»   » ಕನ್ನಡದ ಕಂದ ಗೆದ್ದ ಆ ಖುಷಿಯಲ್ಲಿ ಬರ್ತಿದ್ದಾನೆ ಶುಕ್ರ!

ಕನ್ನಡದ ಕಂದ ಗೆದ್ದ ಆ ಖುಷಿಯಲ್ಲಿ ಬರ್ತಿದ್ದಾನೆ ಶುಕ್ರ!

Subscribe to Filmibeat Kannada


ಕಳೆದ ವರ್ಷ ಕನ್ನಡದ ಕಂದನನ್ನು ಕನ್ನಡಿಗರು ಕೈಬಿಡಲಿಲ್ಲ. ಚಿತ್ರದ ಯಶಸ್ಸಿನಿಂದ ಪ್ರೇರಣೆ ಪಡೆದು, ಮುಂದೆಯೂ ಕನ್ನಡಾಭಿಮಾನಿಗಳು ಕೈಬಿಡುವುದಿಲ್ಲ ಎಂಬ ನಂಬಿಕೆ ಇಟ್ಟು , ಶುಕ್ರ ಚಿತ್ರದಲ್ಲಿ ವಿನೋದ್ ರಾಜ್ ಅಭಿನಯಿಸಿದ್ದಾರೆ. ಅವರಮ್ಮ ಲೀಲಾವತಿ ದುಡ್ಡು ಸುರಿದಿದ್ದಾರೆ.

ಅಭಿಮಾನಿಗಳಿಗೆ ಬೇಕಾದ ನೃತ್ಯ, ಯುವಕರಿಗೆ ಬೇಕಾದ ಹೊಡೆದಾಟ, ಮಹಿಳೆಯರಿಗೆ ಬೇಕಾದ ಸೆಂಟಿಮೆಂಟ್, ಲಘು ಹಾಸ್ಯ ಮೇಳೈಸಿರುವ ಶುಕ್ರ ಗೆದ್ದೇಗೆಲ್ಲುತ್ತದೆ ಎನ್ನುತ್ತಾರೆ ಲೀಲಾವತಿ.

ಜಿ.ಕೆ.ಮುದ್ದುರಾಜ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಸದ್ಯದಲ್ಲಿಯೇ ತೆರೆಗೆ ಬರಲಿದೆ. ಮನಮುಟ್ಟುವ ಭಾವನಾತ್ಮಕ ದೃಶ್ಯವನ್ನು ಇತ್ತೀಚೆಗೆ ರಾಜರಾಜೇಶ್ವರಿ ನಗರದಲ್ಲಿ ಚಿತ್ರೀಕರಿಸಲಾಯಿತು. ಲೀಲಾವತಿ, ವಿನೋದ್ ರಾಜ್, ಅಶ್ವಥ್, ಮೋಹನ್ ರಾಜ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

ಮಲ್ಲಿಕಾರ್ಜುನ್ ಛಾಯಾಗ್ರಾಹಣ, ಗೌತಮ್ ಸಂಗೀತ, ಶ್ರೀನಿವಾಸ್ ಕೌಶಿಕ್ ಸಂಭಾಷಣೆಯನ್ನು ಚಿತ್ರ ಹೊಂದಿದೆ. ಶುಕ್ರ ನಾಯಕಿ ಪಾತ್ರದಲ್ಲಿ ಪ್ರಿಯಾ ದೀಕ್ಷಿತ್ ಅಭಿನಯಿಸಿದ್ದಾರೆ. ಬಿರಾದಾರ್, ರಂಗಸ್ವಾಮಿ, ಸುಬ್ರಹ್ಮಣ್ಯ, ರವಿ ಮತ್ತಿತರರು ತಾರಾಬಳಗದಲ್ಲಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada