»   » ಸಿಮ್ರಾನ್‌ಗೆ ನಿಶ್ಚಿತಾರ್ಥ ಆದ ನಂತರ ಆಕೆಯ ಮುಂದೆ ಕಮಲ ಹಾಸನ್‌ ಹೆಸರೆತ್ತಿದವರಿಗೆ ಕಪಾಳ ಮೋಕ್ಷ ಗ್ಯಾರಂಟಿ. ಸಿಮ್ರಾನ್‌ ಸಿನಿಮಾ ಸಹವಾಸವೇ ಸಾಕು ಎಂಬಷ್ಟು ಹತಾಶರಾಗಿದ್ದಾರೆ.

ಸಿಮ್ರಾನ್‌ಗೆ ನಿಶ್ಚಿತಾರ್ಥ ಆದ ನಂತರ ಆಕೆಯ ಮುಂದೆ ಕಮಲ ಹಾಸನ್‌ ಹೆಸರೆತ್ತಿದವರಿಗೆ ಕಪಾಳ ಮೋಕ್ಷ ಗ್ಯಾರಂಟಿ. ಸಿಮ್ರಾನ್‌ ಸಿನಿಮಾ ಸಹವಾಸವೇ ಸಾಕು ಎಂಬಷ್ಟು ಹತಾಶರಾಗಿದ್ದಾರೆ.

Subscribe to Filmibeat Kannada

*ಅಯ್ಯಪ್ಪ, ಚೆನ್ನೈ

ಹೊಗೆನಿಕಲ್‌ ಹತ್ತಿರ ‘ವೀರಪತಿ ಲಕ್ಷಿ’್ಮ ಎಂಬ ತಮಿಳು ಚಿತ್ರದ ಶೂಟಿಂಗ್‌ ನಡೆಯುತ್ತಿತ್ತು. ಒಬ್ಬ ಅಭಿಮಾನಿ ತಿಪ್ಪರಲಾಗ ಹಾಕಿ, ಸಿಮ್ರಾನ್‌ ಮುಂದೆ ಬಂದು ಆಟೋಗ್ರಾಫ್‌ ಕೊಡಿ ಅಂದ. ಸಿಮ್ರಾನ್‌ ನಗುನಗುತ್ತಾ ಸಹಿ ಜಡಾಯಿಸುವ ಸಮಯದಲ್ಲಿ ಕಮಲ್‌ ಎಲ್ಲಿ, ಬಂದಿಲ್ಲವಾ ಅಂದುಬಿಟ್ಟ. ಅದುವರೆಗೆ ಹಸನ್ಮುಖಿಯಾಗಿದ್ದ ಸಿಮ್ರಾನ್‌ ಮೊಗ ಜ್ವಾಲಾಮುಖಿಯಾಯಿತು. ಏನಂದೇ... ಅಂತ ನಖಶಿಖಾಂತ ಕೋಪ ತುಂಬಿಕೊಂಡ ಸಿಮ್ರಾನ್‌ನ ನೋಡಿ ಅಭಿಮಾನಿ ಓಡತೊಡಗಿದ. ಸಿಮ್ರಾನ್‌ ಕೂಡ ಅವನ ಹಿಂದೆ ಒಂದೇ ಉಸಿರಿಗೆ ಓಡಿದರು, ಅವನ ಶರ್ಟನ್ನು ಹಿಡಿದು ಜಗ್ಗಿ ನಿಲ್ಲಿಸಿ, ಕಪಾಳ ಮೋಕ್ಷ ಮಾಡಿಯೇಬಿಟ್ಟರು. ಚಿತ್ರದ ಸೆಟ್‌ನಲ್ಲಿದ್ದ ತಂತ್ರಜ್ಞರು ಬಿಟ್ಟ ಕಣ್ಣು ಬಿಟ್ಟ ಹಾಗೇ ನೋಡುತ್ತಿದ್ದರು.

ಸಿಮ್ರಾನ್‌ಗೆ ಈಗ ಕಮಲ್‌ ಹೆಸರೆತ್ತಿದರೆ ಆಗುತ್ತಿಲ್ಲ . ಪ್ರವೀಣ್‌ ಕುಮಾರ್‌ ಎಂಬ ಫೋಟೋಗ್ರಾಫರ್‌ ಕಮಲ್‌ ಹೆಸರೆತ್ತಿದಾಗ ಅಳಲೆಕಾಯಿಯಂತಾಗುವ ಸಿಮ್ರಾನ್‌ ಮುಖಗಳನ್ನು ಸಾಕಷ್ಟು ಬಾರಿ ಸೆರೆಹಿಡಿದಿದ್ದಾರೆ. ವ್ಯಾಪಾರಿ ದೀಪಕ್‌ ಎಂಬ ಸ್ಫುರದ್ರೂಪಿ ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಸಿಮ್ರಾನ್‌ಗೆ ಸಿನಿಮಾ ಉಸಾಬರಿಯೇ ಸಾಕಾಗಿ ಹೋಗಿದೆಯಂತೆ. ಎಲ್ಲಿ ಹೋದರೂ ಕಮಲ್‌ ಎಲ್ಲಿದ್ದಾರೆ, ಏನು ಮಾಡ್ತಿದಾರೆ ಅನ್ನುವ ಥರದ ಪ್ರಶ್ನೆಗಳು. ಇದರಿಂದ ಸಾಕಷ್ಟು ಇರುಸು ಮುರುಸಾಗಿರುವ ಸಿಮ್ರಾನ್‌ರಿಂದ ತಪರಾಕಿ ಪಡೆದವರ ಸಂಖ್ಯೆ ದಿನೇದಿನೇ ಬೆಳೆಯುತ್ತಿದೆಯಂತೆ !

ಅಭಿಮಾನಿಗಳು ಹಾಗೆ ಪ್ರಶ್ನೆಗಳನ್ನು ಕೇಳಲು ಇದೇ ಸಿಮ್ರಾನ್‌ ಕಾರಣ ಅನ್ನುವುದನ್ನೂ ಗಮನಿಸಬೇಕು. ಸಿಮ್ರಾನ್‌ಗೆ ನಿಶ್ಚಿತಾರ್ಥ ಆಗುವವರೆಗೆ ಕಮಲ್‌ ಈಕೆಯ ನೆರಳಾಗಿದ್ದುದು ಹದಿನಾರಾಣೆ ಸತ್ಯ. ತನ್ನದೇನೂ ಕೆಲಸ ಇಲ್ಲದ, ಸಿಮ್ರಾನ್‌ ನಾಯಕಿಯಾಗಿರುವ ಚಿತ್ರದ ಶೂಟಿಂಗ್‌ ವೇಳೆಯಲ್ಲಿ ಆಕೆಯ ಜತೆ ಹರಟೆ ಕೊಚ್ಚುತ್ತಾ ಕಮಲ್‌ ಗಂಟೆಗಟ್ಟಲೆ ಕೂತಿರುತ್ತಿದ್ದುದನ್ನು ಲೈಟ್‌ ಬಾಯ್‌ಗಳಿಂದ ಹಿಡಿದು ಕಾಫಿ ಬಾಯ್‌ಗಳವರೆಗೆ ಡಜನ್ನುಗಟ್ಟಲೆ ಜನ ನೋಡಿದ್ದಾರೆ.

ಏನಮ್ಮಾ ಹೀಗೆ... ಅಂತ ಸಿಮ್ರಾನ್‌ನ ಮತ್ತೆ ಕೆಣಕಿದರೆ, ಕೋಪವನ್ನು ಹದ್ದುಬಸ್ತಿಗೆ ತಂದುಕೊಳ್ಳುತ್ತಾ, ‘ಒಪ್ಪಿಕೊಂಡಿರುವ ಸಿನಿಮಾಗಳ ಮುಗಿಸಿಕೊಟ್ಟು ಕೈಮುಗೀತೀನಿ. ಈ ಸಿನಿಮಾಗಳೂ ಸೂಕು, ಜನರ ಸಹವಾಸವೂ ಸಾಕು’ ಅಂತ ಬಿಸುಸುಯ್ಯುತ್ತಾರೆ!

Post your views

ವಾರ್ತಾ ಸಂಚಯ
ಕಮಲ್‌ಗೆ ಚೆಂಬು, ಮೇ4 ಸಿಮ್ರಾನ್‌ ಮದುವೆ
ಸಿಮ್ರಾನ್‌ ಗುಡಿಯ ನೋಡಿರಣ್ಣಾ
ಸಿಮ್ರಾನ್‌ ಒನಪಿಗೀಗ ಮಾರುಕಟ್ಟೆ ಇಲ್ಲ

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada