್ಸ್‌ , ಛೋಪ್ರಾ ಮೂಲಕ ಮತ್ತೆ ಹೊಸ ರೀತಿಯಲ್ಲಿ ಮಾರುಕಟ್ಟೆ ಪ್ರವೇಶಿಸಲು ಸಿದ್ಧತೆ ನಡೆಸಿದೆ. ಟೆಲಿವಿಷನ್‌ ಮತ್ತು ಮುದ್ರಣ ಮಾಧ್ಯಮದಲ್ಲಿ ದೊಡ್ಡ ಜಾಹೀರಾತುಗಳ ಮೂಲಕ, ಗ್ರಾಹಕರ ಮನಸೆಳೆಯಲು ಲಕ್ಸ್‌ ಹೊರಟಿದೆ.

ಪೆಪ್ಸಿ, ಸ್ಪೈಸ್‌ ಮೊಬೈಲ್‌ ಮತ್ತಿತರ ಜಾಹೀರಾತುಗಳಲ್ಲಿ ಮಿಂಚಿದ್ದ ಅವರು, ಇನ್ಮುಂದೆ ಲಕ್ಸ್‌ ಬೇಬಿ.

‘ಸಿನಿಮಾ ನಟಿಯರ ಸೌಂದರ್ಯ ರಹಸ್ಯ; ಲಕ್ಸ್‌! ’ ಎಂಬ ಜಾಹೀರಾತಿನ ಮೂಲಕ ಬಹುತೇಕರ ಮನೆಯಲ್ಲಿ ಜಾಗ ಪಡೆದಿರುವ ಲಕ್ಸ್‌ ಸಾಬೂನು, ತನ್ನ 75ನೇ ವರ್ಷದ ಆಚರಣೆ ಸಂದರ್ಭದಲ್ಲಿ, ಜಾಹೀರಾತಿಗೆ ನಟಿಯರ ಬದಲಿಗೆ ನಟರನ್ನು ಬಳಸಿಕೊಂಡಿತ್ತು. ಶಾರುಖ್‌ ಖಾನ್‌, ಜಾಹೀರಾತಿನಲ್ಲಿ ಗ್ರಾಹಕರ ಸೆಳೆದಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada