»   » ಬೆಳಗೆರೆಯ ‘ರಾಧಾ’ ಮೇ.21ರಿಂದ ಮನೆಯಂಗಳದಿ ಪ್ರತ್ಯಕ್ಷ!

ಬೆಳಗೆರೆಯ ‘ರಾಧಾ’ ಮೇ.21ರಿಂದ ಮನೆಯಂಗಳದಿ ಪ್ರತ್ಯಕ್ಷ!

Subscribe to Filmibeat Kannada


ಸದ್ಯಕ್ಕೆ ಮಗಳ ಮದುವೆ ಸಡಗರದಲ್ಲಿರುವ ರವಿ ಬೆಳಗೆರೆ, ಯಾವಾಗ ಏನ್‌ ಮಾಡ್ತಾರೆ ಅಂತ ಹೇಳೋದು ಕಷ್ಟ! ಏನಾದರೂ ಮಾಡ್ತಾನೆ ಇರ್ತಾರೆ..

ಹಾಯ್‌ ಮತ್ತು ಓ ಮನಸೇ ಪತ್ರಿಕೆಗಳಿಗೆ ಬರೆಯೋದು, ಸಿನಿಮಾ-ಸೀರಿಯಲ್‌ಗಳಲ್ಲಿ ನಟಿಸೋದು, ರೇಡಿಯೋದಲ್ಲಿ ಮಾತಾಡೋದು ಇವೆಲ್ಲವುಗಳ ಜೊತೆಗೆ, ಸೀರಿಯಲ್‌ ನಿರ್ಮಾಣ ಕ್ಷೇತ್ರಕ್ಕೂ ಬೆಳಗೆರೆ ಪ್ರಸ್ತುತ ಕೈ ಹಾಕಿದ್ದಾರೆ.

ಈ ಹಿಂದೆ ಬೆಳಗೆರೆ ಅವರ ಭಾವನಾ ಕ್ರಿಯೇಷನ್ಸ್‌, ‘ಕ್ರೆೃಂ ಡೈರಿ’ ನಿರ್ಮಾಣದ ಹೊಣೆಯನ್ನು ಹೊತ್ತಿತ್ತು. ಈಗ ‘ರಾಧಾ’ ಎನ್ನುವ ಮೆಗಾ ಧಾರಾವಾಹಿಯನ್ನು ಸಿದ್ಧಪಡಿಸಿದೆ. ಮೇ.21ರಿಂದ ಈಟೀವಿ ಮೂಲಕ ಧಾರಾವಾಹಿ ಮನೆಯಂಗಳಕ್ಕೆ ಕಾಲಿಡಲಿದೆ. ಈ ಧಾರಾವಾಹಿ ಬಗ್ಗೆ ವೀಕ್ಷಕರಿಗೆ ಸಹಜ ಕುತೂಹಲ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಬೆಳ್ಳಿತೆರೆಯಲ್ಲಿ ಸಿನಿಮಾ ನಿರ್ಮಾಣ ಮಾಡುವ ಬಯಕೆಯೂ ಬೆಳಗೆರೆಗೆ ಇದೆ. ಅವರು, ತಮ್ಮ ಗೆಳೆದ ಟಿ.ಎನ್‌.ಸೀತಾರಾಂ ನಿರ್ದೇಶನದ ಸಿನಿಮಾಕ್ಕೆ ದುಡ್ಡು ಹಾಕಲು ನಿರ್ಧರಿಸಿದ್ದಾರಂತೆ. ಪ್ರೇಕ್ಷಕ ಪ್ರಭುಗಳು ಇಬ್ಬರನ್ನೂ ಕಾಪಾಡಲಿ..

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada