»   » ರಾಮ್‌ ಚೊಚ್ಚಿಲ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ

ರಾಮ್‌ ಚೊಚ್ಚಿಲ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ

Posted By: Super
Subscribe to Filmibeat Kannada
Preethi Prema Pranaya
2003 ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪಶಸ್ತಿಗಳು ಪ್ರಕಟವಾಗಿದ್ದು , ಗಾಯಕ ರಾಮ್‌ಪ್ರಸಾದ್‌ ನಿರ್ಮಾಣದ ಪ್ರೀತಿ ಪ್ರೇಮ ಪ್ರಣಯ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ. 'ಮೌನಿ' ಚಿತ್ರದ ನಟನೆಗಾಗಿ ಎಚ್‌.ಜಿ.ದತ್ತಾತ್ರೇಯ ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ತೀರ್ಪುಗಾರರ ಮಂಡಳಿಯ ಅಧ್ಯಕ್ಷ ಖ್ಯಾತ ನಿರ್ದೇಶಕ ಬಸು ಚಟರ್ಜಿ ಆ.14ರಂದು ನವದೆಹಲಿಯಲ್ಲಿ 2003ರ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದರು. ತೀಪುಗಾರರ ಸಮಿತಿಯಲ್ಲಿದ್ದ ಕನ್ನಡ ನಟಿ ಸುಮಲತಾ ಮತ್ತು ನಿರ್ಮಾಪಕ ಮೋಹನ ಕೊಂಡಜ್ಜಿ ಸೇರಿದಂತೆ ತೀಪುಗಾರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಶಸ್ತಿ ವಿವರಗಳು : ರಾಷ್ಟ್ರೀಯ ಪ್ರಶಸ್ತಿಯ ದೃಷ್ಟಿಯಲ್ಲಿ 2003 ಕನ್ನಡ ಚಿತ್ರರಂಗದ ಪಾಲಿಗೆ ಅತ್ಯಂತ ನಿರಾಶೆಯ ವರ್ಷ. 'ಮೌನಿ' ಚಿತ್ರದ ನಟ ಎಚ್‌.ಜಿ. ದತ್ತಾತ್ರೇಯ ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ಮಲಯಾಳಿ ನಟ ನೆಡುಮುಡಿ ವೇಣು ಜತೆ ಹಂಚಿಕೊಂಡಿದ್ದಾರೆ. 'ಪ್ರೀತಿ ಪ್ರೇಮ ಪ್ರಯಣ 'ದ ನಿರ್ದೇಶಕಿ ಕವಿತಾ ಲಂಕೇಶರಿಗೆ ್ಫರಾಷ್ಟ್ರಪ್ರಶಸ್ತಿಯ ಹರ್ಷ. ಇವೆರಡು ಹೊರತುಪಡಿಸಿದರೆ ಕನ್ನಡದ ಪಾಲಿಗೆಗೆ ದೊಡ್ಡದೊಂದು ಶೂನ್ಯ.

ಇತರ ಪ್ರಶಸ್ತಿಗಳು ಕೆಳಗಿನಂತಿವೆ-

ಅತ್ಯುತ್ತಮ ಚಲನಚಿತ್ರ - ಶ್ವಾಸ್‌ (ಸಾವಂತ್‌ ನಿರ್ದೇಶನದ ಮರಾಠಿ ಚಿತ್ರ),
ಅತ್ಯುತ್ತಮ ನಿರ್ದೇಶಕ - ಬಂಗಾಳಿ ನಿರ್ದೇಶಕ ಗೌತಮ್‌ ಘೋಷ್‌ ,
ಅತ್ಯುತ್ತಮ ನಟ - ವಿಕ್ರಮ್‌ (ತಮಿಳು ಚಿತ್ರ-ಪಿತಾಮಗನ್‌ )
ಅತ್ಯುತ್ತಮ ನಟಿ- ಮೀರಾ ಜಾಸ್ಮಿನ್‌ (ಮಲಯಾಳಿ ಚಿತ್ರ -'ಪದಮ್‌ ಒನ್ನು ಒರು ವಿಲಾಪಮ್‌),
ಅತ್ಯುತ್ತಮ ಪೋಷಕ ನಟ -ಪಂಕಜ್‌ ಕಪೂರ್‌(ಹಿಂದಿ ಚಿತ್ರ-ಮಕ್ಭೂಲ್‌) ,
ಅತ್ಯುತ್ತಮ ಪೋಷಕ ನಟಿ -ಶರ್ಮಿಳಾ ಟಾಗೋರ್‌(ಬಂಗಾಲಿ ಚಿತ್ರ- ಅಬೋರ್‌ ಅರಣ್ಯ ),
ಉತ್ತಮ ಬಾಲನಟ- ಅಶ್ವಿನಿ ಚಿತಾಲೆ (ಶ್ವಾಸ್‌),
ಜನಪ್ರಿಯ ಚಲನಚಿತ್ರ ಪ್ರಶಸ್ತಿ- ಮುನ್ನಭಾಯಿ ಎಂಬಿಬಿಎಸ್‌(ಹಿಂದಿ),
ಉತ್ತಮ ಹಿನ್ನೆಲೆ ಗಾಯಕ - ಸೋನು ನಿಗಮ್‌ (ಕಲ್‌ ಹೋ ನ ಹೋ ),
ಉತ್ತಮ ಹಿನ್ನೆಲೆ ಗಾಯಕಿ - ತೊರಾಲಿ ಶರ್ಮಾ(ಆಸ್ಸಾಮಿ ಚಿತ್ರ -ಆಕಾಶಿತೊರಾರ ಕೊಥಾರೆ),
ಸಾಮಾಜಿಕ ಹಿನ್ನಲೆ ಉತ್ತಮ ಚಿತ್ರ ಪ್ರಶಸ್ತಿ-ಹಿಂದಿ ಚಿತ್ರ ಕೊಯಿ ಮಿಲ್‌ ಗಯಾ,
ಉತ್ತಮ ಹಿನ್ನೆಲೆ ಸಂಗೀತ- ಶಂಕರ್‌ ಮಹಾದೇವನ್‌, ಅಲಾಸಿಯಸ್‌ ಮೆಂಡೋನ್ಸಾ ಮತ್ತು ಈಶಾನ್‌ ನೂರಾನಿ (ಚಿತ್ರ -ಕಲ್‌ ಹೊ ನ ಹೋ),
ಚೊಚ್ಚಲ ನಿರ್ದೇಶನದ ಉತ್ತಮ ಚಿತ್ರ - ಮಾರ್ಗಂ (ರಾಜೀವ್‌ ವಿಜಯ್‌ ರಾಘವನ್‌ ನಿರ್ದೇಶನದ ಮಲಯಾಳಂ ಚಿತ್ರ),
ರಾಷ್ಟ್ರೀಯ ಏಕತೆಯ ಮೇಲಿನ ಉತ್ತಮ ಚಿತ್ರಕ್ಕಾಗಿ ನೀಡಲಾಗುವ ನರ್ಗಿಸ್‌ದತ್‌ ಪ್ರಶಸ್ತಿ-ಪಿಂಜರ್‌(ನಿರ್ದೇಶಕ ಡಾ.ಚಂದ್ರಪ್ರಕಾಶ್‌ ದ್ವಿವೇದಿ ),
ಉತ್ತಮ ಮಕ್ಕಳ ಚಿತ್ರ - ತೊರಾ (ಖ್ಯಾತ ಆಸ್ಸಾಮಿ ನಿರ್ದೇಶಕ ಜಾನು ಬರುವ),
ಕುಟುಂಬ ಕಲ್ಯಾಣ ಮೇಲಿನ ಉತ್ತಮ ಚಿತ್ರ ಪ್ರಶಸ್ತಿ-ಪದಮ್‌ ಒನ್ನು ಒರು ವಿಲಾಪಮ್‌(ಮಲಯಾಳಿ ಚಿತ್ರ).

ಉತ್ತಮ ಪ್ರಾದೇಶಿಕ ಚಿತ್ರಗಳು: ಅಸ್ಸಾಮಿ-ಅಕಾಸಿತೊರಾರ್‌ ಕೊಥಾರೆ(ನಿರ್ದೇಶಕ -ಮಂಜು ಬೋರಾ ),ಬಂಗಾಳಿ-ಚೋಕರ್‌ ಬಾಲಿ( ನಿರ್ದೇಶಕ - ರಿತುಪರ್ಣ ಘೋಷ್‌),ಹಿಂದಿ- ರಘು ರೋವಿಯೋ, ಕನ್ನಡ -ಪ್ರೀತಿ ಪ್ರೇಮ ಪ್ರಣಯ (ನಿರ್ದೇಶಕಿ-ಕವಿತಾ ಲಂಕೇಶ), ಮಲಯಾಳಿ-ಸಬಲಂ (ನಿರ್ದೇಶಕ-ಅರೋೕಕ ಆರ್‌.ನಾಥ್‌), ಮರಾಠಿ- ನಾಟ ಓನ್ಲಿ ಮಿಸಸ್‌ರಾವತ್‌(ನಿ-ಗಜೇಂದ್ರ),ಒರಿಯಾ -ಆ ಅಕ್ಕಾರೆ ಆ (ನಿ-ಸುಭಾಷ್‌ದಾಸ್‌), ತಮಿಳು-ಇಯರ್ಕೈ (ನಿ-ಎಸ್‌.ಪಿ. ಜೋನಾತನ್‌), ತೆಲಗು- ಐತೆ(ನಿ-ಚಂದ್ರಶೇಖರ್‌ಏಲೆತಿ), ಇಂಗ್ಲೀಷ್‌-ಡನ್ಸ್‌ ಲೈಕ್‌ ಮ್ಯಾನ್‌(ನಿ-ಪಮೇಲಾ ರೂಕ್ಸ್‌) ಗಳು ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿವೆ.
(ಇನ್ಫೋ ವಾರ್ತೆ)

English summary
51st National Film Awards. Ramprasad's Preethi Prema Pranaya wins Best Regional award. H.G. Dattatreya getting a special jury award for his role in Mouni

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada