»   » ಬಾಲಿವುಡ್ ಕ್ರೈಂ ಡೈರಿ : ಯಾರು ಅಂದರ್ ಯಾರು ಬಾಹರ್?

ಬಾಲಿವುಡ್ ಕ್ರೈಂ ಡೈರಿ : ಯಾರು ಅಂದರ್ ಯಾರು ಬಾಹರ್?

Subscribe to Filmibeat Kannada


ಮೋನಿಕಾ ಬೇಡಿ : ಪಂಡಿತ ಜಿ ಪಂಡಿತ ಜಿ ಎಂದು ಟೊಂಕ ಕುಣಿಸುತ್ತ ಹಿಂದಿ ಚಿತ್ರಪ್ರೇಮಿಗಳ ಮೋಡಿ ಮಾಡಿದ್ದ ಭೂಗತದೊರೆ ಅಬುಸಲೇಂನ ದೊರೆಸಾನಿ ಮೋನಿಕಾ ಬೇಡಿ ಕೈಯಿಂದ ಬೇಡಿ ಕಳಚಿದೆ.

ನಕಲಿ ಪಾಸ್‌ಪೋರ್ಟ್ ಸೃಷ್ಟಿಸಿದ ಆರೋಪ ಹೊತ್ತು ಭೋಪಾಲ್‌ನಲ್ಲಿ ಎದುರಿಸುತ್ತಿದ್ದ ಮೊಕದ್ದಮೆಯಲ್ಲಿ ಬೇಡಿಗೆ ಸೋಮವಾರ ಖುಲಾಸೆಯಾಯಿತು.

ಡ್ಯಾನಿಷ್ ಬೇಗ್, ರುಬಿನಾ ಬೇಗ್ ಮತ್ತು ಫೌಜಿಯಾ ಓಸ್ಮಾನ್ ಎಂಬ ಕಲ್ಪಿತ ಹೆಸರುಗಳಲ್ಲಿ ಅಬು ಸಲೇಂ, ಆತನ ಹೆಂಡತಿ ಸಮೀರಾ ಮತ್ತು ಮೋನಿಕಾ ಬೇಡಿ ನಕಲಿ ಪಾಸ್‌ಪೋರ್ಟ್ ಹೊಂದಿದ್ದಕ್ಕಾಗಿ 2001ರಲ್ಲಿ ಬಂಧಿತರಾಗಿದ್ದರು.

ಸಂಜಯ್ ದತ್ : 1993ರ ಮುಂಬೈ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿರುವ ಆರೋಪಿಗಳ ಶಿಕ್ಷೆಯ ಪ್ರಕಟಣೆಯನ್ನು ತಡೆಹಿಡಿಯಬೇಕೆಂಬ ಕೋರಿಕೆಯನ್ನು ಟಾ‌‌ಡಾ ವಿಶೇಷ ನ್ಯಾಯಾಲಯ ತಳ್ಳಿಹಾಕಿದೆ.

ಸಂಜಯ್ ದತ್ ಸೇರಿದಂತೆ 24 ಆರೋಪಿಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಈ ಶಿಕ್ಷೆಯ ಪ್ರಕಟಣೆಯನ್ನು ತಡೆಹಿಡಿಯಬೇಕೆಂದು ಅರ್ಜಿ ಗುಜರಾಯಿಸಿದ್ದರು.

ಮಂಗಳವಾರದಿಂದ ಎಲ್ಲ 24 ಆರೋಪಿಗಳ ಶಿಕ್ಷೆ ಪ್ರಕಟಣೆಯ ಪ್ರಕ್ರಿಯೆ ಪ್ರಾರಂಭವಾಗಲಿದೆ.

ಸಂಜು ಬಾಬಾಗೆ ಯಾವ ಪ್ರಮಾಣದ ಶಿಕ್ಷೆಯಾಗುವುದೆಂಬ ಕುತೂಹಲ ಇಡೀ ಹಿಂದಿ ಚಿತ್ರರಂಗದಲ್ಲಿ ಮನೆಮಾಡಿದೆ.

ಸಲ್ಮಾನ್ ಖಾನ್ : ಭೂಗತ ಲೋಕದ ನಂಟಿಗೆ ಸಂಬಂಧಿಸಿದಂತೆ ರೆಕಾರ್ಡ್ ಮಾಡಲಾಗಿರುವ ಟೇಪ್‌ನಲ್ಲಿರುವ ಧ್ವನಿ ತಮ್ಮದಲ್ಲ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

4 ವರ್ಷಗಳ ಹಿಂದೆ ಅಂದಿನ ಗೆಳತಿ ಐಶ್ವರ್ಯ ರೈಳೊಂದಿಗೆ ಈ ಕುರಿತು ದೂರವಾಣಿಯಲ್ಲಿ ನಡೆಸಿದ ಸಂಭಾಷಣೆಯ ವಿವರ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದೆ.

ಪತ್ರಿಕೆಯಲ್ಲಿ ಪ್ರಕಟವಾದ ವಿವರಗಳು ಅಸಲಿ ಎಂದು ಪತ್ರಿಕೆ ಮೇಜು ಕುಟ್ಟಿ ಹೇಳುತ್ತಿದ್ದರೆ, ಅದು ನಕಲಿ ಧ್ವನಿ, ಪ್ರಚಾರ ಪಡೆಯಲು ಪತ್ರಿಕೆ ನಡೆಸಿದ ಕುತಂತ್ರ ಎಂದು ಸಲ್ಲು ಮೀಂಯಾ ಹೂಂಕಸಿರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada