»   » ರಮೇಶ್‌ ನಿರ್ದೇಶನದಲ್ಲಿ ರೋಚಕ-ರೋಮಾಂಚಕ ಸಿನಿಮಾ!

ರಮೇಶ್‌ ನಿರ್ದೇಶನದಲ್ಲಿ ರೋಚಕ-ರೋಮಾಂಚಕ ಸಿನಿಮಾ!

Subscribe to Filmibeat Kannada

‘ರಾಮ ಶಾಮ ಭಾಮ’ದ ಮೂಲಕ ನಿರ್ದೇಶನಕ್ಕೆ ಅಡಿಯಿಟ್ಟ ನಟ ರಮೇಶ್‌ ಈಗ ಮತ್ತೊಂದು ಭರ್ಜರಿ ಚಿತ್ರ ನಿರ್ದೇಶಿಸುವ ಸಿದ್ಧತೆಯಲ್ಲಿದ್ದಾರೆ. ಜಯನಗರದ ಕಾಸ್ಮೋಪಾಲಿಟನ್‌ ಕ್ಲಬ್‌ನಲ್ಲಿ ನಡೆದ, ‘ನೀನೆಲ್ಲೊ ನಾನಲ್ಲೆ’ ಚಿತ್ರದ ಸಂತೋಷಕೂಟದಲ್ಲಿ ಸ್ವತಃ ಅವರು ಈ ಕುರಿತು ಹೇಳಿದರು.

ಇದೊಂದು ರೋಚಕ, ರೋಮಾಂಚಕ ಚಿತ್ರ ಮಾತ್ರವಲ್ಲ, ಬಹುತಾರಾಗಣವನ್ನೂ ಒಳಗೊಂಡಿರುತ್ತದೆ. ಈ ನಿಟ್ಟಿನಲ್ಲಿ ಡಾ.ವಿಷ್ಣುವರ್ಧನ್‌ ಹಾಗೂ ರವಿಚಂದ್ರನ್‌ ಅವರಂತಹ ತಾರೆಗಳೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ನನ್ನ ಮಟ್ಟಿಗಂತೂ ಇದು ಚಿಕ್ಕ ಯೋಜನೆಯಲ್ಲ ಎಂದರು.

ನಿರ್ದೇಶಕರಾಗಿ ತಾವು ಪಡೆದ ಯಶಸ್ಸನ್ನು ವಿವರಿಸಿದ ರಮೇಶ್‌, ರಾಜ್ಯದಲ್ಲಿ ಮಾತ್ರವಲ್ಲ ಪರದೇಶದಲ್ಲೂ ‘ರಾಮ ಶಾಮ ಭಾಮ’ ಗೆದ್ದಿದೆ. ವರದಿಗಳ ಪ್ರಕಾರ, ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ‘ಅಮೆರಿಕಾ ಅಮೆರಿಕಾ’ ನಂತರ ಹೆಚ್ಚು ದಿನ ಓಡಿದ ಎರಡನೇ ಚಿತ್ರ ಎಂದರೆ ಇದೇ. ರೀಮೇಕ್‌ ಪಕ್ಕಕ್ಕಿಟ್ಟು ನನ್ನ ಮುಂದಿನ ಚಿತ್ರಗಳಿಗೆ ಕಾದಂಬರಿಗಳನ್ನು ಆಯ್ದುಕೊಳ್ಳುತ್ತಿದ್ದೇನೆ ಎಂದರು.

ರಮೇಶ್‌ ಸದ್ಯಕ್ಕೆ, ಕೆ.ಇ.ಚೆನ್ನಗಂಗಪ್ಪ ನಿರ್ಮಾಣ ಹಾಗೂ ನಿರ್ದೇಶನದ ‘ಸೌಂದರ್ಯ’ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. (ಈ ಚಿತ್ರದ ನಾಯಕಿ ಸಾಕ್ಷಿ ಶಿವಾನಂದ್‌). ಮತ್ತೊಂದು ಕಡೆ, ಎಸ್‌.ವಿ.ಬಾಬು ನಿರ್ಮಾಣ, ನಾಗೇಂದ್ರ ಮಾಗಡಿ ನಿರ್ದೇಶನದ ‘ತೆನಾಲಿರಾಮ’ ಚಿತ್ರದಲ್ಲಿ ಯಶಸ್ವೀ ಹಾಸ್ಯ ನಟ ಜಗ್ಗೇಶ್‌ರೊಂದಿಗೆ ಅಭಿನಯಿಸುತ್ತಿದ್ದಾರೆ. ಇದಲ್ಲದೆ ಬಾಲಿವುಡ್‌ ನಿರ್ದೇಶಕ ಸಚಿನ್‌ ನಿರ್ದೇಶನದ ‘ಏಕದಂತ’ ಚಿತ್ರದಲ್ಲಿ ವಿಷ್ಣುವರ್ಧನ್‌ರೊಂದಿಗೆ ನಟಿಸುತ್ತಿದ್ದಾರೆ.

Post your views
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada