»   » ಮುಂಗಾರ್‌ ಮಳಿ

ಮುಂಗಾರ್‌ ಮಳಿ

Posted By: Staff
Subscribe to Filmibeat Kannada
Mungaru Male
'ಅನಿಸುತಿದೆ ಯಾಕೋ ಇಂದು.. " -'ಮುಂಗಾರು ಮಳೆ" ಚಿತ್ರದ ಈ ಹಾಡು, ಎಲ್ಲರ ಬಾಯಲ್ಲೂ ಪ್ರತಿಧ್ವನಿಸಿದೆ. ಈ ಜನಪ್ರಿಯ ಗೀತೆ, ಧಾರವಾಡ ಕನ್ನಡದಲ್ಲಿದ್ದರೆ ಹೇಗಿರುತ್ತಿತ್ತು? ಅಂತಹ ಪ್ರಯತ್ನವನ್ನು ಅನಾಮಿಕರೊಬ್ಬರು ಮಾಡಿದ್ದಾರೆ. ಆ ಪದ್ಯವನ್ನು ದಟ್ಸ್‌ ಕನ್ನಡ ಓದುಗ ಶ್ರೀನಿಧಿ ಗಮನಿಸಿ, ನಮಗೆ ಕಳುಹಿಸಿದ್ದಾರೆ. ಪದ್ಯದ ಹಿಂದೆ ನಿಂತ ಅನಾಮಿಕರಿಗೆ ಸಾವಿರ ಶರಣ್ರೀ...

ಅನಸ್ಲಿಖತ್ತೇತಿ ಯಾಕ ಇಂದ ನೀನನ ನನ್ನಕೀ ಅಂತಮಾಯದ ಲೋಕದಿಂದ ನನ್ನಸಂಬಂಧ ಬಂದಾಕಿ ಅಂತ
ಅವ್ವಾ! ಎಂಥ ಮಧುರ ಯಾತನಿ
ಸಾಯಿಹೋಡಿ ವಂದಸಲ ಹಂಗ ಸುಮ್ಮನ
ಅನಸ್ಲಿಖತ್ತೇತಿ ಯಾಕ ಇಂದ

ಸುರಿಲಿಖತ್ತಿರೂ ಮಳೀ ಹೊಡಿಲಿಖತ್ತೇದ ನಿನ್ನ ವಾಸನಿ
ಬ್ಯಾರೆ ಯಾರರ ಕನಿಸಿನ್ಯಾಗ ಹೋದರ ಕಸಿವಿಸಿ
ಗುಂಡನ ಚಂದಪ್ಪ ಸೂಟಿ ಹಾಕ್ಯಾನ
ನಿನ್ನ ಮಾರಿ ನೋಡಿದ ಕೂಡಲೇನ
ನಾ ಖೈದಿ ನೀ ಸೇರಮನಿ
ತಪ್ಪಿ ಅಪಗೊ ವಮ್ಮೆ ಹಂಗ ಸುಮ್ಮನ
ಅನಸ್ಲಿಖತ್ತೇತಿ ಯಾಕ ಇಂದ

ತುಟಿಗಳ ಹೂವಿನ್ಯಾಗ ಆಡದ್ದ ಮಾತಿನ ಸಕ್ಕರಿ ಅದ
ಮನಸಿನ ಹಾಳಿಯೋಳಗ ಬರೇ ನಿಂದ ಸೈ ಅದ
ಹಣ್ಯಾಗ ಬರಿಯದ ನಿನ್ನ ಹೆಸರು
ಏದಿಯೋಳಗ ನಾನ ಬರದೀನಿ ನಿನಗ ಅದನ ಇದರ ವಿಚಾರಾ
ವದರ ವಮ್ಮೆ ನನ್ನ ಹೆಸರ ಹಂಗ ಸುಮ್ಮನಿ

ಅನಸ್ಲಿಖತ್ತೇತಿ ಯಾಕ ಇಂದ, ನೀನನ ನನ್ನಕೀ ಅಂತ
ಮಾಯದ ಲೋಕದಿಂದ ನನ್ನಸಂಬಂದ ಬಂದಾಕಿ ಅಂತ
ಅವ್ವಾ! ಎಂಥ ಮಧುರ ಯಾತನಿ
ಸಾಯಿಹೋಡಿ ವಂದಸಲ ಹಂಗ ಸುಮ್ಮನ
ಅನಸ್ಲಿಖತ್ತೇತಿ ಯಾಕ ಇಂದ

  • ಮೂಲ ಗೀತೆ ಬರದವರು : ಜಯಂತಪ್ಪ ಕಾಯ್ಕಿಣಿಯಪ್ಪ
  • ಹಾಡಿದೋರು : ಸೋನಪ್ಪ ನಿಂಗಪ್ಪ
  • ತಬಲಾ ಸಾಥಿ ನೀಡಿದೋರು : ಮನೋ ಮುರ್ತೆಪ್ಪ
  • ಪಾರ್ಟುಮಾಡಿದೋರು : ಗಣೇಶಣ್ಣ, ಸಂಜವ್ವ
  • ತಾಲಿಮು ಕೊಟ್ಟೋರು : ಯೋಗಪ್ಪನವರ
English summary
Lyrics of Kannada Movie Mungaru Male in Dharwad style kannada language
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada