»   » ಧಣಿ ಚಿತ್ರದ ಗಿಣಿ ವಿನೀತಾ ಬಂಧನ

ಧಣಿ ಚಿತ್ರದ ಗಿಣಿ ವಿನೀತಾ ಬಂಧನ

Subscribe to Filmibeat Kannada

ಒಂದು ಕಾಲದಲ್ಲಿ ‘ಧಣಿ’, ‘ಮಾನವ 2025’ ಎಂಬ ಕನ್ನಡದ ತೋಪು ಚಿತ್ರಗಳಲ್ಲಿ ಬಿಂದಾಸ್‌ ಆಗಿ ಅಭಿನಯಿಸಿದ್ದ ನಾಯಕಿ ವಿನೀತ, ವೇಶ್ಯಾವಾಟಿಕೆ ಚಟುವಟಿಕೆಯಲ್ಲಿ ಶಾಮೀಲಾಗಿರುವ ಆರೋಪದ ಕಾರಣ ಚೆನ್ನೈ ಪೊಲೀಸರ ಅತಿಥಿಯಾಗಿದ್ದಾಳೆ.

ಸ್ವಾತಂತ್ರ್ಯ ದಿನಾಚರಣೆಗೆ ಎರಡು ದಿನ ಮುಂಚೆ ವಿನೀತ, ಆಕೆಯ ಅಮ್ಮ, ಅಣ್ಣ ಮತ್ತು ಒಬ್ಬ ಗಿರಾಕಿಯನ್ನು ಪೊಲೀಸರು ಬಂಧಿಸಿದರು. ಪೊಲೀಸರ ಟಾರ್ಗೆಟ್‌ ವಿನೀತಾ ಆಗಿರಲಿಲ್ಲ. ಬದಲಿಗೆ ಆಕೆಯ ಅಣ್ಣ ಪಿಂಪ್‌ ಎಂಬ ಅನುಮಾನ ಅವರು ಆತನನ್ನು ಬೆನ್ನಟ್ಟಲು ಕಾರಣವಾಯಿತು. ಬುಧವಾರ ರಾತ್ರಿ ಕೊರಿಯಾದ ಒಬ್ಬ ವ್ಯಾಪಾರಿಯ ಜತೆ ವ್ಯವಹಾರ ಕುದುರಿಸಿಕೊಂಡು ಕೋಣೆಯಾಂದಕ್ಕೆ ಪೊಲೀಸರು ಅನುಮಾನಿಸಿದ್ದ ವ್ಯಕ್ತಿ ಕರೆದೊಯ್ದ. ಅಲ್ಲಿ ವಿನೀತಾ ಇದ್ದದ್ದು ನೋಡಿ ಪೊಲೀಸರಿಗೇ ಅಚ್ಚರಿ. ಆಮೇಲೆ ಗೊತ್ತಾಯಿತು, ಆ ಪಿಂಪ್‌ ವಿನೀತಾಳ ಅಣ್ಣ ಅಂತ.

ಚೆನ್ನೈನಲ್ಲಿ ಸಣ್ಣ ಪುಟ್ಟ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಇನ್ನೂ ಇಬ್ಬರು ನಟಿಯರನ್ನು ಪೊಲೀಸರು ಬೇರೆ ದಾಳಿಯಲ್ಲಿ ಬಂಧಿಸಿದ್ದಾರೆ.

ಕನ್ನಡದ ಚಿತ್ರಗಳಲ್ಲಷ್ಟೇ ಅಲ್ಲದೆ ತೆಲುಗು ಹಾಗೂ ತಮಿಳು ಪ್ರೇಕ್ಷಕರಿಗೂ ವಿನೀತಾ ಪರಿಚಿತ ನಟಿ. ವೆಂಕಟೇಶ್‌ ನಾಯಕನಾಗಿದ್ದ ತೆಲುಗು ಚಿತ್ರ ‘ಇಂಟ್ಲೋ ಇಲ್ಲಾಡು ವಂಟಿಂಟ್ಲೋ ಪ್ರಿಯರಾಲು’ ಹಾಗೂ ರಾಜೇಂದ್ರಪ್ರಸಾದ್‌ ಅಭಿನಯದ ‘ಲೇಡೀಸ್‌ ಡಾಕ್ಟರ್‌ ’ ಚಿತ್ರಗಳಲ್ಲಿ ವಿನೀತಾ ನಟಿಸಿದ್ದಳು.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada