ಹನಿಮೂನ್ ಎಕ್ಸ್‌ಪ್ರೆಸ್ ತೆರೆಗೆ ಬಂದಿದೆ... ನಕ್ಕು ಬಿಡಿ!
ಈವಾರ ಜಗ್ಗೇಶ್ ಮತ್ತು ಎಸ್.ನಾರಾಯಣ್ ಜೋಡಿಯ ‘ಹನಿಮೂನ್ ಎಕ್ಸ್‌ಪ್ರೆಸ್’ ಸಿನಿಮಾ ತೆರೆಕಂಡಿದೆ. ಶುಕ್ರವಾರ(ಜೂ.16) ತೆರೆಕಂಡಿರುವ ಈ ಚಿತ್ರದಿಂದ ರಾಜ್ಯದೆಲ್ಲೆಡೆ ನಾನ್‌ಸ್ಟಾಪ್ ಕಾಮಿಡಿ ಗ್ಯಾರಂಟಿ ಎಂಬುದು ಚಿತ್ರತಂಡದ ನಂಬಿಕೆ. ಅದು ಮೂಢನಂಬಿಕೆಯಾಗದಿರಲಿ!
ಚಿತ್ರದ ನಿರ್ಮಾಪಕರು ಎಸ್.ವಿ.ಬಾಬು. ಹನಿಮೂನ್ ಯಾತ್ರೆಯಲ್ಲಿ ಎಸ್.ನಾರಾಯಣ್, ಜಗ್ಗೇಶ್ ಜೊತೆ ದೀಪು, ಸಂತೋಷಿ ಎಂಬ ಮಿಂಚುಳ್ಳಿಯಂತಹ ನಾಯಕಿಯರಿದ್ದಾರೆ. ಈ ಜೋಡಿ ಜೊತೆ ನಗೆಹಂಚಲು ರಂಗಾಯಣ ರಘು, ಶರಣ್, ಕೋಮಲ್, ಟೆನ್ನಿಸ್ ಕೃಷ್ಣ, ಮುಖ್ಯಮಂತ್ರಿ ಚಂದ್ರು, ಬಿರಾದಾರ್, ಸಾಧು ಕೋಕಿಲಾ, ಮಿಮಿಕ್ರಿ ದಯಾನಂದ್, ಬ್ಯಾಂಕ್ ಜನಾರ್ದನ್, ಕರಿಬಸವಯ್ಯ, ಉಮಾಶ್ರೀ, ರೇಖಾ ದಾಸ್ ಸೇರಿದಂತೆ ದೊಡ್ಡ ತಂಡವೇ ಇದೆ.
ಪೋಷಕ ಪಾತ್ರಗಳಲ್ಲಿ ಶ್ರೀನಾಥ್, ಸತ್ಯರಾಜ್, ಶೋಭರಾಜ್ ಇದ್ದಾರೆ. ನಾಗೇಂದ್ರ ಮಾಗಡಿ, ಕತೆ-ಚಿತ್ರಕತೆ-ಸಂಭಾಷಣೆ ಜೊತೆ ನಿರ್ದೇಶನದ ಹೊಣೆಯನ್ನು ನಿರ್ವಹಿಸಿದ್ದಾರೆ. ಆರ್.ಪಿ.ಪಟ್ನಾಯಕ್ ಸಂಗೀತ ಚಿತ್ರಕ್ಕಿದೆ.
Post your views
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications