»   » ಟಾಪ್‌ 5 ಕಚಗುಳಿ ಸಿ.ಡಿ.ಗಳು

ಟಾಪ್‌ 5 ಕಚಗುಳಿ ಸಿ.ಡಿ.ಗಳು

Posted By:
Subscribe to Filmibeat Kannada

ನಿತ್ಯವಿಡೀ ಫೈಲುಗಳ ನಡುವೆ ಹುದುಗಿಹೋಗುವ ಆಸಾಮಿ ಸಂಜೆ ಮನೆಗೆ ಹೋಗಿ ಶೂಸು ಬಿಚ್ಚುವುದಕ್ಕೂ ತಾತ್ಕಾಲಿಕ ವಿರಾಮ ಕೊಟ್ಟು, ಸೋಫಾ ಮೇಲೆ ಬೆನ್ನು ಹಾಸಿ, ಪಾಪ ಪಾಂಡು ನೋಡಿ ಹೊಟ್ಟೆ ಹುಣ್ಣಾಗುವಂತೆ ನಗುತ್ತಾನೆ. ಸಿಲ್ಲಿ ಎನಿಸಿದರೂ ಊಟದ ನಡುವೆ ನಂಚಿಕೆಗೆ ಉಪ್ಪಿನಕಾಯಿ ಥರ ಅಂತ ‘ಸಿಲ್ಲಿ ಲಲ್ಲಿ’ ಧಾರಾವಾಹಿಯ ಮ್ಯಾನರಿಸಂ ನೋಡಿ ಸಂತೋಷ ಪಡುತ್ತಾನೆ. ಚಾರ್ಲಿ ಚಾಪ್ಲಿನ್‌ ಯಾವತ್ತೂ ಹಳತಾಗುವುದೇ ಇಲ್ಲ. ಹಾಗೇ ನಮ್ಮ ಕೆಲವು ಕನ್ನಡ ಸಿನಿಮಾಗಳು ಕೂಡ.

ಅನಂತನಾಗ್‌ ಅಕ್ಷರಶಃ ಒಳ್ಳೆಯ ಕಾಮಿಡಿ ಪೀಸು ! ಅವರ ಜೊತೆಗೆ ಚಿನಕುರುಳಿ ಆನಂದ ಇದ್ದರೆ ಇನ್ನೂ ಸೊಗಸು. ಪೋಲಿತನದ ನಡುವೆಯೇ ಹ್ಯಾಪುಮೋರೆ ಹಾಕಿಕೊಂಡು ನಗಿಸುವ ಕಾಶಿನಾಥ್‌ ಕೂಡ ಯಾವುದೋ ಕಾರಣಕ್ಕೆ ಇಷ್ಟವಾಗಿಬಿಡುತ್ತಾರೆ. ‘ಗಣೇಶನ ಮದುವೆ’ ಸಿನಿಮಾ ಯಾವ ಚಾನೆಲ್‌ನಲ್ಲಿ ಎಷ್ಟು ಸಾರಿಯಾದರೂ ಪ್ರಸಾರವಾಗಲಿ, ಅದು ಗ್ಯಾರಂಟಿ ಕ್ಲಿಕ್ಕು. ಅಲ್ಲಲ್ಲಿ ಸಣ್ಣ ಪುಟ್ಟ ಕಾಮಿಡಿ ವರಸೆ ತೋರಿ ರವಿಚಂದ್ರನ್‌ ಕೂಡ ಗೆದ್ದಿದ್ದು ಉಂಟು.

ಇಷ್ಟೆಲ್ಲ ಪೀಠಿಕೆ ಯಾಕಪ್ಪಾ ಅಂದರೆ, ನಮ್ಮ ಅಂಗಡಿಯ ಕನ್ನಡ ಸಿ.ಡಿ. ಲೋಕದಲ್ಲಿ ಕಚಗುಳಿಯದ್ದೇ ಜೋರು ಭರಾಟೆ. ಅನಂತನಾಗ್‌ ಅಭಿಮಾನಿಗಳು ಜೋರಾಗಿದ್ದಾರೆ ಅಂತ ಮೊದಮೊದಲು ಅನಿಸಿದರೂ, ಬಹುತೇಕರು ಕೊಂಡುಕೊಳ್ಳಲು ಮುಗಿಬೀಳುತ್ತಿರುವುದು ತಮಾಷೆಯ ಹೂರಣ ಇಟ್ಟುಕೊಂಡ ಚಿತ್ರಕಥೆಗಳ ಸಿ.ಡಿ.ಗಳನ್ನು.

ಕಳೆದ ವಾರ ನಮ್ಮ ಅಂಗಡಿಯಲ್ಲಿ ಜೋರು ವ್ಯಾಪಾರ ಮಾಡಿದ ಟಾಪ್‌ 5 ಸಿ.ಡಿ.ಗಳೆಂದರೆ-
ಗೋಲ್‌ಮಾಲ್‌ ರಾಧಾಕೃಷ್ಣ (ಅನಂತನಾಗ್‌ ಕಚಗುಳಿ)
ಗೌರಿ ಗಣೇಶ (ಅನಂತ್‌ ಜೊತೆಗೆ ಪುಟ್ಟ ಪಟಾಕಿ ಆನಂದನೂ ಉಂಟು)
ಅನಂತನ ಅವಾಂತರ (ಕಾಶೀನಾಥ್‌ ಖದರು)
ನಾನೇನೂ ಮಾಡ್ಲಿಲ್ಲ (ಇದೂ ಅನಂತನಾಗ್‌ ಚಿತ್ರ)
ಗಡಿಬಿಡಿ ಗಂಡ (ರಮ್ಯಕೃಷ್ಣ , ರೋಜಾ ನಡುವೆ ರವಿಚಂದ್ರನ್‌ ಪರದಾಟ)

ನಮ್ಮ ಮಳಿಗೆಯಲ್ಲಿ ಜಗ್ಗೇಶ್‌ ನಗೆ ಚಿತ್ರಗಳಲ್ಲದೆ ಇನ್ನೂ ಅನೇಕ ಕಾಮಿಡಿ ಚಿತ್ರಗಳ ಸಿ.ಡಿ.ಗಳುಂಟು. ಕೊಂಡುಕೊಳ್ಳಿ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada