»   » ‘ಸ್ತ್ರೀ ಸಾಮಾನ್ಯ’ನಾಗಿ ಕಮಲ್‌ಹಾಸನ್‌!

‘ಸ್ತ್ರೀ ಸಾಮಾನ್ಯ’ನಾಗಿ ಕಮಲ್‌ಹಾಸನ್‌!

Subscribe to Filmibeat Kannada

‘ತ್ಯಾಗರಾಜ’ನ ಇಮೇಜ್‌ನಿಂದ ಜೋಕು-ಮಾರನಾಗಿ ಪರಿವರ್ತಿತನಾಗಿದ್ದ ನಟ ರಮೇಶ್‌ರ ಬಹುದಿನಗಳ ಕನಸು ಈಗ ನನಸಾಗಿದೆ. ಹೌದು ನಿರ್ದೇಶಕನಾಗಿ ‘ಆ್ಯಕ್ಷನ್‌-ಕಟ್‌’ ಹೇಳಬೇಕೆಂಬ ಅವರ ಹಂಬಲ ಕೈಗೂಡಿದೆ! ಅದೂ ಕಮಲ್‌ಹಾಸನ್‌ ಚಿತ್ರ ನಿರ್ದೇಶಿಸುವ ಅವಕಾಶ ಅವರಿಗೆ ಲಭಿಸಿದೆ.

ಕಮಲ್‌ ಹಾಸನ್‌ರ ತಮಿಳಿನ ‘ಸತಿ ಲೀಲಾವತಿ’ ಚಿತ್ರವನ್ನು ‘ಸ್ತ್ರೀ ಸಾಮಾನ್ಯ’ ಹೆಸರಲ್ಲಿ ರಮೇಶ್‌ ರಿಮೇಕ್‌ ಮಾಡುತ್ತಿದ್ದಾರೆ. ಹಿಂದಿಯಲ್ಲಿ ‘ಬೀವಿ ನಂ.1’ ಹೆಸರಲ್ಲಿ ರಿಮೇಕ್‌ ಮಾಡಲಾಗಿತ್ತು. ಅಪ್ಪಟ ತಿಳಿ ಹಾಸ್ಯದ ‘ಸ್ತ್ರೀಸಾಮಾನ್ಯ’ ಚಿತ್ರದ ನಾಯಕಿ ಪಾತ್ರಕ್ಕೆ ಅನ್ವೇಷಣೆ ಮುಂದುವರೆದಿದೆ.

ಭಾರತದ ಶ್ರೇಷ್ಠ ನಟರಲ್ಲಿ ಒಬ್ಬರಾದ ಕಮಲ್‌ಹಾಸನ್‌ ಕಡೆಗೂ ಕನ್ನಡ ಚಿತ್ರದಲ್ಲಿ ನಟಿಸಲು ಬಹುವರ್ಷಗಳ ನಂತರ ಮನಸ್ಸು ಮಾಡಿದ್ದಾರೆ. 1987ರಲ್ಲಿ ಶೃಂಗಾರ್‌ ನಾಗರಾಜ್‌ ನಿರ್ಮಾಣದ ‘ಪುಷ್ಪಕ ವಿಮಾನ’ದಲ್ಲಿ ಕಮಲ್‌ಹಾಸನ್‌ ಪ್ರೇಕ್ಷಕರನ್ನು ಬೆರಗು ಮಾಡಿದ್ದರು. ಕನ್ನಡ ಚಿತ್ರವೆಂದು ಇದನ್ನು ಕರೆದರೂ, ಇದೊಂದು ಮೂಕಿ ಚಿತ್ರ.

ತಪ್ಪಿದ ತಾಳ, ಮರಿಯಾ ಮೈ ಡಾರ್ಲಿಂಗು, ಬೆಂಕಿಯಲ್ಲಿ ಅರಳಿದ ಹೂವು ಚಿತ್ರಗಳಲ್ಲಿ ಕಮಲ್‌ ಹಿಂದೆ ಕನ್ನಡ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದರು. ಸುಹಾಸಿನಿ ನಾಯಕಿಯಾಗಿ ನಟಿಸಿರುವ ‘ಬೆಂಕಿಯಲ್ಲಿ ಅರಳಿದ ಹೂವು’ ಚಿತ್ರದ ಕಂಡಕ್ಟರ್‌ ಪಾತ್ರದಲ್ಲಿ ‘ಮುಂದೆ ಬನ್ನಿ, ಕಮಾನ್‌ಕಮಾನ್‌ ಮುಂದೆ ಬನ್ನಿ...’ಎಂಬ ಕಮಲ್‌ಹಾಸನ್‌ ಹಾಡನ್ನು ಕನ್ನಡ ಪ್ರೇಕ್ಷಕರು ಮರೆತಿಲ್ಲ.

ಹದಿನೇಳು ವರ್ಷಗಳ ನಂತರ ಕನ್ನಡ ಚಿತ್ರದಲ್ಲಿ ನಟಿಸುತ್ತಿರುವುದು ನನಗೆ ಖುಷಿ ತಂದಿದೆ ಎನ್ನುತ್ತಾರೆ ಕಮಲ್‌ ಹಾಸನ್‌.

(ಏಜೆನ್ಸಿ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada