»   » ಮಠ : ಜಗ್ಗೇಶ್‌ ಅಜೇಯ ಶತಕ

ಮಠ : ಜಗ್ಗೇಶ್‌ ಅಜೇಯ ಶತಕ

Posted By:
Subscribe to Filmibeat Kannada

ಮಿನಿಮಮ್‌ ಗ್ಯಾರಂಟಿ ನಟರೆಂದೇ ಗಾಂಧಿನಗರದಲ್ಲಿ ಗುರ್ತಿಸಲ್ಪಡುವ ಜಗ್ಗೇಶ್‌ ಅವರ ಹೊಸ ಚಿತ್ರ ‘ಜಗ್ಗೇಶ ಗಣೇಶ’ ಸೆಟ್ಟೇರಿದ ಬೆನ್ನಲ್ಲಿಯೇ ‘ಮಠ’ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದೆ.

ಪುನೀತ್‌ ಮತ್ತು ರವಿಚಂದ್ರನ್‌ ಮಠ ಚಿತ್ರದ ಕ್ಯಾಸೆಟ್‌ ಬಿಡುಗಡೆ ಮಾಡಿ ಮಠ ಚಿತ್ರಕ್ಕೆ ಶುಭ ಕೋರಿದ್ದಾರೆ. ಬಾಂಬ್‌ ಎಸೈ ಖ್ಯಾತಿಯ ಗಿರೀಶ್‌ ಮಟ್ಟಣ್ಣನವರ್‌ ಈ ಚಿತ್ರದಲ್ಲಿದ್ದು, ತಮ್ಮ ಪಾತ್ರದ ಸಂಭಾವನೆಯಾಗಿ ದೊರೆತ ಒಂದೂವರೆ ಲಕ್ಷಗಳನ್ನು ಕುರುಡಿಯಾಬ್ಬಳ ಶಸ್ತ್ರಚಿಕಿತ್ಸೆಗೆ ನೀಡಿದ್ದ ಸಂಗತಿ ಕ್ಯಾಸೆಟ್‌ ಬಿಡುಗಡೆ ಸಮಾರಂಭದಲ್ಲಿ ಹೊರಬಿದ್ದಿದೆ.

ಮಟ್ಟಣ್ಣನವರ್‌ ದೆಸೆಯಿಂದ ಕಣ್ಣು ಪಡೆದ ಜಯಲಕ್ಷ್ಮಿ ಕ್ಯಾಸೆಟ್‌ ಬಿಡುಗಡೆ ಸಮಾರಂಭದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ತಮ್ಮ ನೆಚ್ಚಿನ ನಟ ಪುನೀತ್‌ರೊಂದಿಗೆ ಛಾಯಾಚಿತ್ರ ತೆಗೆಸಿಕೊಂಡು ಆಕೆ ಖುಷಿ ಪಟ್ಟಳು.

ಕಳೆದ ಒಂದು ವರ್ಷದಿಂದ ‘ಮಠ’ ಚಿತ್ರದ ಚಿತ್ರೀಕರಣ ಕುಂಟುತ್ತಾ ಸಾಗಿತ್ತು. ಆದರೆ ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ. ಜಗ್ಗೇಶ್‌ ಅವರ ನೂರನೇ ಚಿತ್ರವಾದ ‘ಮಠ’ ಮನೆಮಂದಿಗೆ ಮುದ ನೀಡಲಿದೆ ಎಂಬುದು ಚಿತ್ರ ನಿರ್ದೇಶಕ ಗುರುಪ್ರಸಾದ್‌ ಅವರ ವಿಶ್ವಾಸ.

ವಿ.ಮನೋಹರ್‌ ಚಿತ್ರಕ್ಕೆ ಸಂಗೀತ ನೀಡಿದ್ದು, ನಾಗತಿಹಳ್ಳಿ ಚಂದ್ರಶೇಖರ್‌, ಆರ್‌.ಎಸ್‌. ಮಧುಸೂಧನ್‌, ಮಂಡ್ಯ ರಮೇಶ್‌, ವಿ. ಮನೋಹರ್‌, ಸಾಧು ಕೋಕಿಲ, ಬಿರಾದಾರ್‌, ತಾರಾ, ವನಿತಾ ವಾಸು, ಮತ್ತಿತರರು ಚಿತ್ರದಲ್ಲಿದ್ದಾರೆ.

‘ಕಂಠಿ’ ಮತ್ತು ‘ಓಂಕಾರ’ ಚಿತ್ರಗಳಿಂದ ಸಂಕಷ್ಟಕ್ಕೆ ಸಿಲುಕಿರುವ ‘ಮಠ’ ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್‌, ಯಶಸ್ಸನ್ನು ಕಾಯುತ್ತಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada