»   » ಸಿನಿಮಾ‘ಬಳಗ’ದ ಅಧ್ಯಕ್ಷರಾಗಿ ಜೋಗಿ

ಸಿನಿಮಾ‘ಬಳಗ’ದ ಅಧ್ಯಕ್ಷರಾಗಿ ಜೋಗಿ

Posted By: ದಟ್ಸ್‌ಕನ್ನಡ ಬ್ಯೂರೋ
Subscribe to Filmibeat Kannada

ಬೆಂಗಳೂರು : ಸಿನಿಮಾ ಪತ್ರಿಕೋದ್ಯಮದ ಘನತೆ ಹಾಗೂ ವೃತ್ತಿಯ ಶ್ರೇಷ್ಠತೆಯನ್ನು ಕಾಪಾಡುವ ಉದ್ದೇಶದ ಸಿನಿಮಾ ಪತ್ರಕರ್ತರ 'ಬಳಗ" ಅಸ್ತಿತ್ವಕ್ಕೆ ಬಂದಿದ್ದು - ದಟ್ಸ್‌ಕನ್ನಡ.ಕಾಂನ ಸಂಪಾದಕ ಎಸ್‌.ಕೆ.ಶಾಮಸುಂದರ 'ಬಳಗ"ದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಬೆಂಗಳೂರು ಪ್ರೆಸ್‌ಕ್ಲಬ್‌ನ ಹೆಂಚಿನ ಮನೆಯಲ್ಲಿ ಭಾನುವಾರ (ಜೂ.15) ನಡೆದ 'ಬಳಗ"ದ ಸಮಾನ ಮನಸ್ಕರ ಸಭೆಯಲ್ಲಿ 'ಬಳಗ"ದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕನ್ನಡಪ್ರಭ ಪತ್ರಿಕೆ ಎಚ್‌.ಗಿರೀಶ್‌ ರಾವ್‌ (ಜೋಗಿ) 'ಬಳಗ"ದ ಅಧ್ಯಕ್ಷರಾಗಿ ಆಯ್ಕೆಯಾದರು.

'ಬಳಗ"ದ ಇತರ ಪದಾಧಿಕಾರಿಗಳು :

ಉದಯವಾಣಿಯ ಪ್ರಶಾಂತ ರೈ- ಪ್ರಧಾನ ಕಾರ್ಯದರ್ಶಿ, ಚಿತ್ರಲೋಕ.ಕಾಂನ ಕೆ. ಎಂ. ವೀರೇಶ್‌- ಕಾರ್ಯದರ್ಶಿ, ಗೃಹ ಶೋಭಾದ ಅರುಣಾ- ಆಂತರಿಕ ಲೆಕ್ಕ ಪರಿಶೋಧಕರು. ಕನ್ನಡಪ್ರಭದ ಉದಯ ಮರಕಿಣಿ, ಹಿಂದೂ ಪತ್ರಿಕೆಯ ಜ್ಯೋತಿ ರಘುರಾಮ್‌, ಉದಯವಾಣಿಯ ಪರಮೇಶ್‌ ಗುಂಡ್ಕಲ್‌, ಹೊಸದಿಗಂತದ ಬಾಬು ದಿನಕರ್‌ ಹಾಗೂ ಹಲೋ ಗಾಂಧಿನಗರ ಪತ್ರಿಕೆಯ ನಂದಕುಮಾರ್‌ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು. ಇದೆ ಸಂದರ್ಭದಲ್ಲಿ 'ಬಳಗ"ದ ಸಂವಿಧಾನವನ್ನು ಸಭೆ ಅಂಗೀಕರಿಸಿತು.

'ಬಳಗ"ದ ಪ್ರಮುಖ ಧ್ಯೇಯೋದ್ದೇಶಗಳು :

  • ಸಿನಿಮಾ ಪತ್ರಕರ್ತ ವೃತ್ತಿಯ ಶ್ರೇಷ್ಠತೆ ಹಾಗೂ ಘನತೆಯನ್ನು ಕಾಪಾಡುವಲ್ಲಿ ನೆರವಾಗುವುದು.
  • ಸಿನಿಮಾ ಪತ್ರಕರ್ತರ ಹಿತಾಸಕ್ತಿಗಳ ರಕ್ಷಣೆ.
  • ಸಿನಿಮಾ ಪತ್ರಕರ್ತರ ಬಾಂಧವ್ಯ ವೃದ್ಧಿಗೆ ನೆರವು.
  • ಸಿನಿಮಾ ಪತ್ರಕರ್ತರಿಗೆ ತಮ್ಮ ವೃತ್ತಿಯ ಬಗ್ಗೆ ಚರ್ಚಿಸಲು, ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲು ವೇದಿಕೆ ನಿರ್ಮಾಣ.
  • ಚಿತ್ರರಂಗದ ಇತರ ಸಂಸ್ಥೆಗಳ ಜೊತೆ ಸಹಕಾರ- ಸೌಹಾರ್ದ.

(ಇನ್ಫೋ ವಾರ್ತೆ)

English summary
Karnataka Film Journalists comes under a new umbrella, BALAGA comes into being. Thatskannada Editor S.k. Shama Sundara is Formus VicePresident

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada