»   » ಜುಲೈ 18ರಿಂದ ಬೆಂಗಳೂರಿನಲ್ಲಿ ಮಕ್ಕಳ ಚಲನಚಿತ್ರೋತ್ಸವ

ಜುಲೈ 18ರಿಂದ ಬೆಂಗಳೂರಿನಲ್ಲಿ ಮಕ್ಕಳ ಚಲನಚಿತ್ರೋತ್ಸವ

Posted By: Super
Subscribe to Filmibeat Kannada

ಬೆಂಗಳೂರು: ಜುಲೈ 18ರಿಂದ ಆರು ದಿನಗಳ ಕಾಲ ನಗರದಲ್ಲಿ ಮಕ್ಕಳ ಚಲನಚಿತ್ರೋತ್ಸವವನ್ನು ಆಯೋಜಿಸಲಾಗಿದೆ.

ನಗರದ ಆಯ್ದ 20 ಚಿತ್ರ ಮಂದಿರಗಳಲ್ಲಿ 15 ಮಕ್ಕಳ ಚಿತ್ರಗಳನ್ನು ಪ್ರತಿದಿನ ಬೆಳಗ್ಗೆ 8.30ರಿಂದ 10.30ರ ವರೆಗೆ ಪ್ರದರ್ಶಿಸಲಾಗುವುದು ಎಂದು ನಗರದ ಜಿಲ್ಲಾಧಿಕಾರಿ ಡಾ. ಡಿ. ಎಸ್‌. ಅಶ್ವತ್ಥ್‌ ಸೋಮವಾರ ತಿಳಿಸಿದ್ದಾರೆ.

18ರಂದು ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ಶಂಕರ್‌ನಾಗ್‌ ಚಿತ್ರ ಮಂದಿರದಲ್ಲಿ ಚಿತ್ರೋತ್ಸವ ಉದ್ಘಾಟನೆಗೊಳ್ಳಲಿದೆ. ವಾರ್ತಾ ಸಚಿವ ಕಾಗೋಡು ತಿಮ್ಮಪ್ಪ ಚಿತ್ರೋತ್ಸವ ಉದ್ಘಾಟಿಸುವರು. ಉದ್ಘಾಟನೆಯ ನಂತರ ಅಂತರ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮಕ್ಕಳ ಚಿತ್ರ 'ಹೆಲೋ"ವನ್ನು ಪ್ರದರ್ಶಿಸಲಾಗುತ್ತದೆ ಎಂದು ಅಶ್ವತ್ಥ್‌ ಹೇಳಿದರು.

ಚಿತ್ರೋತ್ಸವದಲ್ಲಿ 7 ಕನ್ನಡ ಮತ್ತು 7 ಹಿಂದಿ ಚಿತ್ರಗಳು ಹಾಗೂ 1 ಇಂಗ್ಲಿಷ್‌ ಚಿತ್ರಪ್ರದರ್ಶನ ಇರುತ್ತದೆ. ಪ್ರತಿ ಮಗುವಿಗೆ ತಲಾ 5 ರೂಪಾಯಿ ಪ್ರವೇಶ ಶುಲ್ಕ ನಿಗದಿ ಪಡಿಸಲಾಗಿದೆ. ನಗರದ ಗಣೇಶ, ಪುಷ್ಪಾಂಜಲಿ, ಕಾವೇರಿ, ಮುರಳಿ, ಗೋವರ್ಧನ, ಭಾರತಿ, ಪುಟ್ಟಣ್ಣ, ಕಾಮಾಕ್ಯ, ಶ್ರೀನಿವಾಸ್‌, ವೆಂಕಟೇಶ್ವರ್‌, ಪಲ್ಲವಿ, ಸಿದ್ಧಲಿಂಗೇಶ್ವರ, ಶ್ರೀಕೃಷ್ಣ, ಆದರ್ಶ, ನವರಂಗ, ನಾಗ, ಮುಕುಂದ, ಮೂವಿಲ್ಯಾಂಡ್‌, ವೀರೇಶ್‌ ಚಿತ್ರ ಮಂದಿರದಲ್ಲಿ ಮಕ್ಕಳ ಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿದೆ.(ಇನ್ಪೋ ವಾರ್ತೆ)

English summary
Children film fest to held in Bangalore from July 18th

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada